Advertisement

ಜಿಲ್ಲೆಯ ಕಳೆದ ವರ್ಷಕ್ಕಿಂತ ಶೇ.4ರಷ್ಟು ಬಿತ್ತನೆ

08:54 PM Oct 09, 2019 | Team Udayavani |

ದೇವನಹಳ್ಳಿ: ಜಿಲ್ಲೆಯಲ್ಲಿರುವ ಎಲ್ಲಾ ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಚಟುವಟಿಕೆ ಅಗತ್ಯ ಮಾಹಿತಿ ನೀಡಲಾಗುತ್ತಿದೆ. ಬೆಳೆಗಳ ಆಕಸ್ಮಿಕ ರೋಗ ಮತ್ತು ಕೀಟಗಳ ಬಗ್ಗೆ ಕೃಷಿ ಅಧಿಕಾರಿಗಳಿಗೆ ರೈತರು ತಕ್ಷಣ ಮಾಹಿತಿ ನೀಡುವಂತಾಗಬೇಕು. ಜಿಲ್ಲೆಯಲ್ಲಿ ಯಾವುದೇ ರೀತಿಯಲ್ಲಿ ಗೊಬ್ಬರದ ಕೊರತೆ ಇರುವುದಿಲ್ಲ ಎಂದು ಜಂಟಿ ಕೃಷಿ ನಿರ್ದೇಶಕಿ ರಾಜಸುಲೋಚನಾ ತಿಳಿಸಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದರು. ಕಳೆದ ವರ್ಷ ಶೇ.4ರಷ್ಟು ಹೆಚ್ಚು ಬಿತ್ತನೆಯಾಗಿದೆ. ವಾಡಿಕೆ ಮಳೆಗಿಂತ 26 ಮಿಮಿ ಅಧಿಕ ಮಳೆಯಾಗಿದೆ. ಜಿಲ್ಲೆಯಲ್ಲಿ ವಾರ್ಷಿಕ ವಾಡಿಕೆ ಮಳೆ ಮುಂಗಾರು ಹಂಗಾಮ ಜನವರಿಯಿಂದ ಆ.4ರವರೆಗೆ 616ಮಿಮಿ ಆಗಿದೆ. ಪ್ರಸ್ತುತ ಮಳೆ ಪ್ರಮಾಣ 642ಮಿಮಿ ಆಗಿದ್ದು, ವಾಡಿಕೆ ಮಳೆಗಿಂತ 26 ಮಿಮಿ ಹೆಚ್ಚು ಸುರಿದಿದೆ. ರೈತರು ಉತ್ತಮ ಮಳೆಯಾಗುತ್ತಿರುವುದರಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.

ರಾಗಿಬೆಳೆಗಾರರು ಬಿತ್ತನೆಗೆ ಈಗಲೂ ಮುಂದಾಗುತ್ತಿದ್ದಾರೆ. ಈಗಾಗಲೇ ಬಿತ್ತನೆ ಪ್ರಮಾಣ ರಾಗಿ 40116ಹೆಕ್ಟೇರು, ಮುಸುಕಿನ ಜೋಳ 82200ಹೆ. ಭತ್ತ 146ಹೆ. ತೃಣದಾನ್ಯಗಳು 71ಹೆ., ಪಾಪ್‌ಕಾರ್ನ್ 316ಹೆ. ತೊಗರಿ 667, ಹುರುಳಿ 477ಹೆ. ಅಲಸಂದೆ 405ಹೆ. ಅವರೆ 1255ಹೆ. ನೆಲಗಡಲೆ 190ಹೆ. ಹರಳು 102ಹೆ., ಹುಚ್ಚೆಳ್ಳು 15ಹೆ. ಸಾಸಿವೆ 98 ಹೆಕ್ಟೇರುಗಳಲ್ಲಿ ಬಿತ್ತನೆ ಕಾರ್ಯವಾಗಿದೆ.

