Advertisement

ಎರಡನೇ ವಾರಾಂತ್ಯ ಕರ್ಫ್ಯೂ ಅಂತ್ಯ; ರಾತ್ರಿ ಕರ್ಫ್ಯೂ ಜಾರಿಯಲ್ಲಿ

12:48 AM Jan 17, 2022 | Team Udayavani |

ಮಂಗಳೂರು/ಉಡುಪಿ: ಶುಕ್ರವಾರ ರಾತ್ರಿಯಿಂದ ಜಾರಿಯಲ್ಲಿದ್ದ ಎರಡನೇ ವಾರದ ವಾರಾಂತ್ಯ ಕರ್ಫ್ಯೂ ಸೋಮವಾರ ಮುಂಜಾನೆ 5 ಗಂಟೆಗೆ ಮುಕ್ತಾಯಗೊಂಡಿದೆ. ರಾತ್ರಿ ಕರ್ಫ್ಯೂ ಹಾಗೂ ವಾರಾಂತ್ಯ ಕರ್ಫ್ಯೂ ಜ. 31ರ ವರೆಗೆ ಜಾರಿಯಲ್ಲಿರುತ್ತದೆ. ಎರಡು ದಿನಗಳ ಕಾಲ ವಾಣಿಜ್ಯ ಚಟುವಟಿಕೆಗಳು ಬಹುತೇಕ ಸ್ತಬ್ಧಗೊಂಡಿದ್ದವು ಮತ್ತು ಜನಜೀವನ ವ್ಯತ್ಯಯವಾಗಿತ್ತು.

Advertisement

ದಿನಸಿ, ಜಾಷಧ ಸೇರಿದಂತೆ ಆವಶ್ಯಕ ವಸ್ತುಗಳ ಮಾರಾಟದ ಮಳಿಗೆಗಳು ಕಾರ್ಯಾಚರಿಸಿದವು. ರವಿ ವಾರದ ಹಿನ್ನೆಲೆಯಲ್ಲಿ ನಗರ ಪ್ರದೇಶಗಳಲ್ಲಿ ಹೆಚ್ಚಿನ ಅಂಗಡಿಗಳು ಮಧ್ಯಾಹ್ನದ ಬಳಿಕ ಮುಚ್ಚಿದ್ದವು. ಗ್ರಾಮಾಂತರ ಪ್ರದೇಶಗಳಲ್ಲಿ ಎಂದಿನಂತೆ ಕಾರ್ಯಾ ಚರಿಸಿದವು. ಹೊಟೇಲ್‌ಗ‌ಳಲ್ಲಿ ಪಾರ್ಸೆಲ್‌ಗೆ ಮಾತ್ರ ಅವಕಾಶವಿತ್ತು. ಸಾರ್ವಜನಿಕ ಉದ್ಯಾನವನ, ಬೀಚ್‌ಗಳಿಗೆ ಪ್ರವೇಶ ಇರಲಿಲ್ಲ.

ಟೂರಿಸ್ಟ್‌ ವಾಹನಗಳು, ರಿಕ್ಷಾ, ಬಸ್‌ಗಳು ಸೀಮಿತ ಸಂಖ್ಯೆಯಲ್ಲಿ ಸಂಚರಿಸಿವೆ. ಶನಿವಾರಕ್ಕೆ ಹೋಲಿಸಿದರೆ ರವಿವಾರ ಬಸ್‌ಗಳ ಓಡಾಟ ಕಡಿಮೆ ಇತ್ತು. ಕೇರಳ ರಾಜ್ಯದ ಬಸ್‌ಗಳು ಕೂಡ ಸೀಮಿತ ಸಂಖೆಯಲ್ಲಿ ಸಂಚರಿಸಿವೆ. ಮಧ್ಯಾಹ್ನದ ಬಳಿಕವಂತೂ ವಾಹನ ಸಂಚಾರ ವಿರಳಗೊಂಡು ರಸ್ತೆಗಳು ಬಿಕೋ ಎನ್ನುತ್ತಿದ್ದವು.

ಪೂರ್ವ ನಿಗದಿತ ಮದುವೆ, ಧಾರ್ಮಿಕ ಕಾರ್ಯಕ್ರಮಗಳು ನಡೆದಿವೆ. ಖಾಸಗಿ ವಾಹನ ಗಳಲ್ಲಿ ಬರುವವರಿಗೆ ತಪಾಸಣೆಯ ಕಿರಿಕಿರಿ ಎದುರಾಯಿತು.

ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ
ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸರು ವಾಹನಗಳ ತಪಾಸಣೆ ನಡೆಸಿ ಅನಗತ್ಯವಾಗಿ ಹಾಗೂ ಕೊರೊನಾ ಮಾರ್ಗಸೂಚಿ ಉಲ್ಲಂಘಿಸಿ ಸಂಚರಿಸುತ್ತಿದ್ದ ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

ರಾತ್ರಿ ಕರ್ಫ್ಯೂ ಜಾರಿಯಲ್ಲಿ
ಜ. 31ರ ವರೆಗೆ ರಾತ್ರಿ 10ರಿಂದ ಬೆಳಗ್ಗೆ 5 ಗಂಟೆಯವರೆಗೆ ರಾತ್ರಿ ಕರ್ಫ್ಯೂ ಹಾಗೂ ಶುಕ್ರವಾರ ರಾತ್ರಿಯಿಂದ ಸೋಮವಾರ ಮುಂಜಾನೆ ವರೆಗೆ ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿರುತ್ತದೆ.

1,12, 800 ರೂ. ದಂಡ ವಸೂಲಿ
ವಾರಾಂತ್ಯ ಕರ್ಫ್ಯೂ ನಿಯಮ ಉಲ್ಲಂಘನೆಗೆ ಸಂಬಂಧಿಸಿ ಮಂಗಳೂರು ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಯಲ್ಲಿ ರವಿವಾರ ಮೋಟಾರು ವಾಹನ ಕಾಯ್ದೆಯನ್ವಯ 516 ಪ್ರಕರಣ ಹಾಗೂ ಮಾಸ್ಕ್ ನಿಯಮ ಉಲ್ಲಂಘನೆಗೆ ಸಂಬಂಧಿಸಿ 101 ಪ್ರಕರಣ ದಾಖಲಿಸಲಾಗಿದ್ದು, ಒಟ್ಟು 1,12,800 ರೂ. ದಂಡ ವಸೂಲಿ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next