Advertisement
ಅಂಕಿ-ಅಂಶದ ಪ್ರಕಾರ ದೇಶದಲ್ಲಿ ಮುಂಜಾಗ್ರತೆಯ ಕೊರತೆ ಅಥವಾ ವಿದ್ಯುತ್ ಸರಬರಾಜು ನಿಗಮಗಳ ನಿರ್ಲಕ್ಷ್ಯದಿಂದಲೋ ಪ್ರತಿದಿನ ವಿದ್ಯುತ್ ಆಘಾತಕ್ಕೆ ಒಳಗಾಗಿ ಸರಾಸರಿ 30 ಮಂದಿ ಜೀವ ಕಳೆದುಕೊಳ್ಳುತ್ತಿದ್ದಾರೆ. 2015ರಿಂದ ಇಲ್ಲಿಯ ತನಕ ರಾಜ್ಯ ರಾಜಧಾನಿಯೊಂದರಲ್ಲೇ 450ಕ್ಕೂ ಹೆಚ್ಚು ಸಾವು ಸಂಭವಿಸಿದೆ.
40ಕ್ಕಿಂತಲೂ ಕಡಿಮೆ ವೋಲ್ಟೇಜ್ ನಲ್ಲೂ ಸಾವು ಸಂಭವಿಸಿದ ಉದಾಹರಣೆಗಳು ಸಾಕಷ್ಟಿವೆ. ವಿದ್ಯುತ್ ವ್ಯಕ್ತಿಯ ದೇಹ ಪ್ರಕೃತಿಗನುಗುಣವಾಗಿ ಬದಲಾಗುತ್ತಾ ಇರುತ್ತದೆ. ಶುಷ್ಕ ದೇಹಕ್ಕೆ ಅಂತಹ ಅಪಾಯ ಮಾಡದಿದ್ದ ವಿದ್ಯುತ್ ವೋಲ್ಟೇಜ್ ಪ್ರಮಾಣ, ದೇಹ ಒದ್ದೆಯಾಗಿ ದ್ದರೆ ಅದರ 5-6 ಪಟ್ಟು ಹೆಚ್ಚಿನ ಆಘಾತ ಉಂಟುಮಾಡುತ್ತದೆ. ವಿದ್ಯುತ್ ಪ್ರವಹಿಸುವ ಹರಿವನ್ನು ಮಿಲಿ ಎಂಪಿರಿಯರ್ ಲೆಕ್ಕಾಚಾರದಲ್ಲಿ ಹೇಳಬಹುದು. 50ಕ್ಕಿಂತ ಹೆಚ್ಚಿನ ಎಂಎಗಳು ಯಾವತ್ತೂ ಮಾರಣಾಂತಿಕ. ವಿದ್ಯುತ್ ಹರಿವಿನಲ್ಲೂ ಎಸಿ (ಆಲ್ಟರ್‌ನೆಟಿವ್ ಕರೆಂಟ್), ಡಿಸಿ (ಡೈರೆಕ್ಟ್ ಕರೆಂಟ್) ಎಂದು ವಿಭಜಿಸಿದ್ದು, ಡಿಸಿ ಯಾವತ್ತಿದ್ದರೂ ಹೆಚ್ಚು ಅಪಾಯಕಾರಿಯಾಗಿರುತ್ತದೆ. ಎಸಿಯಲ್ಲಾದರೆ ವಿದ್ಯುತ್ ಶಾಕ್‌ನ ಅನುಭವವಾಗುತ್ತದೆ. ಡಿಸಿಯಲ್ಲಿ ಹಾಗಲ್ಲ ಒಮ್ಮೆ ಹಿಡಿದರೆ ಬಿಡುವುದೇ ಇಲ್ಲ. ಎಸಿಯಲ್ಲಿ ವಿದ್ಯುತ್ ತರಂಗಗಳು ಅಲೆಗಳ ರೀತಿ ವರ್ತಿಸಿದರೆ ಡಿಸಿಯಲ್ಲಿ ನೇರ ಹರಿವು ಇರುತ್ತದೆ. ಇದರಿಂದ ಬಚಾವಾಗಲು ಸಾಧ್ಯವೇ ಇಲ್ಲ.
