Advertisement
ಮನುಷ್ಯನಿಗೆ ಆರೋಗ್ಯ ಚೆನ್ನಾಗಿದ್ದರೆ ಜಗತ್ತು ಸುಂದರ. ಅದೇ ಆರೋಗ್ಯ ಹದಗೆಟ್ಟು ಬಿಟ್ಟರೆ, ಬದುಕು ನರಕವೇ ಸರಿ. ಕೆಲವೊಂದು ಕಾಯಿಲೆಗಳು ಯಾತನೆಯಲ್ಲಿ ನರಳುವಂತೆ ಮಾಡುತ್ತದೆ. ನಾವು ಸೇವಿಸುವ ಆಹಾರದಲ್ಲಿ ನಮ್ಮ ಆರೋಗ್ಯವಿದೆ. ಆಹಾರ ಸತ್ವಭರಿತವಾಗಿರಬೇಕು ಮತ್ತು ಪೋಷಕಾಂಶಯುಕ್ತವಾಗಿರಬೇಕು. ಇಂದಿನ ದಿನಗಳಲ್ಲಿ ಕಲಬೆರಕೆ ಮತ್ತು ರಾಸಾಯನಿಕಗಳೇ ಹೆಚ್ಚು.
Related Articles
Advertisement
ಇಂದಿನ ದಿನಗಳಲ್ಲಿ ಮಣ್ಣಿನ ಮಡಕೆಗಳು ಕಣ್ಮರೆಯಾಗುತ್ತಿದೆ. ಇಂದು ಇವು ಕೇವಲ ಅಗತ್ಯ ಶಾಸ್ತ್ರ ಸಂಪ್ರದಾಯಗಳಿಗೆ, ಅಲಂಕಾರಿಕ ವಸ್ತುವಾಗಿ ಮಾತ್ರ ಬಳಸಲಾಗುತ್ತಿದೆ. ಈ ಮಣ್ಣಿನ ಮಡಕೆಯಲ್ಲಿ ಮಾಡಿದ ಆಹಾರ ಖಾದ್ಯಗಳು ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದೇ ಕಾರಣದಿಂದ ನಮ್ಮ ಪೂರ್ವಜರು ಆರೋಗ್ಯವಂತರಾಗಿರುತ್ತಿದ್ದರು. ಆದರೆ ಇಂದಿನ ಯುಗದ ಜನರು ಬಗೆ ಬಗೆಯ ಕಾಯಿಲೆಗಳಿಂದ ಬಳಲುತ್ತಿದ್ದಾರೆ.
ಮಣ್ಣು ನಮ್ಮ ಜೀವ ಉಳಿಸುವ ಸಂಜೀವಿನಿ. ಮಣ್ಣು ನಮ್ಮ ಜೀವ ಮತ್ತು ಜೀವನದ ಸಾರ. ಇನ್ನಾದರೂ ಮಣ್ಣಿನ ಮಡಕೆಗಳು ಉಸಿರಾಡಲಿ. ಒಳ್ಳೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಮಣ್ಣಿನ ಮಡಕೆಗಳನ್ನು ಬಳಸುವುದು ಅತ್ಯಗತ್ಯ.
- ವಾಣಿ
ಮೈಸೂರು