Advertisement

ನಗರಕ್ಕೊಂದು ಲಾಂಛನ

06:11 PM Dec 27, 2017 | |

ಬೆಂಗಳೂರು
ಬೆಂಗಳೂರು ರಾಜ್ಯವೊಂದರ ರಾಜಧಾನಿಯಲ್ಲ, ಬರೀ ಉದ್ಯಾನ ನಗರಿಯೂ ಅಲ್ಲ. ಈ ಎಲ್ಲಾ ಪದಗಳನ್ನು, ಬಿರುದುಗಳನ್ನು ಮೀರಿದ್ದು! ಇದನ್ನು ಮನಗಂಡೇ, ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಬೆಂಗಳೂರು ನಗರಕ್ಕೆ ಹೊಸ ಲಾಂಛನ ನೀಡಿದೆ. ಉದ್ಯಾನ ನಗರಿ ಈಗ  ದೇಶದಲ್ಲೇ ತನ್ನದೇ ಸ್ವಂತ ಲೋಗೋ ಪಡೆದ ಮೊಟ್ಟಮೊದಲ ನಗರ. ನೀವು ನೀವಾಗಿರಿ ಎಂಬ ಪರಿಕಲ್ಪನೆ ಇದರ ಹಿಂದಿದೆ. ಇದನ್ನು ಸೂಚಿಸಲು  ಬೆಂಗಳೂರು ಇಂಗ್ಲೀಷ್‌ ಪದದಲ್ಲಿ ಆಛಿ, ಖೀ ಅಕ್ಷರಗಳಿಗೆ ಕೆಂಪು ಬಣ್ಣ ನೀಡಲಾಗಿದೆ. ಇದೇ ರೀತಿ ತಮ್ಮದೇ ಆದ ಪ್ರವಾಸೋದ್ಯಮ ಲಾಂಛನ ಹೊಂದಿರುವ  ಜಗತ್ತಿನ ಕೆಲ ನಗರಗಳ ಪರಿಚಯ ಇಲ್ಲಿದೆ.

Advertisement

ಸಿಟಿ ಆಫ್ ಮೆಲ್ಬೊರ್ನ್
* ಈ ನಗರದ ಮೊದಲ ಲೋಗೋ ಬಿಡುಗಡೆಯಾಗಿದ್ದು1990ರಲ್ಲಿ. ಆಗಿನಿಂದಲೂ ಈ ನಗರದ ಲೋಗೋ ಹೊಸ ಹೊಸ ಸ್ವರೂಪ ಪಡೆದು ರೀ-ಲಾಂಚ್‌ ಆಗುತ್ತಲೇ ಇದೆ.
* 90ರ ದಶಕದಲ್ಲಿ ಮೊದಲಿಗೆ ಎಲೆಯ ಚಿತ್ರವುಳ್ಳ “ಸಿಟಿ ಆಫ್ ಮೆಲ್ಬೋರ್ನ್’ ಎಂಬ ಲೋಗೋ ಬಿಡುಗಡೆಯಾಗಿತ್ತು. ಇದೀಗ, ಇಂಗ್ಲೀಷ್‌ನ “ಎಂ’  ಅಕ್ಷರವನ್ನೇ ಬಳಸಿಕೊಂಡು ಹೊಸ ಲೋಗೋ ರಚಿಸಲಾಗಿದೆ. ಇದೇ ವರ್ಷ ಸೆಪ್ಟೆಂಬರ್‌ನಲ್ಲಿ ಇದನ್ನು ಬಿಡುಗಡೆ ಮಾಡಲಾಗಿದೆ.  

ಐ ಆ್ಯಮ್‌ಸ್ಟರ್‌ ಡ್ಯಾಂ
* ಮ್ಯೂಸಿಯಂ ಪ್ಲೇನ್‌ ಪ್ರಾಂತ್ಯದ ರಿಜಕ್ಸ್‌ ಮ್ಯೂಸಿಯಂ ಹಿಂಭಾಗದಲ್ಲಿ ಈ ಲೋಗೋ ಇರಿಸಲಾಗಿದೆ.
* ಈ ಲೋಗೋ, 77 ಅಡಿ ಅಗಲ, 6.5 ಅಡಿ ಉದ್ದ “ಐ’ ಮತ್ತು “ಎ’, “ಎಂ’ ಅಕ್ಷರಗಳ ಬಣ್ಣ ಕೆಂಪಾಗಿದ್ದು ಇದು ಐ ಆ್ಯಮ್‌ (ನಾನು) ಎಂಬ ಪದವನ್ನು ಅರ್ಥೈಸುವುದು ಈ ಲೋಗೋನ ವಿಶೇಷ.
* ಪ್ರಮುಖವಾಗಿ ಪ್ರವಾಸಿಗರಿಗೆ ಈ ನಗರದ ಹಿರಿಮೆ, ಸೌಂದರ್ಯಗಳ ಮಹತ್ವ ಸಾರುವ ಉದ್ದೇಶವನ್ನಿಟ್ಟುಕೊಂಡು ಈ ಲೋಗೋ ತಯಾರಿಸಲಾಗಿದೆ.  ಈಗ ಬೆಂಗಳೂರು ಲೋಗೋ ಕೂಡ ಆ್ಯಮ್‌ಸ್ಟರ್‌ ಡ್ಯಾಂ ಲೋಗೋದ ಮಾದರಿಯಲ್ಲೇ ರೂಪುಗೊಂಡಿದೆ. 