Related Articles
Advertisement
ಬದುಕೇ ಬರಡಾಯಿತುಫೆ. 8ರಂದು ಪುತ್ತೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ಪೈಂಟಿಂಗ್ ನಡೆಸಲೆಂದು ಹೋಗಿದ್ದ 27ರ ಹರೆಯದ ಯುವಕ ನಗರದ ಬಪ್ಪಳಿಗೆ ದರ್ಖಾಸ್ ನಿವಾಸಿ ದೀಕ್ಷಿತ್ ವಿದ್ಯುತ್ ಆಘಾತದಿಂದ ನೆಲಕ್ಕುರುಳಿದ್ದ. ಈತನಿಗೆ ಚಿಕಿತ್ಸೆ ನೀಡಿದರೂ ಪ್ರಯೋಜನವಾಗದೆ ಫೆ. 10ರಂದು ಮೃತಪಟ್ಟಿದ್ದ. ಆತನಿಗೆ ಒಂದನೇ ಮಹಡಿಯ ಗೋಡೆಯ ಸನಿಹದಲ್ಲಿದ್ದ ಅಪಾಯಕಾರಿ ಸ್ಥಿತಿಯಲ್ಲಿದ್ದ ಟ್ರಾನ್ಸ್ ಫಾರ್ಮರ್ ಮೃತ್ಯು ಸ್ವರೂಪಿಯಾಗಿತ್ತು.
ಈ ಘಟನೆ ನಡೆದದ್ದು ಎಪ್ರಿಲ್ 25ರಂದು ಸುರತ್ಕಲ್ ಬಲ್ಬ್ ಬದಲಿಸಲು ಹೋಗಿ ಸಂಕಷ್ಟ
ಸಮೀಪದ ಸೂರಿಂಜೆ ಶಿಬರೂರಿನಲ್ಲಿ. ಮನೆಯ ಬಲ್ಬ್ವೋಲ್ಟೇಜ್ ಸಮಸ್ಯೆಯಿಂದ ತನ್ನ ಕಾರ್ಯವನ್ನು ನಿಲ್ಲಿಸಿತ್ತು. ಅದನ್ನು ಬದಲಾಯಿಸಲೆಂದು ಹೊರಟ ದಿನೇಶ್‌ಗೆ ಶಾಕ್ ಹೊಡೆದು ನೆಲಕ್ಕುರುಳಿದ್ದರು. ತತ್‌ಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಕೊಕ್ಕೆ ಜೀವ ತೆಗೆದಿತ್ತು
ಕೊಡಿಯಾಲ ಗ್ರಾಮದ ರಾಮಕುಮೇರಿನ ನಿವಾಸಿ ಕೊಡಿಯಾಲ ಗ್ರಾಮದ ರಾಮಕುಮೇರಿನ ನಿವಾಸಿಯಾಗಿದ್ದ ಪಂಜ ಸರಕಾರಿ ಜೂನಿಯರ್ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ನಿಶಾಂತ್ ಮನೆ ಸನಿಹ ಮಾವಿನ ಮರವಿತ್ತು. ಮೇ 19ರಂದು ಮಾವನ್ನು ಕೊಯ್ಯ ಲೆಂದು ದೋಟಿಗೆ ಅಲ್ಯುಮಿನಿಯಂ ಕೊಕ್ಕೆಯನ್ನು ಕಟ್ಟಿ ಹೊರಟಿದ್ದ. ಹಣ್ಣನ್ನು ಕೊಯ್ಯುತ್ತಿರುವಾಗ ವಿದ್ಯುತ್ ಲೈನ್‌ಗೆ ಕೊಕ್ಕೆ ತಾಗಿ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟಿದ್ದ. ಫ್ರಿಡ್ಜ್ ದೇಹವನ್ನೇ ತಣ್ಣಗಾಗಿಸಿತ್ತು
