Advertisement

ಉಜಿರೆ ಕಾಲೇಜಿನ ನಾಟಕ ತಂಡ ರಾಷ್ಟ್ರ ಮಟ್ಟಕ್ಕೆ

02:46 PM Jan 03, 2018 | Team Udayavani |

ಬೆಳ್ತಂಗಡಿ: ಚೆನ್ನೈಯಲ್ಲಿ ನಡೆದ 33ನೇ ದಕ್ಷಿಣ ಭಾರತ ಅಂತರ್‌ ವಿಶ್ವವಿದ್ಯಾಲಯ ಯುವಜನೋತ್ಸವದಲ್ಲಿ ಉಜಿರೆ ಎಸ್‌.ಡಿ.ಎಂ. ಕಾಲೇಜಿನ ರಂಗ ಅಧ್ಯಯನ ಕೇಂದ್ರದ ಮಾರಿಕಾಡು ನಾಟಕ ತಂಡ ಅತ್ಯುತ್ತಮ ಸಾಧನೆಯೊಂದಿಗೆ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದೆ.

Advertisement

ಈ ತಂಡವು ಸೆಪ್ಟಂಬರ್‌ನಲ್ಲಿ ಕಾರ್ಕಳದ ಭುವನೇಂದ್ರ ಕಾಲೇಜಿನಲ್ಲಿ ನಡೆದ ವಿವಿ ಮಟ್ಟದ ನಾಟಕ ಸ್ಪಧೆಯಲ್ಲಿ ಭಾಗವಹಿಸುವುದರೊಂದಿಗೆ 17 ತಂಡಗಳೊಂದಿಗಿನ ಪೈಪೋಟಿಯಲ್ಲಿ ಪ್ರಥಮ ಸ್ಥಾನದೊಂದಿಗೆ ಎಸ್‌.ಡಿ.ಎಂ. ಇತಿಹಾಸದಲ್ಲೇ ಮೊದಲ ಬಾರಿ ಎಂಬಂತೆ ಮಂಗಳೂರು ವಿವಿಯನ್ನು ಸೌತ್‌ ಝೋನ್‌ನಲ್ಲಿ ಪ್ರತಿನಿಧಿಸುವ ಅರ್ಹತೆ ಗಳಿಸಿ ಉತ್ತಮ ನಿರ್ದೇಶನ, ಉತ್ತಮ ನಟಿ, ಉತ್ತಮ ಬೆಳಕು, ರಂಗಸಜ್ಜಿಕೆ, ಪ್ರಶಸ್ತಿ ಗಳಿಸಿ ಪ್ರಥಮ ಸ್ಥಾನದೊಂದಿಗೆ ದಕ್ಷಿಣ ವಲಯ ಮಟ್ಟಕ್ಕೆ ಆಯ್ಕೆಯಾಗಿತ್ತು.

ಡಾ| ಚಂದ್ರಶೇಖರ್‌ ಕಂಬಾರರ ರಚನೆಯ ಮಾರಿಕಾಡು ನಾಟಕ ಮೂಲತಃ ವಿಲಿಯಂ ಶೇಕ್ಸ್‌ಪಿಯರ್‌ನ ಮ್ಯಾಕ್‌ಬೆತ್‌
ನಾಟಕದ ಕನ್ನಡ ರೂಪಾಂತರವಾಗಿದೆ. ಪ್ರಸ್ತುತ ಈ ನಾಟಕವು ಎಸ್‌.ಡಿ.ಎಂ. ರಂಗ ಅಧ್ಯಯನ ಕೇಂದ್ರದ ನಿರ್ದೇಶಕಶಿವಶಂಕರ್‌ ನಿನಾಸಂ ಅವರ ವಿನ್ಯಾಸ- ನಿರ್ದೇಶನ, ಸುಮಾರು 13 ಮಂದಿ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯಲ್ಲಿ ಅತ್ಯುತ್ತಮವಾಗಿ ಮೂಡಿಬಂದಿದೆ.

ದ. ವಲಯ ಮಟ್ಟದಲ್ಲಿ ನಡೆದ 33ನೇ ದ. ಭಾರತ ಅಂತರ್‌ ವಿವಿ ಯುವ ಜನೋತ್ಸವದಲ್ಲಿ ಮಂಗಳೂರು ವಿವಿಯನ್ನು
ಪ್ರತಿನಿಧಿಸಿದ್ದ ನಾಟಕ ತಂಡ 31 ವಿವಿಗಳ ನಡುವಿನ ಪೈಪೋಟಿಯೊಂದಿಗೆ ತೃತೀಯ ಸ್ಥಾನ ಗಳಿಸಿ ರಾಂಚಿಯಲ್ಲಿ ನಡೆಯುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಗೊಂಡಿದೆ.

ಪಾತ್ರವರ್ಗ
ಪಾತ್ರವರ್ಗದಲ್ಲಿ ರಂಗ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳಾದ ಅನ್ವಿತ್‌ ಗೌಡ, ಅಂಕಿತ್‌ ಆಚಾರ್ಯ, ಶಶಿಪ್ರಭಾ, ಸಂಪದ ಎಸ್‌. ಭಾಗವತ್‌, ಚೇತನ್‌ ಡಿ., ಪದ್ಮರೇಖಾ ಕೆ. ಭಟ್‌, ನಿಶಾ ಭಟ್‌ ಉಜಿರೆ, ಅರ್ಚನಾ, ಶಿಲ್ಪಾಶ್ರೀ, ಶರಣ್‌ ಕುಮಾರ್‌, ಸಿಂಧು ಲಕ್ಷ್ಮೀ, ಆದಿತ್ಯಾ ದೊಂಡೋಲೆ ನಟಿಸಿ ಪಾತ್ರಕ್ಕೆ ಜೀವ ತುಂಬುವಲ್ಲಿ ಯಶಸ್ವಿಯಾಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next