Advertisement

ತಾಲೂಕಿನ ಗಡಿಭಾಗ ಸಂಪೂರ್ಣ ಸೀಲ್‌ ಡೌನ್‌

03:45 PM Apr 13, 2020 | mahesh |

ಚನ್ನರಾಯಪಟ್ಟಣ: ಮೈಸೂರು ಜಿಲ್ಲೆ ಹಾಗೂ ಮಂಡ್ಯ ಜಿಲ್ಲೆಯ ನಾಗಮಂಗಲ, ಕೆ.ಆರ್‌.ಪೇಟೆ ತಾಲೂಕಿನಿಂದ ಚನ್ನರಾಯಪಟ್ಟಣ ತಾಲೂಕಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಿಗೆ ಮಣ್ಣು ಸುರಿಯುವ ಮೂಲಕ ತಾಲೂಕಿನ ಗಡಿ ಭಾಗವನ್ನು ತಾಲೂಕು ಆಡಳಿತ ಸಂಪೂರ್ಣ ಸೀಲ್‌ಡೌನ್‌ ಮಾಡಿದೆ. ಮಂಡ್ಯ ಜಿಲ್ಲೆಯಲ್ಲಿ ಕೊರೊನಾ ವೈರಸ್‌ ವ್ಯಾಪಕವಾಗಿ ಹರಡುತ್ತಿದೆ. ಈ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಜನತೆ ಹಾಸನ ಜಿಲ್ಲೆ ಕಡೆ ಮುಖ ಮಾಡಿದ್ದು, ಚನ್ನರಾಯಪಟ್ಟಣ ತಾಲೂಕಿನ ಗಡಿ ಮೂಲಕ ಜಿಲ್ಲೆಗೆ ಪ್ರಯಾಣಿಸುತ್ತಿರುವುದನ್ನು ಗಮನಿಸಿದ ಶಾಸಕ ಸಿ.ಎನ್‌.ಬಾಲಕೃಷ್ಣ ತಾಲೂ ಕಿನ ಗಡಿ ಭಾಗಕ್ಕೆ ಟ್ರ್ಯಾಕ್ಟರ್‌ ಮತ್ತು ಜೆಸಿಬಿ ಯಂತ್ರದ ಮೂಲಕ ಮಣ್ಣು ಸುರಿಸಿ ಸೀಲ್‌ ಡೌನ್‌ ಮಾಡಿಸಿದ್ದಾರೆ.

Advertisement

ಶ್ರವಣಬೆಳಗೊಳ ಹೋಬಳಿಗೆ ಮಂಡ್ಯ ಜಿಲ್ಲೆಯಿಂದ ಸಂಪರ್ಕ ಕಲ್ಪಿಸುವ ಅನೇಕ ರಸ್ತೆಗಳನ್ನು ಸೀಲ್‌ಡೌನ್‌ ಮಾಡಿಸಲಾ ಗಿದೆ. ಮೇಲುಕೋಟೆ ರಸ್ತೆ, ನಾಗಮಂಗಲದ ಗಡಿ ಭಾಗದ ಬೆಟ್ಟದ ಹಳ್ಳಿ, ಮಂಡ್ಯ ಜಿಲ್ಲೆ ಕಿಕ್ಕೇರೆ ಗಡಿಭಾಗ ಕಬ್ಟಾಳು ಗ್ರಾಮ, ಕೆ.ಆರ್‌. ಪೇಟೆ ಗಡಿಭಾಗ ಸುಗ್ಗನಹಳ್ಳಿ, ಮಂಡ್ಯ ಜಿಲ್ಲೆ ಆನೆಗೋಳ ಗಡಿಭಾಗ ಚಿಕ್ಕಬಿಳತಿ ಸೀಲ್‌ಡೌನ್‌ ಮಾಡಿರುವುದಲ್ಲದೇ ಮೈಸೂರು ಹಾಗೂ ಶಿವಮೊಗ್ಗ ರಸ್ತೆಯನ್ನು ಸೀಲ್‌ಡೌನ್‌ ಮಾಡಲು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ. ತಾಲೂಕು ಆಡಳಿತದಿಂದ ಶ್ರವಣಬೆಳಗೊಳ ಕಂದಾಯ ನಿರೀಕ್ಷಕ ಮೋಹನ್‌ ಆಯಾ ವ್ಯಾಪ್ತಿಯ ಗ್ರಾಮ ಲೆಕ್ಕಿಗರು ಹಾಗೂ ಪಿಡಿಒಗಳು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ಸಮ್ಮುಖದಲ್ಲಿ ಗಡಿ ಭಾಗದ ರಸ್ತೆಗಳಿಗೆ ಮಣ್ಣು ಸುರಿದು ಬಂದ್‌ ಮಾಡಿಸಿದ್ದಾರೆ. ಶ್ರವಣಬೆಳಗೊಳ ಹಾಗೂ ಹಿರೀಸಾವೆ ಗಡಿಯಲ್ಲಿ ಸಂಪೂರ್ಣ ಸಿಸಿ ಕ್ಯಾಮರಾ ಅಳವಡಿಸಿದ್ದು, ನೇರವಾಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಕಚೇರಿಗೆ ಸಂಪರ್ಕ ಕಲ್ಪಿಸಲಾಗಿದೆ.

ಮಂಡ್ಯ,ಮೈಸೂರು ಭಾಗದಲ್ಲಿ ಕೊರೊನಾ ಸೋಂಕು ಹರಡುತ್ತಿರುವುದಿಂದ ತಾಲೂಕು ಗಡಿಭಾಗವನ್ನು ಸೀಲ್‌ಡೌನ್‌ ಮಾಡಲಾಗಿದೆ. ಇದಕ್ಕೆ ಸಾರ್ವಜನಿಕರು
ಸಹಕಾರ ನೀಡಬೇಕು. ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಸರಬರಾಜಿಗೆ ಕೊರತೆಯಾಗದಂತೆ ತಾಲೂಕು ಆಡಳಿತ ವ್ಯವಸ್ಥೆ ಮಾಡಲಿದೆ.
ಸಿ.ಎನ್‌.ಬಾಲಕೃಷ್ಣ, ಶಾಸಕ

● ಶಾಮಸುಂದರ್‌ ಕೆ.ಅಣ್ಣೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next