Advertisement

ಪ್ರಭಾವಿಯಾಗುತ್ತಿರುವ ಕೋಮುವಾದ: ಅಮೀನ್‌ಮಟ್ಟು

04:20 PM Jun 18, 2018 | |

ಶಿವಮೊಗ್ಗ: ಪ್ರಸ್ತುತ ದಿನಗಳಲ್ಲಿ ಕೋಮುವಾದ ಪ್ರಭಾವಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಅದಕ್ಕೆ ವಿರುದ್ಧವಾಗಿ ಜಾತ್ಯಾತೀತತೆಯ ಪ್ರಜ್ಞೆ ಬೆಳೆಸುವುದು ಸಾಕಷ್ಟು ಕಷ್ಟವಾಗಿದೆ ಎಂದು ಪ್ರಗತಿಪರ ಚಿಂತಕ ದಿನೇಶ್‌ ಅಮೀನ್‌ಮಟ್ಟು ಅಭಿಪ್ರಾಯಪಟ್ಟರು.

Advertisement

ನಗರದ ಕಮಲಾ ನೆಹರು ಮಹಿಳಾ ಕಾಲೇಜಿನಲ್ಲಿ ಭಾನುವಾರ ಸಂಜೆ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ವತಿಯಿಂದ ಏರ್ಪಡಿಸಿದ್ದ “ಚುನಾವಣೆ: ಒಳ, ಹೊರಗೆ’ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೋಮುವಾದ ಎನ್ನುವ ವೈರಸ್‌ ಒಮ್ಮೆ ಮನುಷ್ಯನ ಮೆದುಳಿಗೆ ಪ್ರವೇಶ ಪಡೆದರೆ ಅನ್ನ ಕೊಟ್ಟವರನ್ನು ಜನ ಮರೆತು ಬಿಡುತ್ತಾರೆ. ಕೋಮುವಾದ ಹರಡುವವರಿಗೆ ದೇಶದ ವೇದ, ಉಪನಿಷತ್ತು, ಸಂಸ್ಕತಿ, ಆಚಾರ, ವಿಚಾರದ
ಬಗ್ಗೆ ಕೇಳಿದರೇ ಗೊತ್ತಿರುವುದಿಲ್ಲ. ಇಂದಿನ ಕಾಲಘಟ್ಟದಲ್ಲಿ ಕೋಮುವಾದ ಹರಡುವುದು ಸಾಕಷ್ಟು ಸುಲಭ ಸಾಧ್ಯ ಎಂದು ಬೇಸರ ವ್ಯಕ್ತಪಡಿಸಿದರು.

ಧರ್ಮ, ಜಾತಿ ಹೆಸರಿನಲ್ಲಿ ಈ ಬಾರಿ ವಿಧಾನಸಭಾ ಚುನಾವಣೆ ನಡೆಯಿತು. ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತದೆ ಎಂಬ
ಸಾರ್ವತ್ರಿಕ ಅಭಿಪ್ರಾಯ ಕೇಳಿಬಂದರೆ, ಸಮೀಕ್ಷೆಗಳು ಕಾಂಗ್ರೆಸ್‌ ಪರವಾಗಿಯೇ ಇದ್ದವು. ಆದರೆ ಎಲ್ಲೆಡೆ ಹರಡಿದ್ದ ಕೋಮುವಾದ ಎಂಬ ವೈರಸ್‌ನ್ನು ತೊಳೆಯುವಲ್ಲಿ ಕಾಂಗ್ರೆಸ್‌ ನಾಯಕರು ವಿಫಲರಾದರು. ಪ್ರಚಾರದ ಕೊನೆಯ ದಿನಗಳಲ್ಲಿ ಕಾಂಗ್ರೆಸ್‌ ಹಿಂದೆ ಬಿತ್ತು. ಜತೆಗೆ ಕಾಂಗ್ರೆಸ್‌ ವಿರುದ್ಧ ಸಾಕಷ್ಟು ಅಪಪ್ರಚಾರ ನಡೆಸಲಾಯಿತು ಎಂದರು.

ಪ್ರಸ್ತುತ ಸನ್ನಿವೇಶವನ್ನು ಸೂಕ್ಷ್ಮವಾಗಿ ಗಮನಿಸಿದರೆ ಕೇವಲ ರಾಜಕೀಯದಲ್ಲಿ ಮಾತ್ರವಲ್ಲ, ಉದ್ಯೋಗ, ಶಿಕ್ಷಣ, ಉದ್ಯಮ, ಮಾಧ್ಯಮ ಹೀಗೆ ಎಲ್ಲಾ ಸಾಮಾಜಿಕ ಕ್ಷೇತ್ರಗಳಲ್ಲೂ ಅಹಿಂದ ವಿಸ್ತಾರವಾಗಬೇಕು. ಇಲ್ಲವಾದರೆ ಉಳಿದ ಅಹಿಂದಗಳು ಸೇರಿ ರಾಜಕೀಯ ಅಹಿಂದವನ್ನು ಮುಗಿಸುತ್ತವೆ ಎಂದು ಮಾರ್ಮಿಕವಾಗಿ ಹೇಳಿದರು. 

Advertisement

ಮಹಿಳಾ ಹೋರಾಟಗಾರ್ತಿ ಯಮುನಾ ಗಾಂವ್ಕರ್‌ “ಚುನಾವಣೆಯಲ್ಲಿ ಮಹಿಳಾ ಅನುಭವ’ ಕುರಿತು ಮಾತನಾಡಿದರು.  ಡಾ| ಎಚ್‌.ಎಸ್‌. ಅನುಪಮಾ, ಡಾ| ಸಬಿತಾ  ಬನ್ನಾಡಿ ಮತ್ತಿತರರು ಇದ್ದರು.
 

Advertisement

Udayavani is now on Telegram. Click here to join our channel and stay updated with the latest news.

Next