Advertisement

ವಿಜೃಂಭಣೆಯ ದೊಡ್ಡಮ್ಮತಾಯಿ ಜಾತ್ರಾ ಮಹೋತ್ಸವ

12:50 PM Apr 07, 2018 | |

ಪಿರಿಯಾಪಟ್ಟಣ: ತಾಲೂಕಿನ ಗ್ರಾಮದೇವತೆ ದೊಡ್ಡಮ್ಮತಾಯಿ ಜಾತ್ರಾ ಮಹೋತ್ಸವವು ಸಹಸ್ರಾರು ಭಕ್ತರ ನಡುವೆ ವಿಜೃಂಭಣೆಯಿಂದ ನೆರವೇರಿತು. ಯುಗಾದಿ ಹಬ್ಬವಾದ 15ನೇ ದಿನಕ್ಕೆ ಈ ಜಾತ್ರೆಯನ್ನು ಆಚರಿಸಲಾಗುತ್ತಿದೆ. ಮೂರು ಗ್ರಾಮಗಳ 7 ಕೋಮಿನ ಜನರು ಆಚರಿಸುತ್ತಾರೆ.

Advertisement

ಕಳೆದ ಭಾನುವಾರ ಪ್ರಾರಂಭವಾದ ಜಾತ್ರೆಯಲ್ಲಿ ತೊಪ್ಪೆ ಓಕುಳಿ, ಕೊಳದ ಓಕುಳಿ, ನೀರಿನ ಓಕುಳಿ ಹೀಗೆ ರಥೋತ್ಸವದವರೆಗೆ ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆದವು. ಗ್ರಾಮದೇವತೆ ದೊಡ್ಡಮ್ಮ ವಿಗ್ರಹವನ್ನು 7 ಕೋಮಿನ ಸಮುದಾಯದವರು ಗುರುವಾರ ಮಧ್ಯರಾತ್ರಿ ಕೆ.ಆರ್‌.ನಗರ ತಾಲೂಕಿನ ಚುಂಚನಕಟ್ಟೆಗೆ ತೆಗೆದುಕೊಂಡು ಹೋಗಿ ಕಾವೇರಿ ನದಿಯಲ್ಲಿ ಶುಚಿ ಮಾಡಿ ಪೂಜಾ ಕೈಂಕರ್ಯ ನಡೆಸಿ, ನಂತರ ದೇವಾಲಯಕ್ಕೆ ತರಲಾಯಿತು.

ಜಾತ್ರೆಗೆ ಆಗಮಿಸಿದ್ದ ಸಹಸ್ರಾರು ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ರಥೋತ್ಸವದಲ್ಲಿ ತಾಪಂ ಅಧ್ಯಕ್ಷೆ ನಿರುಪಮಾ, ಕೆಪಿಸಿಸಿ ಸದಸ್ಯ ಡಿ.ಟಿ.ಸ್ವಾಮಿ, ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next