Advertisement

ಕೃಷಿ ಸಾಲ ಸಂಪೂರ್ಣ ಮನ್ನಾ: ರೈತ ಸಂಘ ಮನವಿ

12:58 PM Jun 08, 2018 | |

ವಿಟ್ಲ : ರೈತರ ಕೃಷಿ ಸಂಬಂಧಿತ ಸಾಲ ಸಂಪೂರ್ಣ ಮನ್ನಾ ಮಾಡುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ದ.ಕ. ಜಿಲ್ಲಾ ಸಮಿತಿಯು ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಿತು. 2002ನೇ ಸಾಲಿನಿಂದ ಈವರೆಗೆ ಆಡಳಿತ ನಡೆಸಿರುವ ಕೇಂದ್ರ ಸರಕಾರಗಳು ಕಾರ್ಪೋರೇಟ್‌ ಕಂಪೆನಿ ಹಾಗೂ ಉದ್ಯಮಿಗಳ ಬ್ಯಾಂಕ್‌ ಸಾಲಗಳಲ್ಲಿ ಸುಮಾರು ರೂ. 8 ಲಕ್ಷ ಕೋಟಿ ವರೆಗೆ
ಹಣವನ್ನು ರೈಟ್‌ ಆಫ್‌ ಅಥವಾ ಮನ್ನಾ ಮಾಡುತ್ತಾ ಬಂದಿದೆ. ದೇಶದ ಆರ್ಥಿಕ ವ್ಯವಸ್ಥೆಯ ಪ್ರಮುಖ ನಾಡಿಮಿಡಿತ ಜಿಡಿಪಿ ದರ ಸ್ಥಿರತೆಗೆ ಬಹುಭಾಗ ಕೃಷಿಕರ ಕೊಡುಗೆ ಇದೆ ಎಂಬುದು ಸತ್ಯ. ಆದರೆ ಬಹುಪಾಲು ರೈತರ ಕೃಷಿ ಸಾಲ ಮರುಪಾವತಿಸದೇ ಇರುವ ಒಂದೇ ಕಾರಣಕ್ಕೆ ರೈತ ಕುಟುಂಬಗಳು ಜೀವ ಭಯದಿಂದ ತತ್ತರಿಸುತ್ತಿದೆ. ಬ್ಯಾಂಕ್‌ ಹಾಗೂ ಸಹಕಾರಿ ಸಂಘ ಹಾಗೂ ಪಿಎಲ್‌ಡಿ ಬ್ಯಾಂಕ್‌ ಅಧಿಕಾರಿಗಳು ರೈತರ ಕೃಷಿ ಸಾಲ ವಸೂಲಾತಿಗೆಂದು ರೈತರ ಸೊತ್ತುಗಳ ಜಪ್ತಿ, ಆಸ್ತಿ, ಹರಾಜುಗಳ ನೋಟಿಸ್‌ ನೀಡಿ ಕಾರ್ಯಾಚರಣೆಗೈದು ಬೀದಿ ಪಾಲು ಮಾಡುತ್ತಿದ್ದಾರೆ ಎಂದು ರೈತ ಸಂಘ ಆರೋಪಿಸಿದೆ.

Advertisement

ಸಹಕಾರಿ ಸಂಘಗಳು, ಪ್ರಾಥಮಿಕ ಕೃಷಿ ಮತ್ತು ಭೂ ಅಭಿವೃದ್ಧಿ ಬ್ಯಾಂಕ್‌ ಗಳಲ್ಲಿರುವ ಅಲ್ಪಾವಧಿ ಬೆಳೆ ಸಾಲ, ಮಧ್ಯಮಾವಧಿ ಸಾಲ, ದೀರ್ಘಾವಧಿ ಸಾಲ, ಅಭಿವೃದ್ಧಿ ಸುಸ್ತಿ ಸಾಲಗಳನ್ನು ಮತ್ತು ಯಾವುದೇ ಅವಧಿ ನಿಬಂಧನೆ ಹಾಕದೆ ಮನ್ನಾ ಮಾಡಬೇಕು. ರಾಷ್ಟ್ರೀಕೃತ ಬ್ಯಾಂಕ್‌ ಸಹಿತ ಎಲ್ಲ ವಾಣಿಜ್ಯ ಬ್ಯಾಂಕ್‌ ಗಳಲ್ಲಿ ರೈತರ ಭೂ ಅಡಮಾನ ಇರಿಸಿ ಪಡೆದ ಅಲ್ಪಾವಧಿ ಮಧ್ಯಮಾವಧಿ ಸಾಲಗಳನ್ನು ಮನ್ನಾ ಸಹಿತ ಮೊದಲಾದ ಬೇಡಿಕೆಗಳನ್ನು ರೈತ ಸಂಘ ಮನವಿಯಲ್ಲಿ ಸಲ್ಲಿಸಿದೆ.

ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಶ್ರೀಧರ್‌ ಶೆಟ್ಟಿ ಬೈಲುಗುತ್ತು, ಗೌರವ ಸಲಹೆಗಾರ ಮುರುವ ನಡುಮನೆ ಮಹಾಬಲ ಭಟ್ಟ, ಕಡಬ ವಲಯ ಅಧ್ಯಕ್ಷ ವಿಕ್ಟರ್‌ ಮಾರ್ಟಿಸ್‌, ರಾಜ್ಯ ಕಾರ್ಯದರ್ಶಿ ಸಿ. ಕುಮಾರ ಸುಬ್ರಹ್ಮಣ್ಯ ಶಾಸ್ತ್ರಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next