Advertisement
ಇದು ನಡೆದದ್ದು ಆ. 24ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೂಡಬಿದ್ರೆಯ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ದೇವ-ಭಕ್ತನ ಭಾವನೆಗಳನ್ನು, ಭಕ್ತಿಯ ಶಕ್ತಿಯನ್ನು, ಸತ್ಯದ ಸತ್ವವನ್ನು ಪ್ರಚುರಪಡಿಸುವ ಕೃಷ್ಣಾರ್ಜುನ ಕಾಳಗ ತಾಳಮದ್ದಲೆಯಲ್ಲಿ.
Related Articles
Advertisement
ವಾಟೆಪಡು³ ವಿಷ್ಣು ಶರ್ಮರ ಸುಭದ್ರೆ ಭಾವಪೂರ್ಣವಾಗಿ ಮೂಡಿಬಂತು. ನಿನಗೆ ಬಣ್ಣಿಸತಕ್ಕವಳೆ ಯೆನ್ನಿನಿಯ ನಿನಗೆರಡೆಣಿಸುವವನಲ್ಲೆನಲು… ಪದ್ಯಕ್ಕೆ ಅವರ ಭಾವಪೂರ್ಣ ಮಾತುಗಳು ಭಾವುಕರಾಗುವಂತೆ ಮಾಡಿತು.
ಪೆರ್ಮುದೆ ಜಯಪ್ರಕಾಶ ಶೆಟ್ಟಿ ಅರ್ಜುನನ ಪಾತ್ರವನ್ನು ಸಮರ್ಪಕವಾಗಿ ನಿರ್ವಹಿಸಿದರು. ದೇವನಲ್ಲಿರುವ ಭಕ್ತಿ, ಪ್ರೀತಿ, ಸಲುಗೆ ಆತನ ಒಂದು ಭಾವವಾದರೆ, ಸತ್ಯದ ಮೇಲಿರುವ ನಿಷ್ಠೆ, ಕ್ಷತ್ರಿಯ ಧರ್ಮದ ಪ್ರಜ್ಞೆ , ಬಂದದ್ದೆಲ್ಲಾ ಬರಲಿ ಭಗವಂತನ ದಯೆಯೊಂದಿರಲಿ ಎಂಬ ಭಾವ ಪೆರ್ಮುದೆಯವರ ಅರ್ಥದಲ್ಲಿ ಒಪ್ಪ ಓರಣವಾಗಿ ಕಡೆದಂತಿತ್ತು.
ಸುಭದ್ರೆಯೊಂದಿಗಿನ ಸಂವಾದದಲ್ಲಿ ಕೊನೆಗೆ ನಿನಗೆ ಅತ್ತೆಯಂದಿರೇ ಮಾರ್ಗಸೂಚಿಗಳು, ಮಾದ್ರಿಯಂತೆ ಸತಿ ಸಹಗಮನ ಅಥವಾ ಕುಂತಿಯಂತೆ ಮಕ್ಕಳನ್ನು ಪೋಷಿಸುವ ಕಾರ್ಯ ಎರಡೇ ಆಯ್ಕೆಗಳು ಎನ್ನುವಾಗ ಅವರ ಕಣ್ಣುಗಳು ಜಿನುಗುವಂತೆ ಸಭಿಕರ ಕಣ್ಣುಗಳು ತೇವಗೊಂಡಿತು.
ಅದು ಅರ್ಜುನ – ಶ್ರೀಕೃಷ್ಣರ ಸಂವಾದದ ಭಾಗವು ತಿಳಿಯಾದ ಹಾಸ್ಯಮಿಶ್ರಿತ, ಭಾವಪೂರ್ಣ, ವಿಚಾರ ಪೂರ್ಣ ಭಾಗವಾಗಿ ಹೊರಹೊಮ್ಮಿತು. ಪೂರ್ಣೇಶ ಆಚಾರ್ಯ ಮಹೇಶ್ವರನ ಪಾತ್ರವನ್ನು ನಿರ್ವಹಿಸಿದರು. ವಿದ್ಯಾ ಕೋಳ್ಯೂರು ಸಂಯೋಜಿಸಿದ್ದರು.
ಭಾಗವತರಾಗಿ ಕಥಾನಕವನ್ನು ಸುಂದರವಾಗಿ ನಡೆಸಿಕೊಟ್ಟವರು ಪುತ್ತಿಗೆ ರಘುರಾಮ ಹೊಳ್ಳರು. ಚೆಂಡೆಯಲ್ಲಿ ಲಕ್ಷ್ಮೀಶ ಅಮ್ಮಣ್ಣಾಯ, ಮದ್ದಳೆಯಲ್ಲಿ ಕೃಷ್ಣಪ್ರಕಾಶ ಉಳಿತ್ತಾಯ, ಚಕ್ರತಾಳದಲ್ಲಿ ಪೂರ್ಣೇಶ ಆಚಾರ್ಯ.
ಗಜಮುಖದವಗೆ ಪದ್ಯವನ್ನು ಅಗರಿ ಶೈಲಿಯಲ್ಲಿ ಹಾಡಿ ಸಭಿಕರಲ್ಲಿ ಹಿತವಾದ ಮಿಂಚೊಂದು ಹರಿಯುವಂತೆ ಮಾಡಿ ನಂತರವೂ ಕೆಲವು ಅಗರಿಶೈಲಿಯ ಹಾಡನ್ನು ಹಾಡಿದರು. ಪ್ರಸಂಗದ ಪ್ರತೀ ಪದ್ಯದ ಕೇಂದ್ರ ಭಾಗವನ್ನು ಅನುಸಂಧಾನಿಸುತ್ತಾ ಅರ್ಥಧಾರಿಗೆ ಅದನ್ನು ಪರಿಣಾಮಕಾರಿಯಾಗಿ ಸಂವಹನ ಮಾಡಿಕೊಂಡು ಹಾಡುತ್ತಿದ್ದ ರೀತಿ ಅನನ್ಯ. ಕವಿಯಾಶಯವನ್ನು ಭಾಗವತನೊಬ್ಬ ಪ್ರೇಕ್ಷಕರಿಗೆ ತಲುಪಿಸುವ ರೀತಿ ಇದು. ಈ ರಸಾನುಭೂತಿ ಅರ್ಥಧಾರಿಗಳಿಗೆ ಪಾತ್ರಾವೇಶವನ್ನು ತಂದುಕೊಟ್ಟದ್ದು ಸುಳ್ಳಲ್ಲ.
ವಿಭಾ ಕೃಷ್ಣಪ್ರಕಾಶ ಉಳಿತ್ತಾಯ