Advertisement

ಶಿಕ್ಷಣ ರಂಗದಲ್ಲಿ ಹೊಸ ಚರಿತ್ರೆ ಸೃಷ್ಟಿಸುತ್ತಿದೆ ಜಿಲ್ಲೆ

06:34 PM Mar 12, 2021 | Nagendra Trasi |

ವಿಜಯಪುರ: ಜೆಇಇ ಮೇನ್ಸ್‌ನಲ್ಲಿ ಶೇ.99.31 ಅಂಕ ಪಡೆದು ಎಕ್ಸಲೆಂಟ್‌ ಪಿಯು ಕಾಲೇಜು ವಿದ್ಯಾರ್ಥಿನಿ ನಂದಿನಿ ಚೌಕಿಮಠ ಉತ್ತರ ಕರ್ನಾಟಕಕ್ಕೆ ಕೀರ್ತಿ ತಂದಿದ್ದಲ್ಲದೇ ವಿಜಯಪುರ ಜಿಲ್ಲೆಗೆ ಪ್ರಥಮ ಸ್ಥಾನ ದೊರಕಿಸಿ ಕೊಡುವ ಮೂಲಕ ಮತ್ತೂಮ್ಮೆ ಜಿಲ್ಲೆಯ ಕೀರ್ತಿಯನ್ನು ಎಕ್ಸಲೆಂಟ್‌ ಹೆಚ್ಚಿಸಿದೆ. ಈ ನಿಟ್ಟಿನಲ್ಲಿ ವಿಜಯಪುರ ಜಿಲ್ಲೆ ಶಿಕ್ಷಣ ರಂಗದಲ್ಲಿ ಹೊಸ ಚರಿತ್ರೆ ಸೃಷ್ಟಿಸುತ್ತಿದೆ ಎಂದು ಆಂಧ್ರಪ್ರದೇಶದ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ಉಪ ಕುಲಪತಿ
ಹಾಗೂ ರಾಷ್ಟ್ರೀಯ ನೂತನ ಶಿಕ್ಷಣ ನೀತಿ ಸಮಿತಿ ಸದಸ್ಯ ಪ್ರೊ| ತೇಜಸ್ವಿ ಕಟ್ಟಿಮನಿ ಹೇಳಿದರು.

Advertisement

ವಿಜಯಪುರದ ಅಥಣಿ ರಸ್ತೆಯಲ್ಲಿರುವ ಎಕ್ಸಲೆಂಟ್‌ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಜೆಇಇ ಮೇನ್ಸ್‌ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಸನ್ಮಾನಿಸಿ ಅವರು ಮಾತನಾಡಿದರು.

ಶಿಕ್ಷಣವೆಂಬುದು ಸರ್ವರ ಸ್ವತ್ತು. ಅದು ಶಾಶ್ವತ ಸಿರಿ. ಈಗಾಗಲೇ ಶೈಕ್ಷಣಿಕ ರಂಗದಲ್ಲಿ ಇಂಜಿನಿಯರಿಂಗ್‌, ವೈದ್ಯಕೀಯ ಹಾಗೂ ಕೃಷಿ ವಿಭಾಗದಲ್ಲಿ ರಾಜ್ಯಕ್ಕೆ
ಪ್ರಥಮ ರ್‍ಯಾಂಕ್‌ ತರುವ ಮೂಲಕ ಎಕ್ಸಲೆಂಟ್‌ ಗ್ರೂಪ್‌ ರಾಜ್ಯದ ಮನೆ ಮಾತಾಗಿದೆ ಎಂದರು.

