ಕಂಪ್ಲಿ: ನಮ್ಮ ನಾಡಿನ ಭವ್ಯತೆಯನ್ನು ಸಾರುವ ಇತಿಹಾಸದ ಕುರುಹುಗಳನ್ನು ನಮ್ಮ ಮುಂದಿನ ಪೀಳಿಗೆಗೆ ಉಳಿಸಿ ರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಶಾಸಕ ಜೆ.ಎನ್.ಗಣೇಶ್ ತಿಳಿಸಿದರು.
ಅವರು 2021-22ನೇ ಸಾಲಿ ರಾಜ್ಯ ಪುರಾತತ್ವ ಸಂಗ್ರಾಲಯ ಮತ್ತು ಪರಂಪರೆ ಇಲಾಖೆ ಅನುದಾನದ ಯೋಜನೆಯಡಿಯಲ್ಲಿ ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ಪಟ್ಟಣದ ಇತಿಹಾಸ ಪ್ರಸಿದ್ಧ ವಿಜಯನಗರ ಸಾಮ್ರಾಜ್ಯದ ಸ್ಥಾಪನೆಗೆ ನಾಂದಿ ಹಾಡಿದ ಕಂಪ್ಲಿಯ ಐತಿಹಾಸಿಕ ಗಂಡುಗಲಿ ಕುಮಾರ ರಾಮನ ಕೋಟೆಯ ಕೋಟೆ ದ್ವಾರ ಬಾಗಿಲು ಮತ್ತು ಮಂಟಪಗಳ ಸಂರಕ್ಷಣಾ ಕಾಮಗಾರಿ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಕಂಪ್ಲಿ ಜನತೆಯ ಬಹುದಿನಗಳ ಕನಸಾಗಿದ್ದ ಶಿಥಿಲಗೊಂಡ ಗಂಡುಗಲಿ ಕುಮಾರರಾಮನ ಕೋಟೆ ದ್ವಾರದ ಜೀರ್ಣೋದ್ಧಾರದ ಕನಸು ಇಂದು ನನಸಾಗುತ್ತಿದೆ. ಕೋಟೆಯನ್ನು ಸಂಪೂರ್ಣವಾಗಿ ಜೀರ್ಣೋದ್ಧಾರ ಮಾಡುವುದಕ್ಕೆ ಇಲಾಖೆಯಲ್ಲಿ ಅವಕಾಶವಿಲ್ಲದಿದ್ದರೂ ಸಹಿತ ಕೋಟೆ ಈಗ ಹೇಗಿದೆಯೋ ಹಾಗೆಯೇ ಕೋಟೆಯ ಗೋಡೆ ಮತ್ತು ಮಂಟಪಗಳನ್ನು ದುರಸ್ತಿಗೊಳಿಸಿ ಸಂರಕ್ಷಿಸಲಾಗುವುದು ಎಂದರು.
ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ಪುರಾತತ್ವ ಸಂರಕ್ಷಣಾ ಸಹಾಯಕರಾದ ಚಂದ್ರಶೇಖರ ವಿ. ಮಸಳಿ ಮಾತನಾಡಿ, ಕೋಟೆ ಸಂರಕ್ಷಣೆಗೆ ಇಲಾಖೆಯಿಂದ 1 ಕೋಟಿ ರೂ. ಮಂಜೂರಾಗಿದ್ದು, ಕೋಟೆಯ ಮೂಲಕ್ಕೆ ಧಕ್ಕೆ ಬಾರದಂತೆ ಶಿಥಿಲಗೊಂಡಿರುವ ಭಾಗಗಳನ್ನು ದುರಸ್ತಿಗೊಳಿಸಲಾಗುವುದು. ಅತಿಕ್ರಮಗೊಂಡ ಸ್ಥಳವನ್ನು ಬಿಡಿಸಿಕೊಂಡು ಮಂಟಪಗಳನ್ನು ದುರಸ್ತಿಗೊಳಿಸಿ ಕೋಟೆಯನ್ನು ಆಕರ್ಷಿಸುವಂತೆ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಲಡ್ಡು ಹೊನ್ನೂರವಲಿ, ಭಟ್ಟ ಪ್ರಸಾದ್, ವೀರಾಂಜಿನೇಯಲು, ವೀರಾಂಜಿನೇಯಲು, ಮುಖಂಡರಾದ ಕೆ.ಚಂದ್ರಶೇಖರ್,
ನಾಗಲಾರೆಪ್ಪ, ಕಂಬತ್ ಕೃಷ್ಣ, ಕಂಬತ್ ರಮೇಶ್, ಬಾಗಲಿ ಮಂಜುನಾಥ್, ಮಣ್ಣೂರು ನವೀನ್, ಕಟ್ಟೆ ಮಾರೆಪ್ಪ, ಕಾರಕಲ್ ಮನೋಹರ್, ಯಾಳಿ³ ಅಬ್ದುಲ್ ಮುನಾಫ್, ಹುಸೇನ್‌ಸಾಬ್, ಜಾಫರ್, ಜಿ. ಪ್ರಕಾಶ್, ಮಹಿಳಾ ಮುಖಂಡರಾದ ಹೊನ್ನಳ್ಳಿ ಶ್ರೀದೇವಿ, ರತ್ನಮ್ಮ, ಲಬೇದ್ ಲಕ್ಷ್ಮೀ, ಷಣ್ಮುಖಪ್ಪ, ಹಬೀಬ್ ರೆಹಮಾನ್ ಇದ್ದರು.