Advertisement
ಕೊಂಕಣ ರೈಲ್ವೇ ಆರಂಭವಾಗುವಾಗಲೇ ಅಂದರೆ 2 ದಶಕಗಳ ಹಿಂದಿನಿಂದಲೂ ಈ ಯೋಜನೆ ಮಾತ್ರ ನನೆಗುದಿಗೆ ಬಿದ್ದಿದೆ. ರಾಜ್ಯ ಹೆದ್ದಾರಿಯಾಗಿರುವಾಗಲೇ ಅದನ್ನು ನಿರ್ಮಿಸಲು ರೈಲ್ವೇ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆ ನಡುವೆ ನಡೆದ ಕೇವಲ ಪತ್ರ ವ್ಯವಹಾರ ಇಂದು ಈ ಸ್ಥಿತಿಗೆ ಕಾರಣವಾಗಿದೆ.
Related Articles
Advertisement
ಡಿಪಿಆರ್ ಆಗಿದೆ635 ಕೋ. ರೂ. ಮಲ್ಪೆ-ಮೊಳಕಾಲ್ಮೂರು ರಾ. ಹೆದ್ದಾರಿ ನಿರ್ಮಾಣಕ್ಕೆ ಡಿಪಿಆರ್ ಆಗಿದೆ. ಆದರೆ ಇಷ್ಟು ಬೃಹತ್ ಮೊತ್ತದ ಕಾಮಗಾರಿಗೆ ಒಂದೇ ಬಾರಿಗೆ ಅನುದಾನ ನೀಡುವುದು ಕಷ್ಟಕರ. ಹಾಗೆ ಮಾಡಿದರೂ ಅದಕ್ಕೆ ಟೋಲ್ ಸಂಗ್ರಹವಾದಂತಹ ಮಾರ್ಗಗಳನ್ನು ಅನುಸರಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ನೂರು ಕೋ. ರೂ.ಗಳ 5 ತುಂಡು ಯೋಜನೆಗಳಿಗೆ ಕೇಂದ್ರ ಹಣ ನೀಡಲು ಚಿಂತಿಸಿದೆ. ಈ ಎಲ್ಲ ಯೋಜನೆಗಳು ಮೇಳೈಸಿದರೆ ಮಾತ್ರ ಪ್ರಸ್ತುತ ಇಂದ್ರಾಳಿ ಸೇತುವೆ ಎದುರಿಸುತ್ತಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಎರಡು ರಸೆ¤ಗಳು ಬಲಿ
ಕೊಂಕಣ ರೈಲ್ವೇಯ ದ್ವಿಪಥ ಕಾಮಗಾರಿ ಆರಂಭವಾದರೆ ಸೇತುವೆ ಏರಿಸುವ ಕಾರ್ಯ ಆರಂಭವಾಗುತ್ತದೆ. ರೈಲ್ವೇ ಹಳಿಯಿಂದ ಕನಿಷ್ಠ ಮೂರು ಮೀಟರ್ ಎತ್ತರಕ್ಕೆ ಏರಿಸಬೇಕಾಗುವ ಸ್ಥಿತಿ ಬರುತ್ತದೆ. ಹೀಗಾದಾಗ ಇಂದ್ರಾಳಿ ಆಂಗ್ಲ ಮಾಧ್ಯಮ ಶಾಲೆಯ ಪೂರ್ವಕ್ಕಿರುವ ರಸ್ತೆ ಮತ್ತು ಯಕ್ಷಗಾನ ಕೇಂದ್ರಕ್ಕೆ ತೆರಳುವ ರಸ್ತೆಗಳಿಗಿಂತ ರಾ.ಹೆ. ಒಂದು ಮೀಟರ್ ಎತ್ತರಕ್ಕೆ ಹಾದು ಹೋಗುತ್ತದೆ. ಅದರ ಮೇಲೆ ರಾ.ಹೆ. ನಿರ್ಮಾಣವಾದರೆ ಅದು ಪುನಃ 1ಮೀಟರ್
ಎತ್ತರಕ್ಕೇರುತ್ತದೆ. ಹಾಗಾಗಿ ಈ ಎರಡು ರಸ್ತೆಗಳು ಅಸ್ತಿಣ್ತೀ ಕಳೆದುಕೊಳ್ಳುತ್ತವೆ ಎಂದು ರಾ.ಹೆ. ನಿರ್ಮಾಣದ ತಂತ್ರಜ್ಞರಾದ ಫೀಡ್‌ಬ್ಯಾಕ್ ವೆಂಚ್ಯುರ್ ತಂಡ ಅಭಿ ಪ್ರಾಯಪಟ್ಟಿದೆ. ಉಳಿದ ಸೇತುವೆಗಳ ಗತಿ ಏನು?
