Advertisement
ತಾಲೂಕಿನ ಸಾಲೋಟಗಿ ಗ್ರಾಮದಲ್ಲಿ ರವಿವಾರ ಹಮ್ಮಿಕೊಂಡಿದ್ದ ಸಾಲೋಟಗಿ ಜಿಪಂ ವ್ಯಾಪ್ತಿಯ ಕಾಂಗ್ರೆಸ್ ಕರ್ಯಕರ್ತರ ಬೃಹತ್ ಸಭೆ ಉದ್ದೇಶಿಸಿ ಅವರು ಮಾತನಾಡಿದರು. 2013ರಲ್ಲಿ ಭೀಕರ ಬರಗಾಲಕ್ಕೆ ತುತ್ತಾಗಿರುವ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗಿತ್ತು. ಟ್ಯಾಂಕರ್‌ಗಳ ಮೂಲಕ ನೀರು ಹಾಕುವ ಪರಿಸ್ಥಿತಿ ಕಣ್ಣಾರೆ ಕಂಡು ಇದಕ್ಕೊಂದು ಶಾಶ್ವತ ಪರಿಹಾರಕ್ಕಾಗಿ ಬಹುಹಳ್ಳಿ ಕುಡಿಯುವ ನೀರಿನ ಯೋಜನೆ ಪ್ರಾರಂಭಿಸಲಾಗಿದೆ.
ನೀರಿನ ಅಭಾವ ಕಡಿಮೆಯಾಗಿದೆ. ಗುತ್ತಿ ಬಸವಣ್ಣ ಏತನಿರಾವರಿ 120 ಕಿ.ಮೀ. ಸ್ಥಗಿತವಾಗಿದ್ದು ಇಂದು 203 ಕಿ.ಮೀ. ವಿಸ್ತರಿಸಲಾಗಿದೆ. ಹೊರ್ತಿ ಸುತ್ತ ಮುತ್ತಲಿನ ರೈತರ ಭೂಮಿಗೆ ಮುಳವಾಡ ಏತ ನೀರಾವರಿ ಯೋಜನೆ ಮುಂದುವರಿದ ಭಾಗವಾಗಿ ನಾಲ್ಕೂವರೆ ಟಿಎಂಸಿ ನೀರು ಬಳಕೆ ಮಾಡುವಂತೆ ಯೋಜನೆ ತಯಾರಿಸಲಾಗಿದೆ ಎಂದರು. ಪಟ್ಟಣದ ಸೌಂದಯಿಕರಣ, ಮಿನಿ ವಿಧಾನಸೌಧ, ರಸ್ತೆಗಳ ಅಗಲೀಕರಣ, ವಿದ್ಯುತ್ ವ್ಯವಸ್ಥೆ , ತಾಲೂಕಿನಲ್ಲಿ ಬಹುತೇಕ ಪಿಡಬ್ಲೂಡಿ ರಸ್ತೆಗಳ ಸುಧಾರಣೆ ಹೀಗೆ ಅನೇಕ ಯೋಜನೆಗಳ ಜೊತೆ 12ನೇ ಶತಮಾನದ ಬಸವಣ್ಣನ ಸಂದೇಶದಂತೆ ಸರ್ವ ಸಮುದಾಯಕ್ಕೆ ಸಾಮಾಜಿಕ ನ್ಯಾಯ ನೀಡಿದ್ದೇನೆ. ಸಂಸದಿಯ ವ್ಯವಸ್ಥೆಯಲ್ಲಿ ಒಬ್ಬ ಶಾಸಕನಾಗಿ ತಾಲೂಕಿನ ಸಮಸ್ಯೆಗಳ ಬಗ್ಗೆ ಕರ್ನಾಟಕ ರಾಜ್ಯದಲ್ಲಿಯೇ ಅತಿ ಹೆಚ್ಚು ಪ್ರಶ್ನೆಯನ್ನು ಕೇಳಿ ಕ್ಷೇತ್ರದ ಅಭಿವೃದ್ಧಿ ಮಾಡಿದ್ದೇನೆ. ಚುನಾವಣಾ ಪೂರ್ವದಲ್ಲಿ ನಾನು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇನೆ. ದುಡಿದವರಿಗೆ ಮತದಾನದ ಮೂಲಕ ಕೂಲಿ ಕೊಡಿ ಎಂದು ಮನವಿ ಮಾಡಿದರು.
Related Articles
Advertisement
ತಾಪಂ ಸದಸ್ಯ ಜೀತಪ್ಪ ಕಲ್ಯಾಣಿ, ಪುರಸಭೆ ಸದಸ್ಯ ಶ್ರೀಕಾಂತ ಕುಡಿಗನೂರ, ಅಣ್ಣಾಸಾಹ ಹಂಚಿನಮನಿ, ಇಲಿಯಾಸ್ ಬೋರಾಮಣಿ, ಸೋಮು ಮ್ಯಾಕೇರಿ, ಶಿವಯೋಗಪ್ಪ ಚನ್ನಗೊಂಡ, ವಿಶ್ವನಾಥ ಚವ್ಹಾಣ, ಹನುಮಂತರಾಯಗೌಡ ಪಾಟೀಲ, ಭೀಮಣ್ಣ ಕೌಲಗಿ, ಧನಸಿಂಗ್ ಚವ್ಹಾಣ, ರಾಜುಗೌಡ ಪಾಟೀಲ, ಸಿದ್ದರಾಯ ಐರೋಡಗಿ, ಸೋಮಯ್ಯ ಹಿರೇಮಠ, ಅದಂ ಅಗರಖೇಡ, ಕಾಶೀಂ ಕೋಮಡಿ ಸೇರಿದಂತೆ ಅನೇಕ ಮುಖಂಡರು ವೇದಿಕೆಯಲ್ಲಿದ್ದರು