ಮುಂಬಯಿ: ಉದ್ಯಮ ರಂಗದ ದಿಗ್ಗಜ ಮುಕೇಶ್ ಮತ್ತು ನೀತಾ ಅವರ ಪುತ್ರ ಅನಂತ್ ಅಂಬಾನಿ ಶೀಘ್ರದಲ್ಲೇ ತಮ್ಮ ಬಾಲ್ಯದ ಗೆಳತಿ ರಾಧಿಕಾ ಮರ್ಚೆಂಟ್ ಅವರೊಂದಿಗೆ ಜುಲೈ 12 ರಂದು ಮಂಬೈನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಕಳೆದ ವಾರ ಗುಜರಾತಿ ವಿವಾಹ ಸಂಪ್ರದಾಯದ ಆಹ್ವಾನಿಸುವ ‘ಲಗಾನ್ ಲಖ್ವಾನು’ ಸಮಾರಂಭದೊಂದಿಗೆ ಮದುವೆಯ ಕ್ಷಣಗಣನೆ ಪ್ರಾರಂಭವಾಗಿದೆ.
ಅದ್ಧೂರಿ ವಿವಾಹದ ಮೊದಲು, ಮಾರ್ಚ್ 1 ರಿಂದ ಗುಜರಾತ್‌ನ ಜಾಮ್‌ನಗರದಲ್ಲಿರುವ ರಿಲಯನ್ಸ್ ಗ್ರೀನ್ಸ್ ಕಾಂಪ್ಲೆಕ್ಸ್‌ನಲ್ಲಿ ಮೂರು ದಿನಗಳ ಪ್ರಿ ವೆಡ್ಡಿಂಗ್ ಅದ್ದೂರಿ ಸಮಾರಂಭಗಳನ್ನು ಆಯೋಜಿಸಲಾಗಿದ್ದು, ವಿಶ್ವದ ಉದ್ಯಮ, ರಾಜಕೀಯ ಸೇರಿ ವಿವಿಧ ರಂಗದ ದಿಗ್ಗಜರು ಭಾಗಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ.
ಗಣ್ಯಾತೀಗಣ್ಯರ ಪಟ್ಟಿ ಹೀಗಿದೆ
ದಿಗ್ಗಜರ ಪೈಕಿ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್, ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್, ಬ್ಲ್ಯಾಕ್‌ರಾಕ್‌ನ ಸಿಇಒ ಲ್ಯಾರಿ ಫಿಂಕ್,ಡಿಸ್ನಿ ಸಿಇಒ ಬಾಬ್ ಇಗರ್ , ಶ್ವಾರ್ಜ್‌ಮನ್ – ಬ್ಲಾಕ್‌ಸ್ಟೋನ್ ಅಧ್ಯಕ್ಷ ಸ್ಟೀಫನ್ ಎ., ಅಮೆರಿಕದ ಉದ್ಯಮಿ ಮತ್ತು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಗಳು ಇವಾಂಕಾ ಟ್ರಂಪ್ , ಮೋರ್ಗಾನ್ ಸ್ಟಾನ್ಲಿಯ ಸಿಇಒ ಟೆಡ್ ಪಿಕ್,ಬ್ಯಾಂಕ್ ಆಫ್ ಅಮೆರಿಕ ಅಧ್ಯಕ್ಷ ಬ್ರಿಯಾನ್ ಥಾಮಸ್ ಮೊಯ್ನಿಹಾನ್, ADNOC ಸಿಇಒ ಸುಲ್ತಾನ್ ಅಹ್ಮದ್ ಅಲ್-ಜಾಬರ್, ಇಸ್ರೇಲಿ ಟೆಕ್ ಹೂಡಿಕೆದಾರ ಯೂರಿ ಮಿಲ್ನರ್, ಅಡೋಬ್‌ನ ಸಿಇಒ ಶಂತನು ನಾರಾಯಣ್, ಕತಾರ್ ಪ್ರಧಾನ ಮಂತ್ರಿ ಮೊಹಮ್ಮದ್ ಬಿನ್ ಅಬ್ದುಲ್ ರಹ್ಮಾನ್ ಬಿನ್ ಜಸ್ಸಿಮ್ ಅಲ್ ಥಾನಿ, ಲೂಪಾ ಸಿಸ್ಟಮ್ಸ್ ಸಿಇಒ ಜೇಮ್ಸ್ ಮುರ್ಡೋಕ್, ಹಿಲ್‌ಹೌಸ್ ಕ್ಯಾಪಿಟಲ್‌ನ ಸ್ಥಾಪಕ ಜಾಂಗ್ ಲೀ, ಬಿಪಿಯ ಸಿಇಒ ಮುರ್ರೆ ಆಚಿನ್‌ಕ್ಲೋಸ್, ಎಕ್ಸಾರ್ ನ ಸಿಇಒ ಜಾನ್ ಎಲ್ಕಾನ್, ಸಿಸ್ಕೋ ಸಿಸ್ಟಮ್ಸ್‌ನ ಮಾಜಿ ಅಧ್ಯಕ್ಷ ಮತ್ತು ಸಿಇಒ ಜಾನ್ ಚೇಂಬರ್ಸ್, ಬ್ರೂಕ್‌ಫೀಲ್ಡ್ ಅಸೆಟ್ ಮ್ಯಾನೇಜ್ಮೆಂಟ್ ಸಿಇಒ ಬ್ರೂಸ್ ಫ್ಲಾಟ್, ಮೆಕ್ಸಿಕನ್ ಬಿಸಿನೆಸ್ ಮ್ಯಾಗ್ನೇಟ್ ಮತ್ತು ಹೂಡಿಕೆದಾರ ಕಾರ್ಲೋಸ್ ಸ್ಲಿಮ್, ಬ್ರಿಡ್ಜ್‌ವಾಟರ್ ಅಸೋಸಿಯೇಟ್ಸ್‌ನ ಸ್ಥಾಪಕ ರೇ ಡಾಲಿಯೊ, ಬರ್ಕ್‌ಷೈರ್ ಹಾಥ್‌ವೇ ವಿಮಾ ಕಾರ್ಯಾಚರಣೆಗಳ ಉಪಾಧ್ಯಕ್ಷ ಅಜಿತ್ ಜೈನ್ ಮತ್ತು ಅಮೇರಿಕನ್-ಬ್ರಿಟಿಷ್ ಉದ್ಯಮಿ ಲಿನ್ ಫಾರೆಸ್ಟರ್ ಡಿ ರಾಥ್‌ಸ್ಚೈಲ್ಡ್ ಅವರು ಸಂಭ್ರಮದಲ್ಲಿ ಭಾಗಿಯಾಗಲಿರುವ ಗಣ್ಯಾತೀಗಣ್ಯರ ಪಟ್ಟಿಯಲ್ಲಿದ್ದಾರೆ.
ಅಂಬಾನಿ ಪುತ್ರನ ಅದ್ದೂರಿ ವಿವಾಹ ಸಂಭ್ರಮ ಹೇಗಿರಲಿದೆ, ಅದೆಷ್ಟು ವೈಭವಯುತವಾಗಿರಲಿದೆ ಎನ್ನುವ ಕುತೂಹಲ ಎಲ್ಲೆಡೆ ಮನೆ ಮಾಡಿದೆ.