Advertisement
ಮಹಾರಾಷ್ಟ್ರದ ಸೋಲಾಪುರ ಕಾಡಾ ಸದಸ್ಯ ಕಾರ್ಯದರ್ಶಿ ಹಾಗೂ ಎಸ್‌ಇ ಅವರು ತಮ್ಮ ರಾಜ್ಯದ ಔಜ್, ಚಿತಪುರ, ಖಾನಾಪುರ ಹಾಗೂ ಹಿಳ್ಳಿ ಬ್ಯಾರೇಜುಗಳಿಗೆ ನೀರು ತುಂಬಿಸುವಂತೆ ಫೆ. 6ರಂದು ಕೆಬಿಜೆಎಲ್‌ಎಲ್ ವ್ಯವಸ್ಥಾಪಕರಿಗೆ ಪತ್ರ ಬರೆದಿದ್ದಾರೆ. ಈ ಕೋರಿಕೆ ಮೇರೆಗೆ ನಾರಾಯಣಪುರಹಾಗೂ ರಾಂಪುರ ಕಾಲುವೆ ವಿಭಾಗದ ಮುಖ್ಯ ಅಭಿಯಂತರರಿಗೆ ಫೆ.16ರಂದು ಪತ್ರ ಬರೆಯಲಾಗಿದೆ. ಕೆಬಿಜೆಎನ್‌ಎಲ್ ವ್ಯವಸ್ಥಾಪಕರು ರಾಜ್ಯದ ನಾರಾಯಣಪುರ ಬಳಿ ಕೃಷ್ಣಾ ನದಿಗೆ ನಿರ್ಮಿಸಿರುವ ಬಸವಸಾಗರ ಜಲಾಶಯದಿಂದ ಇಂಡಿ ಶಾಖಾ ಕಾಲುವೆ ಮಾರ್ಗವಾಗಿ ಅಗತ್ಯ ಬಿದ್ದಲ್ಲಿ ಪೊಲೀಸ್ ಭದ್ರತೆಯಲ್ಲಿ ನೀರು ಹರಿಸುವಂತೆ ಸೂಚಿಸಿದ್ದಾರೆ. ಭೀಮಾ ನದಿಗೆ ಗಡಿ ಭಾಗದಲ್ಲಿ ಮಹಾರಾಷ್ಟ್ರ ಹಾಗೂ ಕರ್ನಾಟಕ ತಲಾ 4 ಬ್ಯಾರೇಜು
ನಿರ್ಮಿಸಿವೆ. ಭೀಮಾ ನದಿಗೆ ಹರಿಯುವ ನೀರನ್ನು ಕರ್ನಾಟಕದ 4 ಬ್ಯಾರೇಜುಗಳಲ್ಲಿ ಸಂಗ್ರಹಿಸದೆ, ತೂಬುಗಳನ್ನು ತೆರೆದು ಮಹಾರಾಷ್ಟ್ರದ ಬ್ಯಾರೇಜಿಗೆ ಹರಿಸಲು ಸೂಚಿಸಲಾಗಿದೆ.
Related Articles
Advertisement
ಬ್ಯಾರೇಜುಗಳ ವಿವರ: ಉಭಯ ರಾಜ್ಯಗಳ ಗಡಿಯಲ್ಲಿ ನಿರ್ಮಾಣಗೊಂಡಿರುವ ಸಮಾನಾಂತರ 8 ಬ್ಯಾರೇಜುಗಳಲ್ಲಿ ಕ್ರಮ ಸಂಖ್ಯೆಯಲ್ಲಿ 1ನೇ ಗೋವಿಂದಪುರ, 2ನೇ ಉಮರಾಣಿ, 5ನೇ ಚಣೇಗಾಂವ ಹಾಗೂ 6ನೇ ಕ್ರಮ ಸಂಖ್ಯೆಯ ಹಿಂಗಣಿ ಬ್ಯಾರೇಜು ಕರ್ನಾಟಕಕ್ಕೆ ಸೇರಿವೆ. 3ನೇ ಔಜ್, 4ನೇ ಚಿತಪುರ, 7ನೇ ಖಾನಾಪುರ ಹಾಗೂ 8ನೇ ಕ್ರಮ ಸಂಖ್ಯೆಯ ಹಿಳ್ಳಿ ಬ್ಯಾರೇಜು ಮಹಾರಾಷ್ಟ್ರಕ್ಕೆ ಸೇರಿವೆ.
ಸಾಲದ ನೀರುಕಳೆದ ವರ್ಷ ಕುಡಿವ ನೀರಿಗಾಗಿ ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯಗಳು ತಮ್ಮ ಜಲಾಶಯಗಳಿಂದ ನೆರೆಯ ರಾಜ್ಯಗಳಿಗೆ ನದಿಗಳ ಮೂಲಕ ನೀರು ಹರಿಸುವ ಕುರಿತು ಪರಸ್ಪರ ಒಪ್ಪಂದ ಮಾಡಿಕೊಳ್ಳಲಾಗಿತ್ತು. ರಾಜ್ಯದಿಂದ ಕಳೆದ ಬಾರಿ ಪೂರ್ಣ ನೀರು ಹರಿಸಲಾಗದ ಕಾರಣ ಈಗ ಸಾಲದ ನೀರು ಹರಿಸಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಡಾ| ಎಂ. ಬಿ.ಪಾಟೀಲ ಸ್ಪಷ್ಟಪಡಿಸಿದ್ದಾರೆ. ಕಳೆದ ವರ್ಷ ರಾಜ್ಯದಿಂದ 1.2 ಟಿಎಂಸಿ ಅಡಿ ನೀರನ್ನು ಮಹಾರಾಷ್ಟ್ರಕ್ಕೆ ಹರಿಸುವುದು ಬಾಕಿಯಿತ್ತು. ಪ್ರಸಕ್ತ ವರ್ಷ ಹರಿಸುವಂತೆ ಮಹಾರಾಷ್ಟ್ರ ಸರ್ಕಾರ ಕೋರಿದೆ. ಈ ಹಿನ್ನೆಲೆಯಲ್ಲಿ ಈಗ ಭೀಮಾ ನದಿ ಮೂಲಕ ಆ ರಾಜ್ಯದ ಬ್ಯಾರೇಜುಗಳಿಗೆ ನೀರು ಹರಿಸುವುದು ತಪ್ಪಲ್ಲ. ರಾಜ್ಯಕ್ಕೂ ಮಾರಕವಲ್ಲ.
– ಡಾ| ಕೃಷ್ಣ ಕೊಲ್ಹಾರ ಕುಲಕರ್ಣಿ,
ನೀರಾವರಿ ತಜ್ಞರು – ಜಿ.ಎಸ್.ಕಮತರ