Advertisement
ಪೈವಳಿಕೆ ಗ್ರಾ.ಪಂ.ನ ಸಂಬಂಧಪಟ್ಟವರಲ್ಲಿ ಈ ರಸ್ತೆಯ ದುಃಸ್ಥಿತಿ ಬಗ್ಗೆ ಸಾರ್ವಜನಿಕರು ಹಲವು ಬಾರಿ ಹೇಳಿದರೂ, ಅವರು ಇತ್ತ ಗಮನಹರಿಸುವುದೇ ಇಲ್ಲ ಎಂಬ ಆರೋಪ ಕೇಳಿಬಂದಿದೆ. ಆದ್ದರಿಂದ ಪಂಚಾಯತ್ ಅಧ್ಯಕ್ಷೆಯ ಗಮನಕ್ಕೆ ತರಲು ಸಿದ್ಧತೆ ನಡೆಯುತ್ತಿದೆ. ಈ ರಸ್ತೆಯ ಆಸುಪಾಸುಗಳಲ್ಲಿ ಹೆಚ್ಚು ಕಡಿಮೆ 30 ರಿಂದ 40ರಷ್ಟು ಮನೆಗಳಿದ್ದು, ಶೋಚನೀಯ ರಸ್ತೆಯಿಂದಾಗಿ ಇಲ್ಲಿನ ನಿವಾಸಿಗಳು ಭಾರೀ ಸಂಕಷ್ಟಪಡುತ್ತಿದ್ದಾರೆ. ಪ್ರಸ್ತುತ ರಸ್ತೆಯಲ್ಲಿ ಶಾಲಾ ವಾಹನಗಳು ಕೂಡ ಸಂಚರಿಸಲು ಒಪ್ಪುತ್ತಿಲ್ಲ ಎಂಬಂತಾಗಿದೆ ಪರಿಸ್ಥಿತಿ. ಆದ್ದರಿಂದ ಮುಳಿಗದ್ದೆ – ಚಕ್ಕರಗುಳಿ ರಸ್ತೆಯನ್ನು ಕೂಡಲೇ ದುರಸ್ತಿಗೊಳಿಸಬೇಕು. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಪಂಚಾಯತ್‌ನ ಜನಪ್ರತಿನಿಧಿಗಳು ಇನ್ನಾದರೂ ಈ ನಿಟ್ಟಿನಲ್ಲಿ ಸ್ಪಂದಿಸದಿದ್ದಲ್ಲಿ ಮುಂದಿನ ದಿನ ಗಳಲ್ಲಿ ಭಾರತೀಯ ಜನತಾ ಯುವಮೋರ್ಚಾದ ಚಿಪ್ಪಾರುಪದವು ಸಮಿತಿ ನೇತೃತ್ವದಲ್ಲಿ ಹೋರಾಟಕ್ಕೆ ತಯಾರು ನಡೆಸಬೇಕಾದೀತು ಎಂದು ಪ್ರಕಟನೆಯಲ್ಲಿ ಎಚ್ಚರಿಸಲಾಗಿದೆ. Advertisement
ಮುಳಿಗದ್ದೆ-ಚಕ್ಕರಗುಳಿ ರಸ್ತೆ ಸ್ಥಿತಿ ಶೋಚನೀಯ
08:20 AM Aug 02, 2017 | Harsha Rao |
Advertisement
Udayavani is now on Telegram. Click here to join our channel and stay updated with the latest news.