Advertisement

ಜೇನು ಕೃಷಿಗೆ ಜಿಲ್ಲೆ ವಾತಾವರಣ ಸೂಕ್ತ

02:57 PM Dec 20, 2021 | Team Udayavani |

ಬೀದರ: ಜಿಲ್ಲೆಯ ವಾತಾವರಣ ಜೇನು ಕೃಷಿಗೆ ಸೂಕ್ತವಾಗಿದ್ದು ಸಾಕಷ್ಟು ಹೂವುಗಳ ಲಭ್ಯತೆಯದೆ. ಜೇನುವಿಗೆ ಮಾರುಕಟ್ಟೆ ಕೂಡಾ ಚೆನ್ನಾಗಿದೆ ಎಂದು ಸಹಾರ್ದ ಸಂಸ್ಥೆ ನಿರ್ದೇಶಕ ಸುಬ್ರಹ್ಮಣ್ಯ ಪ್ರಭು ಹೇಳಿದರು.

Advertisement

ನಗರದ ಗುರುಪಾದಪ್ಪಾ ನಾಗಮಾರಪಳ್ಳಿ ಸಹಾರ್ದ ತರಬೇತಿ ಕೇಂದ್ರದಲ್ಲಿ ಜಿಲ್ಲೆಯ ರೈತರಿಗಾಗಿ ನಡೆದ ಆರು ದಿನಗಳ ಜೇನುಕೃಷಿ ತರಬೇತಿಯ ಸಮಾರೋಪ ಸಮಾರಂಭ ಮತ್ತು ಜೇನು ಪಟ್ಟಿಗೆ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ಭೂಮಿಯ ಮೇಲೆ ಇರುವ ವಿವಿಧ ಬಗೆಯ ಕೀಟಗಳಲ್ಲಿ ಜೇನು ನೋಣಗಳು ಮಾನವನಿಗೆ ಬಹುಮುಖ್ಯ ಉಪಕಾರಿಯಾಗಿದೆ ಎಂದರು.

ಭಾರತವು ಪ್ರತಿ ವರ್ಷ 27,000 ಟನ್‌ ಜೇನು ಉತ್ಪಾದಿಸುತ್ತದೆ. ಅದರಲ್ಲಿ 7,000 ಟನ್‌ ಜೇನನ್ನು ರಫ್ತು ಮಾಡಲಾಗುತ್ತಿದೆ. ಆದರೆ, ನಮ್ಮಲ್ಲಿರುವ ಸಂಪನ್ಮೂಲಗಳನ್ನು ನೋಡಿದಾಗ ಪ್ರಸ್ತುತ ಜೇನು ಉತ್ಪಾದನೆ ತುಂಬಾ ಕಡಿಮೆ. ನಮ್ಮಲ್ಲಿ 1.2 ಮಿಲಿಯನ್‌ ಟನ್‌ ಜೇನು ಉತ್ಪಾದನೆ ಮಾಡುವ ಅವಕಾಶವಿದೆ. ಇದರಿಂದ 6 ಲಕ್ಷ ಜನರಿಗೆ ಉದ್ಯೋಗ ನೀಡಬಹುದಾಗಿದೆ ಎಂದು ತಿಳಿಸಿದರು.

ಜೇನು ಪೆಟ್ಟಿಗೆಗಳಲ್ಲಿ ಭಾರತೀಯ ತಳಿಯಾದ ತುಡುವೆ ಜೇನನ್ನು ಹೆಚ್ಚು ಸುಲಭವಾಗಿ ಸಾಕಬಹುದಾಗಿದೆ. ಬೀದರಿನ ಹವಾಮಾನಕ್ಕೆ ಇವು ಹೊಂದಿಕೊಳ್ಳುತ್ತವೆ. ಆದ್ದರಿಂದ ನೈಸರ್ಗಿಕವಾಗಿ ರೈತರಿಗೆ ಪ್ರಯೋಜನಕಾರಿಯಾದ ಜೇನು ಕೃಷಿಯನ್ನು ಹೊಂದುವುದರ ಮೂಲಕ ರೈತರು ಹೆಚ್ಚು ಇಳುವರಿಯನ್ನು ಪಡೆಯಲು ಸಾಧ್ಯವಾಗುತ್ತದೆ. ಅದಕ್ಕಾಗಿ ಈಗ ರೈತರಿಗೆ ಉಚಿತವಾಗಿ ಜೇನು ಪೆಟ್ಟಿಗೆಗಳನ್ನು ವಿತರಿಸಲಾಗುತ್ತಿದೆ. ಇದನ್ನು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಸಬಲರಾಗುವಲ್ಲಿ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ಸಮರಸ ಸಂಸ್ಥೆಯ ವೇದಮಣಿ ಮತ್ತು ಲಲಿತಾ, ತರಬೇತುದಾರ ಮಹಮ್ಮದ ಸಿರಾಜುದ್ದೀನ, ಸುರೇಶ ಮತ್ತು ಆಸಕ್ತ 20 ಜನ ರೈತರು ಪಾಲ್ಗೊಂಡಿದ್ದರು. ಸಮಾರಂಭದಲ್ಲಿ ಜೇನು ಪಟ್ಟಿಗೆಗಳನ್ನು ಉಚಿತವಾಗಿ ನೀಡಿದ ಬೆಂಗಳೂರಿನ ಎಂ.ಸಿ.ಕೆ. ಎಸ್‌ ಫೌಂಡೇಶನ್‌ ವತಿಯಿಂದ ಶುಭ ಹಾರೈಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next