Advertisement

ಧಾರವಾಡದ ಮಣ್ಣಿನಲ್ಲಿದೆ ಕಲೆಯ ಸತ್ವ : ಕುಂಬಿ

02:19 PM Oct 25, 2021 | Team Udayavani |

 

Advertisement

ಧಾರವಾಡ: ಇಲ್ಲಿನ ಮಣ್ಣಿನಲ್ಲಿಯೇ ಸಂಗೀತ, ಸಾಹಿತ್ಯ ಹಾಗೂ ಕಲೆಯ ಸತ್ವ ಅಡಗಿದೆ ಎಂದು ಹಿರಿಯ ಪರಿಸರವಾದಿ ಶಂಕರ ಕುಂಬಿ ಹೇಳಿದರು.

ರಂಗಾಯಣ ಸುವರ್ಣ ಸಾಂಸ್ಕೃತಿಕ ಸಮುತ್ಛಯದಲ್ಲಿ ಕಸ್ತೂರಿ ಕನ್ನಡ ಜಾನಪದ ಕಲಾ ತಂಡವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಧಾರವಾಡದಲ್ಲಿ ಕಲಾ ಪ್ರದರ್ಶನ ಮಾಡಿದರೆ ಜೀವನ ಸಾರ್ಥಕವಾಗುವುದು ಎಂಬ ಭಾವ ರಾಷ್ಟ್ರ-ಅಂತಾರಾಷ್ಟ್ರೀಯ ಕಲಾವಿದರ ಮನದಲ್ಲಿ ಅಭಿವ್ಯಕ್ತವಾಗುತ್ತದೆ. ಅನ್ನುವಷ್ಟರ ಮಟ್ಟಿಗೆ ಸಂಗೀತ ಪರಂಪರೆಯಲ್ಲಿ ಧಾರವಾಡ ಜಿಲ್ಲೆ ತನ್ನದೇ ಆದ ಮೇಲ್ಪಂಕ್ತಿಯ ಸ್ಥಾನ ಹೊಂದಿದೆ. ಧಾರವಾಡದ ಮನೆ ಮನೆಗಳಲ್ಲೂ ಸಂಗೀತ ಹಾಗೂ ಕಲೆಯ ಪರಿಮಳ ಪಸರಿಸುತ್ತಿರುವುದು ಹೆಮ್ಮಯ ಸಂಗತಿ ಎಂದರು.

ಶ್ರೀ ಕುಮಾರೇಶ್ವರ ಕಲ್ಚರಲ್‌ ಸೊಸೈಟಿ ಅಧ್ಯಕ್ಷ ಪ್ರಕಾಶ ಬಾಳಿಕಾಯಿ ಮಾತನಾಡಿ, ಸರ್ವ ಮಂಗಳ ವಾದ್ಯಗಳಲ್ಲಿ ಶಹನಾಯಿ ವಾದ್ಯವು ಅಗ್ರಸ್ಥಾನ ಪಡೆಯುತ್ತದೆ. ಈ ಶಹನಾಯಿ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಭಜಂತ್ರಿ ಪರಿವಾರದವರ ಕೊಡುಗೆ ಅನನ್ಯವಾದುದು. ನಾವಿಂದು ಇಂತಹ ವಿಶಿಷ್ಟ ಕಲೆಗಳನ್ನು ಪ್ರೋತ್ಸಾಹಿಸಿ ಬೆಳೆಸುವುದು ಅಗತ್ಯವಾಗಿದೆ ಎಂದು ಹೇಳಿದರು.

Advertisement

ಗಾಯಕ ಬಸವರಾಜ ಹೂಗಾರ, ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್‌ ಅಧ್ಯಕ್ಷ ಸಂಜೀವ ದುಮ್ಮಕನಾಳ, ಕನ್ನಡ ಕಸ್ತೂರಿ ಜಾನಪದ ಕಲಾತಂಡದ ಅಧ್ಯಕ್ಷೆ ಮಾಹಾದೇವಿ ಅಮರಣ್ಣವರ, ಉದಯೋನ್ಮುಖ ಶಹನಾಯಿ ಕಲಾವಿದ ಶ್ರೀಧರ ಭಜಂತ್ರಿ ಇದ್ದರು.

ಇದನ್ನೂ ಓದಿ: ಕಡಬ: ನೂಜಿಬಾಳ್ತಿಲ ಶಾಲೆಯಲ್ಲಿ ಗ್ಯಾಸ್ ಸೋರಿಕೆ; ತಪ್ಪಿದ ದುರಂತ

ಕಲಾಪೋಷಕರಾದ ಶಂಕರ ಕುಂಬಿ, ಪ್ರಕಾಶ ಬಾಳಿಕಾಯಿ, ಸಂಜೀವ ದುಮ್ಮಕನಾಳ, ಬಸವರಾಜ ಹೂಗಾರ ಅವರನ್ನು ಸನ್ಮಾನಿಸಲಾಯಿತು. ವೈಷ್ಣವಿ ದೇಶಪಾಂಡೆ ನಿರೂಪಿಸಿದರು. ಶ್ರೀಧರ ಭಜಂತ್ರಿ ಸ್ವಾಗತಿಸಿದರು. ಕೀರ್ತಿ ಪೂಜಾರಿ ವಂದಿಸಿದರು. ನಂತರ ಜರುಗಿದ ಸಾಂಸ್ಕೃತಿಕ ಉತ್ಸವದಲ್ಲಿ ಶ್ರೀಧರ ಭಜಂತ್ರಿಯವರ ಶಹನಾಯಿ ವಾದನ, ಪ್ರಿಯಾಂಕಾ ಭಜಂತ್ರಿ ಅವರ ಸುಗಮ ಸಂಗೀತ, ವನಿತಾ ಕೆ. ಅವರ ಜಾನಪದ ಸಂಗೀತ, ಮಂಜುನಾಥ ಭಜಂತ್ರಿಯವರ ಕ್ಲಾರಿಯೋನೆಟ್‌ ವಾದನಕ್ಕೆ ತಬಲಾದಲ್ಲಿ ಮಣಿಕಂಠ ಸುಣಗಾರ, ರಾಹುಲ್‌ ಪಾಟೀಲ, ವಿಠ‍್ಠಲ ಭಜಂತ್ರಿ ಮತ್ತು ಸಹ ಶಹನಾಯಿ ವಾದನದಲ್ಲಿ ಕಿರಣ ಕಮ್ಮಾರ ಸಾಥ್‌ ನೀಡಿದರು. ಮಲೆಮಲ್ಲೇಶ ಹೂಗಾರ, ವಿನಾಯಕ ಇನಾಂದಾರ, ಸತೀಶ್‌ ಪಾಟೀಲ ದೇವೇಂದ್ರ ಭಜಂತ್ರಿ, ವಿನಿತ್‌, ಅಕ್ಷತಾ, ದೀಪಾ ಅಮರಣ್ಣವರ, ವಿಜಯಲಕ್ಷ್ಮೀ, ಪ್ರೇಮಾ ಭಜಂತ್ರಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next