ಜಿಲ್ಲೆಯಲ್ಲಿ ನೀರವಾರಿ ಮತ್ತು ಖುಷ್ಕಿ ಸೇರಿ 60403 ಹೆಕ್ಟೇರುಗಳಲ್ಲಿ ಕೃಷಿ ಬಿತ್ತನೆ ಗುರಿ ಪೈಕಿ 53366 ಹೆಕ್ಟೇರು ಪ್ರದೇಶದಲ್ಲಿ ಬಿತ್ತನೆಯಾಗಿದೆ. ಕಳೆದ ವರ್ಷ ಶೇಕಡ 84ರಷ್ಟು ಆಗಿತ್ತು. ಈ ಬಾರಿ ಶೇ.88ರಷ್ಟು ಬಿತ್ತನೆಯಾಗಿದೆ. ಶೇ.4ರಷ್ಟು ಹೆಚ್ಚು ಬಿತ್ತನೆಯಾಗಿದೆ. ಈಗಾಗಲೇ ಸೆ.30ಕ್ಕೆ ಮುಂಗಾರು ಹಂಗಾಮ ಮುಕ್ತಾಯವಾಗಿದೆ. ಹಿಂಗಾರು ಹಂಗಾಮಿನಲ್ಲಿ ಹುರುಳಿ ಬಿತ್ತನೆ ಮತ್ತು ನೆವೆಂಬರ್‌ ಅಂತಿಮ ಹಾಗು ಡಿಸೆಂಬರ್‌ ತಿಂಗಳಿನಲ್ಲಿ ಕಡಲೆಗೆ ಬಿತ್ತನೆ ಕಾರ್ಯಕ್ಕೆ ಸಕಾಲವಾಗಿದೆ ಎಂದು ಮಾಹಿತಿ ನೀಡಿದರು.

ತಾಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರೇವಣ್ಣ ಮನಗೋಳಿ ಮಾತನಾಡಿ, 2019ರ ಮಾಹೆಯಲ್ಲಿ ವಿವಿಧ ರಸಗೊಬ್ಬರ ನಾಲ್ಕು ಹೋಬಳಿಗಳ ವ್ಯಾಪ್ತಿಯಲ್ಲಿ ಯೂರಿಯಾ 14ಟನ್‌, ಅಮೋನಿಯಂ ಸಲ್ಫೇಟ್‌ 34.25, ಕಾಂಪ್ಲೆಕ್ಸ್‌ 689.5ಟನ್‌, ಎಸ್‌ಎಸ್‌ಪಿ 1527ಟನ್‌, ಡಿಎಪಿ 424.5ಟನ್‌, ಪೊಟಾಷ್‌ 11.25ಟನ್‌ ಇದೆ. ರೈತರು ಯಾವುದೇ ರೀತಿ ಹಿಂಜರಿಯದೆ ಸಕಾಲದಲ್ಲಿ ಎಲ್ಲ ಅವಶ್ಯಕತೆಗಳು ಪೂರ್ಣಗೊಳಲಿವೆ.

Advertisement

ಕಳೆದ ಆರೇಳು ದಿನಗಳಿಂದ ತಾಲೂಕಿನಲ್ಲಿ ಉತ್ತಮ ಮಳೆಯಾಗಿರುವುದಿರಂದ ರೈತರು ಸಂತಸದಲ್ಲಿದ್ದಾರೆ. ರಾಗಿ ಪೈರಿಗೆ ಯೂರಿಯಾ ಬೇಡಿಕೆ ಹೆಚ್ಚಾಗುವ ಮಾಹಿತಿ ಇದೆ. ತಾಲೂಕಿನ ನಾಲ್ಕು ಹೋಬಳಿ ವ್ಯಾಪ್ತಿಯಲ್ಲಿರುವ 13 ಸಹಕಾರ ಸಂಸ್ಥೆಗಳು ಮತ್ತು 14 ಖಾಸಗಿ ಸಂಸ್ಥೆಗಳಲ್ಲಿ ರಸಗೊಬ್ಬರ ವಿತರಣೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ತಾಲೂಕುವಾರು ಬಿತ್ತನೆ ಪ್ರಮಾಣ
-ದೇವನಹಳ್ಳಿ ಬಿತ್ತನೆ ಗುರಿ 12550 ಬಿತ್ತನೆ ಪ್ರಮಾಣ 10050 ಶೇಕಡವಾರು 82
-ದೊಡ್ಡಬಳ್ಳಾಪುರ ಬಿತ್ತನೆ ಗುರಿ 22489 ಬಿತ್ತನೆ ಪ್ರಮಾಣ 21250 ಶೇಕಡವಾರು 94
-ಹೊಸಕೋಟೆ ಬಿತ್ತನೆ ಗುರಿ 10609 ಬಿತ್ತನೆ ಪ್ರಮಾಣ 8423 ಶೇಕಡವಾರು 79
-ನೆಲಮಂಗಲ ಬಿತ್ತನೆ ಗುರಿ 15055 ಬಿತ್ತನೆ ಪ್ರಮಾಣ 13643 ಶೇಕಡವಾರು 91

Advertisement

Udayavani is now on Telegram. Click here to join our channel and stay updated with the latest news.

Next