ವಿಜಯಪುರ: ಕೊರೊನಾ 3ನೇ ಅಲೆ ಭೀತಿ ಎಲ್ಲೆಡೆಆವರಿಸಿದೆ. ಕೊರೊನಾ ಬಳಿಕ ಎಲ್ಲೆಡೆ ಸ್ವತ್ಛತೆಗೆಪ್ರಾಮುಖ್ಯತೆ ನೀಡಲಾಗಿದೆ. ಆದರೇ ವಿಜಯಪುರದ ರಸ್ತೆಬದಿಯಲ್ಲೇ ಕಸದ ರಾಶಿಯಿದ್ದು, ಕೊರೊನಾ ಜೊತೆಗೆಸಾಂಕ್ರಾಮಿಕ ಕಾಯಿಲೆ ಭೀತಿಯಲ್ಲಿ ವಿಜಯಪುರದ ಜನಬದುಕು ನಡೆಸುತ್ತಿದ್ದಾರೆ.
ಪಟ್ಟಣದ 8 ನೇ ವಾರ್ಡ್‌ನ ಸರೋವರ ಗಣಪತಿದೇಗುಲದ ಹಿಂಭಾಗದಲ್ಲಿರುವ ಒಣ ತ್ಯಾಜ್ಯ ಸಂಗ್ರಹಣಾಘಟಕವಿದೆ. ಈ ಘಟಕ ಒಣತ್ಯಾಜ್ಯ ಸಂಗ್ರಹ ನಾಮಫಲಕಹೊತ್ತು ಏಳೆಂಟು ವರ್ಷಗಳೇಕಳೆದಿದೆ.
ಆದರೇ ಈ ಘಟಕಊರಿನ ಉಪಯೋಗಕ್ಕೆ ಮಾತ್ರ ಬಂದಿಲ್ಲ.ಮಂತ್ರಕ್ಕಿಂತ ಉಗುಳೇ ಹೆಚ್ಚು ಅಂತಾರಲ್ಲ ಹಾಗೆಘಟಕದ ಮುಂಭಾಗವೇ ಕಸದ ರಾಶಿ ಹೆಚ್ಚಿದೆ. ಈರಸ್ತೆಯಲ್ಲಿ ಹಾದು ಹೋಗೋರಿಗೆ ಗಬ್ಬುನಾತಕ್ಕೆ ರಸ್ತೆಸಹವಾಸವೇ ಬೇಡ ಎಂದರೂ ವಿಧಿಯಿಲ್ಲದೇ ರಸ್ತೆಉದ್ದಕ್ಕೂ ಹಬ್ಬಿರುವ ದುರ್ವಾಸನೆಯಲ್ಲೇ ಮೂಗುಮುಚ್ಚಿಕೊಂಡು ಓಡಾಡುತ್ತಿದ್ದಾರೆ. ಮಲಿನಗಾಳಿ ಗ್ರಾಮಕ್ಕೆಕಂಟಕವಾಗಿದೆ.
ಮಳೆ ಬಿದ್ದರೆ ಕಸ ಕೊಳೆತು ನಾರುತ್ತದೆ.ಸುತ್ತಮುತ್ತಲೂ ಮನೆಗಳಿವೆ.ಇಲ್ಲಿನ ನಿವಾಸಿಗಳು ಸಾಕಷ್ಟುಬಾರಿ ಪುರಸಭೆಗೆ ದೂರು ನೀಡಿದ್ದಾರೆ. ಆದರೂ ಇಲ್ಲಿನಕಸದ ರಾಶಿ ಮಾತ್ರ ವಿಲೇವಾರಿ ಆಗಿಲ್ಲ.
ಅಕ್ಷಯ್ ವಿ. ವಿಜಯಪುರ