Advertisement

ಅರ್ಹರಿಗಷ್ಟೇ ಚಾಲನಾ ಪರವಾನಗಿ ನೀಡಲು ವಿದ್ಯುನ್ಮಾನ ಪರೀಕ್ಷಾ ಪಥ

11:51 AM Sep 01, 2017 | Team Udayavani |

ಆನೇಕಲ್‌: ಅರ್ಹರಿಗೆ ಮಾತ್ರ ಚಾಲನಾ ಪರವಾನಿಗಿ ನೀಡುವ ದೃಷ್ಟಿಯಿಂದ ರಾಜ್ಯದ ಐದು ಜಿಲ್ಲೆಗಳಲ್ಲಿ ವಿದ್ಯುನ್ಮಾನ ಚಾಲಕ ಪರೀಕ್ಷಾ ಪಥ (ಎಲೆಕ್ಟ್ರಾನಿಕ್‌ ಡ್ರೆ„ವಿಂಗ್‌ ಟೆಸ್ಟಿಂಗ್‌ ಟ್ರಾಕ್‌) ಆರಂಭಿಸಲು ಸರ್ಕಾರ ನಿರ್ಧರಿಸಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು. ತಾಲೂಕಿನ ಮರಸೂರು ಗೇಟ್‌ ಸಮೀಪದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿ ಹಾಗೂ ಎಲೆಕ್ಟ್ರಾನಿಕಸ್‌ ಸಿಟಿ ಬಳಿ ವಿದ್ಯುನ್ಮಾನ ಚಾಲಕ ಪರೀಕ್ಷಾ ಪಥ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಬೆಂಗಳೂರಿನ ಜಾnನ ಭಾರತಿ ಬಳಿ ವಿದ್ಯುನ್ಮಾನ ಚಾಲಕ ಪರೀಕ್ಷಾ ಪಥ ಇತ್ತು. ಇದು ರಾಜ್ಯದಲ್ಲೇ ಮೊದಲನೇದಾಗಿತ್ತು. ಇದಾದ ನಂತರ ಇಂದು ಎಲೆಕ್ಟ್ರಾನಿಕ್‌ ಸಿಟಿ ಬಳಿ ಎರಡನೇ ಪಥವನ್ನು ಆರಂಭಿಸಲಾಗಿದೆ. ಇದೇ ರೀತಿ ಹಾಸನ, ಮೈಸೂರು, ದಾರವಾಡ, ಶಿವಮೊಗ್ಗ, ಗುಲ್ಬರ್ಗ ಜಿಲ್ಲೆಗಳಲ್ಲೂ ಸ್ಥಾಪಿಸಲಾಗುವುದು ಎಂದು ಅವರು ಹೇಳಿದರು. ದೇಶದಲ್ಲಿ ವಾರ್ಷಿಕ ನಾಲ್ಕೂವರೆ ಲಕ್ಷದಷ್ಟು ಅಪಘಾತಗಳಾಗುತ್ತಿವೆ.

ಒಂದೂವರೆ ಲಕ್ಷದಷ್ಟು ಜನ ಸಾವಿಗೀಡಾಗುತ್ತಿದ್ದಾರೆ. ಮೃತರಿಗೆ ನೀಡುತ್ತಿರುವ ಪರಿಹಾರದ ಹಣ ಸರ್ಕಾರಗಳಿಗೆ ಹೊರಯಾಗುತ್ತಿದೆ. ಇನ್ನೂ ರಾಜ್ಯದಲ್ಲಿ ವರ್ಷಕ್ಕೆ 25 ಸಾವಿರ ಅಪಘಾತಗಳಾಗುತ್ತಿವೆ, ಇದರಲ್ಲಿ ಹತ್ತು ಸಾವಿರ ಜನ ಸಾವಿಗೀಡಾಗುತ್ತಿದ್ದಾರೆ. ಸರಿಯಾದ ತರಬೇತಿ ಇಲ್ಲದೆ ವಾಹನ ಚಾಲನೆ ಮಾಡುತ್ತಿರುವುದು ಹಾಗೂ ಡ್ರೆ„ವಿಂಗ್‌ ಲೈಸನ್ಸ್‌ ಪಡೆಯದೆ ಇರುವುದರಿಂದ ಇಷ್ಟು ಪ್ರಮಾಣದಲ್ಲಿ ಅಪಘಾತಗಳು ಆಗುತ್ತಿವೆ ಎಂದು ಅವರು ಹೇಳಿದರು.

ಆನೇಕಲ್‌ ಪಟ್ಟಣ ಸೇರಿದಂತೆ ತಾಲೂಕಿನ ಜಿಗಣಿ ಹೋಬಳಿ, ಸಜಾìಪುರ, ಅತ್ತಿಬೆಲೆ,ಕಸಬಾ ಹೋಬಳಿಯ ಜನರಿಗೆ ಅನುಕೂಲವಾಗಲೆಂದು  ಮರಸೂರು ಗೇಟ್‌ ಬಳಿ ಹೊಸದಾಗಿ ಪ್ರಾದೇಶಿಕ ಸಾರಿಗೆ ಕಚೇರಿ ತೆರಯಲಾಗಿದೆ. ಇದರ ಉಪಯೋಗವನ್ನು ಸ್ಥಳೀಯರು ಪಡೆದುಕೊಳ್ಳ ಬಹುದೆಂದು ಅವರು ಹೇಳಿದರು.

