Advertisement

Syria ತೊರೆವ ಮುನ್ನವೇ ರಷ್ಯಾಗೆ 2082 ಕೋಟಿ ಸಾಗಿಸಿದ್ದ ಸರ್ವಾಧಿಕಾರಿ!

12:44 AM Dec 17, 2024 | Team Udayavani |

ಡಮಾಸ್ಕಸ್‌: ಸಿರಿಯಾದ ಮಾಜಿ ಸರ್ವಾಧಿಕಾರಿ ಬಶರ್‌ ಅಲ್‌ ಅಸಾದ್‌ ದೇಶ ಬಿಟ್ಟು ಪರಾರಿಯಾಗುವ ಮುನ್ನವೇ ಬರೋಬ್ಬರಿ 2,082 ಕೋಟಿ ರೂ. ನಗದನ್ನು ರಷ್ಯಾದ ಮಾಸ್ಕೋಗೆ ಸಾಗಿಸಿದ್ದರು.! ಹೀಗೆಂದು ಫೈನಾನ್ಶಿಯಲ್‌ ಟೈಮ್ಸ್‌ ವರದಿ ಮಾಡಿದೆ. 2018-19ರ ಅವಧಿಯಲ್ಲೇ ಅಸಾದ್‌ ಹಣ, ಷೇರು ಪತ್ರ ಎಲ್ಲವನ್ನೂ ಮಾಸ್ಕೋಗೆ ಸಾಗಿಸಿದ್ದಾರೆ. ಜತೆಗೆ ಅಲ್ಲಿರುವ ಅಸಾದ್‌ರ ಸಂಬಂಧಿಕರು ಇದೇ ಹಣದಲ್ಲಿ ಗೌಪ್ಯವಾಗಿ ಆಸ್ತಿ ಖರೀದಿಸಿದ್ದಾರೆ ಎನ್ನಲಾಗಿದೆ. ಏತನ್ಮಧ್ಯೆ, ದೇಶದಿಂದ ಪಲಾಯನ ಮಾಡಿದ ಬಳಿಕ ಸೋಮವಾರ ಅಸಾದ್‌ ಮೊದಲ ಬಾರಿ ಪ್ರತಿಕ್ರಿಯಿಸಿದ್ದು, “ನಾನು ಸಿರಿಯಾ ಬಿಟ್ಟು ಬಂದಿದ್ದು ಪೂರ್ವ ನಿಯೋಜಿತ ಅಲ್ಲ. ಉಗ್ರರು ಡಮಾಸ್ಕಸ್‌ಗೆ ನುಗ್ಗಿದಾಗ ಸೇನಾ ಪರಿಸ್ಥಿತಿ ಪರಿಶೀಲಿಸಲು ತೆರಳಿದ್ದೆ. ಆಗ ರಷ್ಯಾ ಸಹವರ್ತಿಗಳು ನನ್ನನ್ನು ಕರೆತಂದರು ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next