ಐ ಲವ್‌ ನ್ಯೂಯಾರ್ಕ್‌
* ನ್ಯೂಯಾರ್ಕ್‌ ನಗರದ ಲೋಗೋನಲ್ಲಿ ಐ ಮತ್ತು ಎನ್‌ವೈ (ನ್ಯೂಯಾರ್ಕ್‌ನ ಸಂಕ್ಷಿಪ್ತ ರೂಪ) ನಡುವೆ ಹೃದಯದ ಸಂಕೇತವನ್ನು ನೀಡಲಾಗಿದೆ.
* ಜು. 17, 1977ರಲ್ಲಿ ಈ ಲೋಗೋವನ್ನು ನ್ಯೂಯಾರ್ಕ್‌ ಆರ್ಥಿಕ ಅಭಿವೃದ್ಧಿ ಇಲಾಖೆ ಬಿಡುಗಡೆಗೊಳಿಸಿತ್ತು.
* ಗ್ರಾಫಿಕ್‌ ಡಿಸೈನರ್‌ ಮಿಲ್ಟನ್‌ ಗ್ಲೆಸರ್‌ ಇದರ ಸೃಷ್ಟಿಕರ್ತ. 1976ರಲ್ಲಿ ಈತ ರಚಿಸಿದ್ದ ಲೋಗೋ ಮೂಲ ಚಿತ್ರ ಇಂದಿಗೂ ಮ್ಯಾನ್‌ಹಟನ್‌ನಲ್ಲಿರುವ ಮ್ಯೂಸಿಯಂನಲ್ಲಿ ಕಾಣಬಹುದು. 

ಸಿಂಗಾಪುರ
ಸಿಂಗಾಪುರ ನಗರದ ಬ್ರಾಂಡ್‌ ಲಾಂಛನ ಬಲು ಸರಳ. ಈ ಹಿಂದೆ ವೃತ್ತದೊಳಗೆ ಎಸ್‌ಜಿ ಎಂಬ ಬರಹವಿತ್ತು. ಸಿಂಗಾಪುರ ಪ್ರವಾಸೋದ್ಯಮ ಇಲಾಖೆಯ 50ನೇ ವರ್ಷಾಚರಣೆ ವೇಳೆ ಆ ಲೋಗೋ ಅನಾವರಣವಾಗಿತ್ತು. ಇದೀಗ ಹೊಸ ಲೋಗೋದಲ್ಲಿ ಆ ವೃತ್ತಾಕಾರದ ಚಿತ್ತಾರವನ್ನೇ ಬಳಸಿಕೊಳ್ಳಲಾಗಿದೆ. ಜತೆಗೆ, ಪ್ಯಾಷನ್‌ ಮೇಡ್‌ ಪಾಸಿಬಲ್‌ ಎಂಬ ಧ್ಯೇಯ ವಾಕ್ಯವನ್ನೂ ಉಲ್ಲೇಖೀಸಲಾಗಿದೆ. 

Advertisement

ಸಿಡ್ನಿ
* ಆಸ್ಟ್ರೇಲಿಯಾದ ಮತ್ತೂಂದು ಪ್ರಮುಖ ನಗರ ಸಿಡ್ನಿಗೂ ಒಂದು ಲೋಗೋ ಇದೆ.
* 1788ರಿಂದ ಬ್ರಿಟನ್‌ ವಸಾಹಸು ಆರಂಭವಾದಾಗಿನಿಂದ ಈವರೆಗೆ ಈ ನಗರ ಕಂಡ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ಲೋಗೋ ರಚಿಸಲಾಗಿದೆ.
* ಸಿಡ್ನಿ ನಗರ ತನ್ನಲ್ಲಿ ಅಳವಡಿಸಿಕೊಂಡಿರುವ ಸಾಂಸ್ಕೃತಿಕ ವೈವಿಧ್ಯತೆಯನ್ನು ಈ ಲೋಗೋ ಸಾರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next