ಮದ್ಲ ಪಟ್ಟುಮೂಲೆ ನಿವಾಸಿ ಹರಿಯಪ್ಪ ಮೂಲ್ಯ ಅವರ ಪುತ್ರ 22ರ ಹರೆಯದ ಸುರೇಶ್ ವೆಲ್ಡಿಂಗ್ ಕೆಲಸ ಮಾಡುತ್ತಿದ್ದರು. ಮೇ 22ರಂದು ರೆಫ್ರಿಜರೇಟರ್ ತೆರೆದು ಏನಕ್ಕೊ ಕೈ ಹಾಕಿದ್ದರು. ಅದರ ವಯರಿಂಗ್ ದೋಷಯುಕ್ತವಾಗಿದ್ದರಿಂದ ಅವರಿಗೆ ವಿದ್ಯುತ್ ಆಘಾತವಾಗಿ ಅಸ್ವಸ್ಥಗೊಂಡಿದ್ದರು. ಅವರನ್ನು ಪುತ್ತೂರಿನ ಆಸ್ಪತ್ರೆಗೆ ಕೊಂಡೊಯ್ದರೂ ಉಳಿಸಿಕೊಳ್ಳುವಲ್ಲಿ ಮನೆ ಯವರು ಯಶಸ್ವಿಯಾಗಲಿಲ್ಲ. ಕಬ್ಬಿಣದ ಏಣಿಯಲ್ಲಿ ವಿದ್ಯುತ್
ಬಂಟ್ವಾಳ ತಾಲೂಕಿನ ಪುದು ಗ್ರಾಮದ ಅಮ್ಮೆಮಾರ್ ನಿವಾಸಿ ಮುಬಾರಕ್ ಫರಂಗಿಪೇಟೆ ಸಮೀಪದ ಪೇರಿಮಾರ್‌ನ ಮಸೀದಿ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದರು. ಮೇ 30ರಂದು ಮಧ್ಯಾಹ್ನ ವೇಳೆಗೆ ನೆಲದಲ್ಲಿ ಬಿದ್ದುಕೊಂಡಿದ್ದ ವಿದ್ಯುತ್ ವಯರ್‌ಗಳು ಕಬ್ಬಿಣದ ಏಣಿಗೆ ತಗಲಿ ಮುಬಾರಕ್ ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಘಟನೆಯಲ್ಲಿ ಇನ್ನೋರ್ವ ಕಾರ್ಮಿಕ ಗಂಭೀರ ಗಾಯಗೊಂಡಿದ್ದರು. ವಾಶಿಂಗ್ ಮೆಶಿನ್ ಶಾಕ್
ಉಜಿರೆ ಅತ್ತಾಜೆಯ ಎ.ಸಿ. ಮೆಕ್ಯಾನಿಕ್ ಮುಹಮ್ಮದ್ ಸಿರಾಜುದ್ದೀನ್ ಬೆಳ್ತಂಗಡಿ ತಾ|ನ ಕಕ್ಕಿಂಜೆ ಸಮೀಪ ಸಂಬಂಧಿಕರ ಮನೆಯಲ್ಲಿ ಜೂ. 1ರಂದು ಸಂಜೆ ವಾಶಿಂಗ್ ಮೆಶಿನ್ ದುರಸ್ತಿಗೆಂದು ತೆರಳಿದ್ದ. ಇದ್ದಕ್ಕಿದ್ದಂತೆ ವಿದ್ಯುತ್ ಪ್ರವಹಿಸಿದ ಕಾರಣ ಸ್ಥಳದಲ್ಲೆ ತೀವ್ರ ಆಘಾತಕ್ಕೊಳಗಾಗಿದ್ದರು. ತತ್‌ಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆ ಮತ್ತು ಉಜಿರೆಯ ಖಾಸಗಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾದರೂ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದ. ಇಂತಹ ಘಟನೆಗಳು ಅಲ್ಲಲ್ಲಿ ನಡೆಯುತ್ತಲೇ ಇರುತ್ತವೆ ಕೂಡ. ಆದರೂ ಅದರಿಂದ ಪಾಠ ಕಲಿತವರೆಷ್ಟು ಜನ?. ಪ್ರತಿ ಸಲವೂ ನಾವು ತಪ್ಪು ಮಾಡಿಯೇ ಪಾಠ ಕಲಿಯ ಬೇಕೆಂದಿಲ್ಲ. ಸಮಾಜದಲ್ಲಿ ನಡೆಯುವ ಬೆಳವಣಿಗೆಗಳಿಂದ ಪಾಠ ಕಲಿಯುವ ಅಗತ್ಯವಿದೆ. ವಿದ್ಯುತ್ ವಿಷಯದಲ್ಲೂ ಅಷ್ಟೇ ಜಾಗ್ರತೆ ವಹಿಸಿದರೆ ಜೀವನ. ವಿದ್ಯುತ್ ಮಿಲಿ ಎಂಪಿರಿಯರ್ ದೇಹದ ಮೇಲಿನ ಪರಿಣಾಮ 0.2 2 ವಿದ್ಯುತ್ ಸ್ಪರ್ಶದ ಅನುಭವ (ಲಘು)
1 2 + ನೋವಿನ ಆಘಾತ
3 5 ಮಕ್ಕಳಿಗೆ ಅಪಾಯ
6 10 ವಯಸ್ಕರಿಗೂ ಅಪಾಯ ಮಟ್ಟ
10 20 ಸಂಪರ್ಕದ ಹಂತದಲ್ಲಿ ಸೆಳವು ಸಂಭವ
22 ಪಾರಾಗಲು ಸಾಧ್ಯವೇ ಇಲ್ಲ.
20 50 ಅಂಗಾಂಗ ವೈಫಲ್ಯ, ಅಸ್ವಸ್ಥತೆ, ಪ್ರಜ್ಞಾ ಹೀನತೆ
50 100 ಮಾರಣಾಂತಿಕ ಹೃದಯಸ್ತಂಭನ ಸಂಭವ. ತಪ್ಪಿಸುವುದು ಹೇಗೆ?
1 ಬಲ್ಬ್ ಬದಲಿಸುವಾಗಲೂ ಕೈಯನ್ನು ಒದ್ದೆ ಇರದಂತೆ ನೋಡಿಕೊಳ್ಳಿ, ಪ್ಲಾಸ್ಟಿಕ್ ಕೈಗವಸನ್ನು ಹಾಕಿಕೊಳ್ಳಿ.
2.ಮಳೆಗಾಲದಲ್ಲಿ ವಿದ್ಯುತ್ ಕಂಬ, ಟ್ರಾನ್ಸ್‌ಫಾರ್ಮರ್‌ಗಳ ಬಳಿ ಹೋಗದಿರಿ.
3. ವಿದ್ಯುತ್ ಶಾಕ್ ಹೊಡೆದ ವ್ಯಕ್ತಿಯನ್ನು ಮುಟ್ಟುವ ಮುನ್ನ ಮೈನ್ ಸ್ವಿಚ್
ಆಫ್ ಮಾಡಿ.
4.ಉತ್ತಮ ಗುಣಮಟ್ಟದ ವಯರಿಂಗ್ ಹಾಕಿಸಿ.
5.ವಿದ್ಯುತ್ ಕೆಲಸಕ್ಕೆ ಮೆಸ್ಕಾಂ ನಿಯೋಜಿತ ಸಿಬಂದಿಯ ನೆರವು ತೆಗೆದುಕೊಳ್ಳಿ.
6.ವಿದ್ಯುತ್ ಬಳಸಿ ಮಾಡುವ ಕೆಲಸದಲ್ಲಿ ವಯರ್‌ಗಳು ನೀರಿಗೆ ತಾಗದಂತೆ, ಅದರಲ್ಲಿ ಲೂಸ್ ಕನೆಕÏನ್ ಇರದಂತೆ ನೋಡಿಕೊಳ್ಳಿ.
7.ವಿದ್ಯುತ್ ತಂತಿ ತುಂಡಾಗಿ ರುವುದು ಕಂಡರೆ ತುರ್ತು ಮೆಸ್ಕಾಂ ಗಮನಕ್ಕೆ ತನ್ನಿ. ವಿದ್ಯುತ್ ಸಮಸ್ಯೆಗಳಿದ್ದರೆ ಕರೆಮಾಡಿ ಮೆಸ್ಕಾಂ ಟೋಲ್ ಫ್ರೀ ನಂಬರ್
1912