ರೈಲುಗಳು ಹಾದುಹೋಗಲು ಮೇಲ್ಸೇತುವೆ ನಿರ್ಮಿಸುವಾಗ ನೆಲೆಮಟ್ಟದಿಂದ 3 ಮೀಟರ್ ಇಡುವುದು ವಾಡಿಕೆ. ಆದರೆ ಇಂದ್ರಾಳಿ ಸೇತುವೆ ಮಾತ್ರ ತಗ್ಗಲು ಕಾರಣವೇನು ಎಂಬುದಕ್ಕೆ ಉತ್ತರಗಳಿಲ್ಲ. ಇದೇ ರೀತಿ ದ್ವಿಪಥದ ಕಾಮಗಾರಿ ಆರಂಭವಾದರೆ ಇನ್ನುಳಿದ ಮೇಲ್ಸೇತುವೆಗಳ ಪರಿಸ್ಥಿತಿ ಬಗ್ಗೆ ಪರಿಣತರಿಂದ ಚಿಂತನೆ ನಡೆಯಬೇಕಾಗಿದೆ. ಸೇತುವೆಗಳ ನಿರ್ಮಾಣಕ್ಕೂ ಮುನ್ನ ಪರಿಸ್ಥಿತಿ ಅಧ್ಯಯನ ಮಾಡಬೇಕಾಗುತ್ತದೆ. ಇಷ್ಟೇ ಎತ್ತರದಲ್ಲಿ ಇಷ್ಟೇ ಅಗಲದಲ್ಲಿ ನಿರ್ಮಿಸಬೇಕೆಂಬ ಯಾವ ನಿಯಮಗಳೂ ಇಲ್ಲ. ಆದರೆ ದೂರದೃಷ್ಟಿ ವಿಚಾರದಲ್ಲಿ ಈ ಅಂಶ ಅವಲೋಕಿಸಬೇಕಾಗುತ್ತದೆ ಎಂದು ಕೊಂಕಣ ರೈಲ್ವೇ ಅಸಿಸ್ಟೆಂಟ್ ಎಂಜಿನಿಯರ್ ಮಾಹಿತಿ ನೀಡಿದ್ದಾರೆ. ಇದೀಗ ರೈಲ್ವೇ ದ್ವಿಪಥ
2 ದಶಕಗಳ ಬಳಿಕ ಇದೀಗ ಕೊಂಕಣ ರೈಲ್ವೇ ದ್ವಿಪಥವಾಗಿ ಪರಿವರ್ತಿಸುವ ಯೋಜನೆ ಹಮ್ಮಿಕೊಂಡಿದೆ. ಇದರಿಂದ ಇಂದ್ರಾಳಿ ಮೇಲ್ಸೇತುವೆ ಕನಿಷ್ಠ ಒಂದು ಮೀಟರ್ ಎತ್ತರಕ್ಕೆ ಏರಿಸಬೇಕಾಗುತ್ತದೆ. ಹೀಗೆ ಏರಿಸಿದಾಗ ಹೊಸ ಎತ್ತರಕ್ಕೆ ಹೊಸ ಸೇತುವೆ ನಿರ್ಮಿಸಬೇಕಾಗು ತ್ತದೆ.ಅನಂತರ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟು ಹಳೆ ಸೇತುವೆ ಒಡೆದು ಹೊಸ ಎತ್ತರಕ್ಕೆ ನಿರ್ಮಿಸ ಬೇಕಾಗುತ್ತದೆ ಎಂದು ನ್ಯಾಶನಲ್ ಹೈವೇ ಎಂಜಿನಿಯರ್ ಮಂಜುನಾಥ್ “ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.