ನಮ್ಮ ಮಕ್ಕಳು ಕೇವಲ ವೈದ್ಯ ಹಾಗೂ ಇಂಜಿನಿಯರ್‌ ಆಗುವ ಕನಸು ಕಾಣದೇ ಬೇರೆ ಬೇರೆ ಕ್ಷೇತ್ರಗಳಲ್ಲಿ  ಉನ್ನತ ಹುದ್ದೆ ಅಲಂಕರಿಸಿ ದಕ್ಷ ಅಧಿಕಾರಿಗಳಾಗಿ
ವಿದ್ಯಾರ್ಥಿಗಳು ಎಲ್ಲರ ಮನ ಗೆಲ್ಲುವಂತಾಗಬೇಕು. ಅಲ್ಲದೇ ಹಳ್ಳಿಗಳಿಂದ ರೂಪುಗೊಂಡ ನಮ್ಮ ದೇಶದಲ್ಲಿ ಈಗಿನ ಮಕ್ಕಳೂ ಹಳ್ಳಿಗಳಲ್ಲಿ ಸೇವೆ ಸಲ್ಲಿಸುವ ಮೂಲಕ  ದೇಶದ ಸತ್ಪ್ ಜೆಗಳೆನಿಸಿಕೊಳ್ಳಬೇಕು ಎಂದರು.

ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಮತ್ತಷ್ಟು ಹೊಸ ಹೊಸ ಅವಕಾಶಗಳು ಸೃಷ್ಟಿಯಾಗಿವೆ ಹಾಗೂ ಅಮೂಲಾಗ್ರ ಬದಲಾವಣೆಗಳಾಗಿವೆ. ಅವಕಾಶಗಳ
ಸದ್ಬಳಕೆ ವಿದ್ಯಾರ್ಥಿಗಳು ಮಾಡಿಕೊಂಡಾಗ ಬದುಕಿಗೆ ಹೊಸ ನಾಂದಿಯಾಗುತ್ತದೆ. ಎಲ್ಲದಕ್ಕಿಂತಲೂ ಹೆಚ್ಚಾಗಿ ಸಮಯ ಅರಿತವನು ಎಲ್ಲ ಹಂತಗಳಲ್ಲಿ
ಗೆಲ್ಲುವನು ಎಂದು ಅಭಿಪ್ರಾಯಪಟ್ಟರು. ಅಮ್ಮನ ಮಡಿಲು ಚಾರಿಟೇಬಲ್‌ ಟ್ರಸ್ಟ್‌ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮಾತನಾಡಿ, ಕಲಿತ ವಿದ್ಯೆ ನಮ್ಮ ಸ್ವಂತದ್ದು.
ಅದು ಯಾರೂ ಕಸಿದುಕೊಳ್ಳಲಾಗದ ಅಮೂಲ್ಯ ಸಂಪತ್ತು. ಮತ್ತೂಬ್ಬರ ಮುಂದೆ ಉದ್ಯೋಗ ಬೇಡುವವರಾಗದೇ ನೂರಾರು ನಿರುದ್ಯೋಗಿಗಳು, ಪದವೀಧರರಿಗೆ ಉದ್ಯೋಗ ನೀಡುವಂತಾಗಬೇಕು ಎಂದರು.

Advertisement

ಇದೇ ಸಂದರ್ಭದಲ್ಲಿ ವಿದ್ಯಾರ್ಥಿನಿಯನ್ನು ಹಾಗೂ ಹೆಚ್ಚು ಅಂಕ ಗಳಿಸಿದ ಇನ್ನುಳಿದ ವಿದ್ಯಾರ್ಥಿಗಳನ್ನು ಸಂಸ್ಥೆ ಪರವಾಗಿ ಗೌರವಿಸಿದ ಎಕ್ಸಲೆಂಟ್‌ ಸಮೂಹ
ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಸವರಾಜ ಕೌಲಗಿ ಮಾತನಾಡಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿ ಪಾಲಕರಾದ ಅಶೋಕ ಚೌಕಿಮಠ, ಪ್ರಾಚಾರ್ಯ ಡಿ.ಎಲ್‌.
ಬನಸೋಡೆ, ಆಡಳಿತಾಧಿಕಾರಿ ಪರಶುರಾಮ ಭಾವಿಕಟ್ಟಿ, ಉಪನ್ಯಾಸಕ ಪ್ರವೀಣ ಪಾಟೀಲ, ಪ್ರೊ| ರಾಜು ಪವಾರ, ಪ್ರೊ| ಗವಿಸಿದ್ದಪ್ಪ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next