Advertisement

ಯುವತಿಯರ ಮೈ ಮುಟ್ಟುತ್ತಿದ್ದ ವಿಕೃತ ಜೈಲುಪಾಲು

11:36 AM May 15, 2017 | |

ಬೆಂಗಳೂರು: ಕಾಲೇಜು ವಿದ್ಯಾರ್ಥಿನಿಯರು ಗುಂಪುಗುಂಪಾಗಿ ನಿಂತ ಕಡೆ ಹೋಗಿ, ಅವರ ಮೈ ಸವರಿ, ಹಿಂಭಾಗಕ್ಕೆ ಹೊಡೆದು ಓಡಿಹೋಗುವುದು ಈ ವಿಕೃತನ ಚಾಳಿ. ಇಂಥ ವಿಕ್ಷಿಪ್ತ ಪ್ರಕರಣಗಳು ಮೇಲಿಂದ ಮೇಲೆ ದಾಖಲಾಗುತ್ತಲೇ ಇದ್ದವು. ಇದೀಗ ಪೊಲೀಸರು ಆತನನ್ನು ಬಂಧಿಸಿದ್ದಾರೆ. 

Advertisement

ಶ್ರೀಗಂಧ ಕಾವಲ್‌ನ ಡಿ ಗ್ರೂಪ್‌ ಬಡಾವಣೆಯ ನಿವಾಸಿ ವಿನೀತ್‌ ಕುಮಾರ್‌ (33) ಬಂತ ಆರೋಪಿ. ಚಂದ್ರಾ ಲೇಔಟ್‌ ಪೊಲೀಸ್‌ ಠಾಣೆಯಲ್ಲಿ ಏಪ್ರಿಲ್‌ 10 ಹಾಗೂ ಮೇ 5ರಂದು ಕಾಲೇಜು ವಿದ್ಯಾರ್ಥಿನಿಯರ ಮೈ ಸವರಿ ಲೈಂಗಿಕ ಕಿರುಕುಳ ನೀಡಿದ್ದ ಸಂಬಂಧ ದಾಖಲಾಗಿದ್ದ ಎರಡೂ ಪ್ರತ್ಯೇಕ ಪ್ರಕರಣಗಳಲ್ಲಿ ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.

ವಿನೀತ್‌, ರಾತ್ರಿ ವೇಳೆ ಓಡಾಡುವ ಯುವತಿಯರ ಹಿಂಭಾಗಕ್ಕೆ ಹೊಡೆಯುವುದು, ಇಲ್ಲವೇ ಮೈ ಸವರಿ ಓಡಿ ಹೋಗುತ್ತಿದ್ದ. ಅದೇ ರೀತಿ ಜನದಟ್ಟಣೆಯಿರುವ ಬಸ್‌ಗಳಲ್ಲಿ ಹತ್ತಿ ಮಹಿಳೆಯರ ಜತೆ ಅಸಭ್ಯವಾಗಿ ವರ್ತಿಸುತ್ತಿದ್ದ ಎಂದು ವಿಚಾರಣೆ ವೇಳೆ ಗೊತ್ತಾಗಿದೆ. ಈ ಸಂಬಂಧ ದೌರ್ಜನ್ಯಕ್ಕೊಳಗಾದವರು ದೂರು ನೀಡಿದರೆ ತನಿಖೆ ನಡೆಸಲಾಗುತ್ತದೆ ಎಂದು ಅಕಾರಿಯೊಬ್ಬರು ತಿಳಿಸಿದರು.

ಘಟನೆ -1 ಏಪ್ರಿಲ್‌ 10: ಜ್ಞಾನಭಾರತಿ ರಸ್ತೆಯ ರೋಲ್ಸ್‌ ಆನ್‌ ವ್ಹೀಲ್‌  ಹೋಟೆಲ್‌ನ ಮುಂಭಾಗ ಏಪ್ರಿಲ್‌ 10 ರಂದು ರಾತ್ರಿ 9 ಗಂಟೆ ಸುಮಾರಿಗೆ ನ್ಯಾಶನಲ್‌ ಸ್ಕೂಲ್‌ ಆಫ್ ಲಾ ಕಾಲೇಜಿನ ಕಾಲೇಜಿನ  ವಿದ್ಯಾರ್ಥಿನಿಯರಿಬ್ಬರು ನಿಂತುಕೊಂಡಿದ್ದಾಗ, ಹಿಂದುಗಡೆಯಿಂದ ಬಂದಿದ್ದ ಆರೋಪಿ ವಿನೀತ್‌, ಯುವತಿಯ ಹಿಂಭಾಗಕ್ಕೆ ಹೊಡೆದು ಕಿರುಕುಳ ನೀಡಿದ್ದ  ಈ ವಿಚಾರವಾಗಿ ಯುವತಿ ಜಗಳ ಆರಂಭಿಸಿದಾಗ ಸ್ಥಳೀಯರು ಬರುತ್ತಿದ್ದಂತೆ ವಿನೀತ್‌  ಸ್ಥಳದಿಂದ ಪರಾರಿಯಾಗಿದ್ದ. ಯುವತಿ ನೀಡಿದ ದೂರಿನ ಮೇರೆಗೆ ಪೊಲೀಸರು ಆರೋಪಿ ಬಂಧನಕ್ಕೆ ಬಲೆ ಬೀಸಿದ್ದರು.

