ಬೆಳಗಾವಿ: ಮಂಡ್ಯ ಯಾರ ಜಹಗೀರೂ ಅಲ್ಲ. ಕುಮಾರಸ್ವಾಮಿ ಯವರಿಗೂ ಇದು ಗೊತ್ತಿದೆ. ಯಾವುದೇ ಜಿಲ್ಲೆಯನ್ನು ಯಾರಿಗೂ ಜಹಗೀರು ಕೊಟ್ಟಿಲ್ಲ. ಯಾವ ಜಿಲ್ಲೆ ಯಾರಪ್ಪನ ಆಸ್ತಿನೂ ಅಲ್ಲ ಎಂದು ಶಾಸಕ ಸಿ.ಟಿ. ರವಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾ ಡುತ್ತಾ, ಮೈಸೂರು ಭಾಗದ ಕುರಿತು ಮಾಜಿ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕುಮಾರ ಸ್ವಾಮಿಯ ಎಲ್ಲ ಹೇಳಿಕೆಗೆ ಪ್ರತಿಕ್ರಿಯೆ ನೀಡಬೇಕಿಲ್ಲ. ಅವರ ಹೇಳಿಕೆ ಬಗ್ಗೆ ಅವರಿಗೆ ಬದ್ಧತೆ ಇಲ್ಲ ಎಂದರು.
ಹಳೆ ಮೈಸೂರು ಭಾಗದಲ್ಲಿ ನಾವು ಸಾಕಷ್ಟು ಅಭಿವೃದ್ಧಿ ಮಾಡಿದ್ದೇವೆ. ರಿಪೋರ್ಟ್ ಕಾರ್ಡ್ ಇಡು ತ್ತೇವೆ. ದೇವೇಗೌಡರು ಪ್ರಧಾನಿ ಯಾದಾಗಿಂದಲೂ ಹಾಸನಕ್ಕೆ ವಿಮಾನ ನಿಲ್ದಾಣದ ಕನಸಿತ್ತು. ಆದರೆ ವಿಮಾನ ನಿಲ್ದಾಣ ಆಗಲು ಡಬಲ್ ಎಂಜಿನ್ ಸರಕಾರ ಬರಬೇಕಾಯಿತು. ಹಾಸನ, ಮಂಡ್ಯ ಎಲ್ಲ ಕಡೆಯೂ ನಮ್ಮ ರಿಪೋರ್ಟ್ ಕಾರ್ಡ್ ಇದೆ ಅದನ್ನು ಮುಂದಿಡುತ್ತೇವೆ. ಹಳೆ ಮೈಸೂರು ಭಾಗದಲ್ಲಿ ಫೋಕಸ್ ಮಾಡುತ್ತೇವೆ. ಆ ಭಾಗದಲ್ಲಿ ಬಹುಮತ ಬಂದರೆ ಅಧಿಕಾರಕ್ಕೆ ಬರುವುದು ಸುಲಭ. ಇದು 2008, 2018ರ ಚುನಾವಣೆಯಲ್ಲಿ ನಮಗೆ ಗೊತ್ತಾಗಿದೆ ಎಂದರು.
ಡಿಜೆ ಹಳ್ಳಿ ಗಲಭೆ ಎಸ್‌ಡಿಪಿಐ ಕೃತ್ಯ ಎಂಬ ಮಾಜಿಸ್ಟ್ರೇಟ್ ವರದಿ ಬಂದಿದೆ. ಇಂದೊಂದು ವ್ಯವಸ್ಥಿತವಾದ ಷಡ್ಯಂತ್ರ ಅಂತ ಮೊದಲೇ ಹೇಳಿ¨ªೆವು. ನಾವು ಹಿಂದೆ ಎಸ್‌ಡಿಪಿಐ ಕೃತ್ಯ ಅಂತ ಹೇಳಿದ್ದೆವು. ಈಗ ವರದಿ ಅದನ್ನು ಸಾಕ್ಷೀಕರಿಸಿದೆ ಎಂದು ಹೇಳಿದರು.
ಒಕ್ಕಲಿಗ ಮೀಸಲಾತಿ ವಿಚಾರವಾಗಿ ಪ್ರತಿಕ್ರಿಯಿಸಿದ ರವಿ, ನಾವು ಎಲ್ಲರಿಗೂ ನ್ಯಾಯ ಕೊಡಿಸುವ ಕೆಲಸ ಮಾಡುತ್ತೇವೆ ಎಂದರು.ನಾವು ಹಿಂದುತ್ವದ ಸಿದ್ಧಾಂತದ ಮೇಲೆ ಚುನಾವಣೆಗೆ ಹೋಗುತ್ತೇವೆ. ಹಿಂದುತ್ವ, ಅಭಿವೃದ್ಧಿ ಅಜೆಂಡಾದಿಂದ ಚುನಾವಣೆ ಎದು ರಿಸುತ್ತೇವೆ. ಹಿಂದುತ್ವ ರಿಲೀಜಿಯನ್ ಅಲ್ಲ, ಅದನ್ನ ಅಳವಡಿಸಿಕೊಂಡ ಎಲ್ಲರೂ ಹಿಂದುಗಳೇ.
– ಸಿ.ಟಿ. ರವಿ, , ಬಿಜೆಪಿ ರಾಷ್ಟ್ರೀಯ ಪ್ರ.ಕಾರ್ಯದರ್ಶಿ