ಆನೇಕಲ್‌ಗೆ ಪ್ರತ್ಯೇಕ ಡಿಪೋ: ಕಾವಲಹೊಸಳ್ಳಿ ಬಳಿ ಬಿಎಂಟಿಸಿ ಡಿಪೋ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಹಿಂದೆ ಕಟ್ಟಡ ನಿರ್ಮಾಣ ಆರಂಭಿಸಲಾಗಿತ್ತು. ಆದರೆ ನಿರ್ಮಾಣ ಮಾಡುತ್ತಿದ್ದ ಜಾಗ ಖಾಸಗಿಯವರದಾಗಿತ್ತು. ಆ ಕಾರಣದಿಂದ ನಿರ್ಮಾಣ ಕಾಮಗಾರಿ ಸ್ಥಗಿತವಾಗಿತ್ತು. ಈಗ ಖಾಸಗಿಯವರೊಂದಿಗೆ ಮಾತನಾಡಿ ಭೂಮಿ ಅದಲು ಬದಲು ಮಾಡಿ ಕೊಂಡು ಕಾಮಗಾರಿ ಆರಂಭಿಸಲಾಗಿದೆ. ಇನ್ನು ಆರು ತಿಂಗಳಲ್ಲಿ ಆನೇಕಲ್‌ಗೆ ಪ್ರತ್ಯೇಕ ಬಸ್‌ ಡಿಪೋ ಸಿಗಲಿದೆ ಎಂದು ಅವರು ಹೇಳಿದರು.

Advertisement

ಸಂಸದ ಡಿ ಕೆ ಸುರೇಶ್‌ ಮಾತನಾಡಿ ನನ್ನ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ರಾಮನಗರ, ಕನಕಪುರ, ಚನ್ನಪಟ್ಟಣ ಭಾಗದಲ್ಲಿ ಆರು ತಿಂಗಳಲ್ಲಿ 18 ಸಾವಿರ ಚಾಲನಾ ಪತ್ರ ನೀಡುವುದರ ಮೂಲಕ ಆಂದೋಲ ಮಾಡಲಾಗಿತ್ತು. ಈ ಭಾಗದಲ್ಲು ಇಂತಹ ಒಂದು ಆಂದೋಲನ ಮಾಡ ಬೇಕಿದೆ ಎಂದು ಅವರು ಹೇಳಿದರು.

ಹಿಂದೆ ಚಾಲನ ಪತ್ರಕ್ಕೆ ಅಧಿಕಾರಿಗಳು, ಜನ ಪ್ರತಿನಿಧಿಗಳು  ಶಿಪಾರಸ್ಸು ಪಡೆದು ತರಬೇತಿ ಇಲ್ಲದೆಯೂ ಚಾಲನ ಪತ್ರ ಪಡೆಯ ಬಹುದಾಗಿತ್ತು. ಆದರೆ ಸ್ವಯಂ ಚಾಲಿತ ವಿದ್ಯುನ್ಮಾನ ಚಾಲಕ ಪಥ ಆರಂಭವಾದ ಬಳಿಕ ಎಲ್ಲವೂ ಪಾರದರ್ಶಕವಾಗಲಿದೆ. ಇದರ ಮೂಲಕ ಮಧ್ಯವರ್ತಿಗಳಿಗೆ ಕಡಿವಾಣ ಹಾಕಬಹುದು ಎಂದು ಅವರು ಹೇಳಿದರು.

ಶಾಸಕ ಬಿ ಶಿವಣ್ಣ ಮಾತನಾಡಿದರು. ವಿಧಾನ ಪರೀಷತ್‌ ಸದಸ್ಯ ನಾರಾಯಣಸ್ವಾಮಿ, ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿ ಸದಸ್ಯ ಮುನಿರಾಜು, ಆನೇಕಲ್‌ ಯೋಜನಾ ಪ್ರಾಧಿಕಾರದ ಅಧ್ಯಕ್ಷ ನಾಗರಾಜು, ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತ ದಯಾನಂದ, ಜಿ ಪಂ ಸದಸ್ಯ ರಾಮಚಂದ್ರ , ತಾ ಪಂ ಅಧ್ಯಕ್ಷ ಮುನಿರತ್ನಮ್ಮನಾರಾಯಣಪ್ಪ, ಗ್ರಾಮಪಂಚಾಯ್ತಿ ಅಧ್ಯಕ್ಷ ಪುರಷೋತ್ತಮರೆಡ್ಡಿ,

-ಬ್ಲಾಕ್‌ ಅಧ್ಯಕ್ಷ ರಾಜಣ್ಣ, ಚಂದ್ರಪ್ಪ, ತಾ ಪಂ ಉಪಾಧ್ಯಕ್ಷರಾದ ಚಂದ್ರಕಲಾಮುನಿರಾಜು, ಮರಸೂರು ತಾ ಪಂ ಸದಸ್ಯ ರಾಮಕೃಷ್ಣ ರೆಡ್ಡಿ, ಲಾರಿ ಮಾಲೀಕ ಸಂಘದ ಅಧ್ಯಕ್ಷ ಷಣ್ಮುಗಂ, ಮುಖಂಡರಾದ ಆರ್‌ ಕೆ ರಮೇಶ್‌, ಅಚ್ಯುತ್‌ರಾಜ್‌, ಹರೀಶ್‌ಗೌಡ, ರಮೇಶ್‌, ಪಾರಿಜಾತ ದೊರಸ್ವಾಮಿ, ಮೊದಲಾದವರು ಉಪಸ್ಥಿತರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next