ಘಟನೆ-2 ಮೇ 5: ರಾತ್ರಿ 9 ಗಂಟೆ ಸುಮಾರಿಗೆ ಲಾ ಕಾಲೇಜಿನ  ವಿದ್ಯಾರ್ಥಿನಿಯೊಬ್ಬರು ತನ್ನ ಸ್ನೇಹಿತೆಯರ ಜೊತೆ ಲಸ್ಸಿ ಶಾಪ್‌ವೊಂದರ ಬಳಿ ನಿಂತುಕೊಂಡಿದ್ದರು. ಈ ವೇಳೆ ಕೆಲ ಕಾಲ ಅತ್ತಿಂದಿತ್ತ ಓಡಾಡಿದ  ವಿನೀತ್‌, ವಿದ್ಯಾರ್ಥಿನಿಯೊಬ್ಬರ ಹಿಂಭಾಗಕ್ಕೆ ಹೊಡೆದಿದ್ದಾನೆ. ಇದರಿಂದ ಗಾಬರಿಯಾದ ಆಕೆ ಹಿಂದೆ ಸರಿದಿದ್ದಾಳೆ. ಇದೇ ವಿಚಾರವಾಗಿ ಆಕೆಯ ಸ್ನೇಹಿತೆಯರು ಹಾಗೂ ವಿನೀತ್‌ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ವಿದ್ಯಾರ್ಥಿನಿಯರನ್ನೇ ದಬಾಯಿಸುತ್ತಿದ್ದ  ವಿನೀತ್‌ ಪರಾರಿಯಾಗಲು ಯತ್ನಿಸಿದ್ದಾನೆ. ಕೂಡಲೇ ವಿದ್ಯಾರ್ಥಿನಿಯರು ಸ್ಥಳೀಯರ ಸಹಾಯದಿಂದ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿ ದೂರು ನೀಡಿದ್ದರು.

Advertisement

ಮಗನಿಗೆ ಮಾನಸಿಕ ಖನ್ನತೆ ಎಂದ ಪೋಷಕರು! 
ಡಿಪ್ಲೋಮಾ ಇಂಜಿನಿರಿಂಗ್‌ ಮುಗಿಸಿರುವ ಆರೋಪಿ ವಿನೀತ್‌ ಹಲವು ವರ್ಷಗಳಿಂದ ಮನೆಯಲ್ಲಿಯೇ ಉಳಿದುಕೊಂಡಿದ್ದಾನೆ. ಮಗನ ವಿಚಿತ್ರ ನಡವಳಿಕೆಯ ಬಗ್ಗೆ ಆತನ ಪೋಷಕರನ್ನು ಪ್ರಶ್ನಿಸಿದರೆ ಆತನಿಗೆ ಮಾನಸಿಕ ಖನ್ನತೆಗೊಳಗಾಗಿದ್ದು ಈ ರೀತಿ ವರ್ತಿಸುತ್ತಿದ್ದಾನೆ ಎಂದು ಹೇಳುತ್ತಾರೆ. ಆದರೆ ವಿಚಾರಣೆ ವೇಳೆ ಆತನಿಗೆ ಖನ್ನತೆಯಿಲ್ಲದಿರುವುದು ಗೊತ್ತಾಗಿದೆ.

ರಾತ್ರಿ ವೇಳೆಯಲ್ಲಿ ಬೈಕ್‌ ಅಥವಾ ಕಾರಿನಲ್ಲಿ ಆಗಮಿಸುತ್ತಿದ್ದ ವಿನೀತ್‌, ಸ್ವಲ್ಪ ದೂರದಲ್ಲಿ ನಿಲ್ಲಿಸುತ್ತಿದ್ದ. ಬಳಿಕ ಒಂದಿಬ್ಬರು ಯುವತಿಯರು ಇರುವ ಕಡೆಗೆ ಹೋಗಿ ಕೆಲಕಾಲ ಸುಮ್ಮನಿದ್ದು ಯುವತಿಯರ ಹಿಂಭಾಗಕ್ಕೆ ಹೊಡೆದು ಪರಾರಿಯಾಗುತ್ತಿದ್ದ. ಅಲ್ಲದೆ ಎರಡೂ ಪ್ರಕರಣಗಳಲ್ಲಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸ್‌ ಅಕಾರಿಯೊಬ್ಬರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next