Advertisement
ಸದ್ಯಕ್ಕೆ ಪಾರ್ಕ್‌ನಲ್ಲಿ ಕಳೆ ಗಿಡಗಳು ಬೆಳೆದು ನಿಂತಿದ್ದು, ಅನಗತ್ಯ ಮರಗಳೂ ಬೆಳೆದಿವೆ. ವೇದಿಕೆ, ಗುಹೆಯಂತಹ ವಿನ್ಯಾಸ, ಹುಲ್ಲು ಹಾಸು, ಆಸನ ಸೇರಿದಂತೆ ಇತರ ವ್ಯವಸ್ಥೆಗಳು ಇವೆ. ಅಭಿವೃದ್ಧಿಗೊಳಿಸಿದ ಬಳಿಕ ವಿದ್ಯುತ್ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಒದಗಿಸುವ ಅಗತ್ಯವಿದೆ.
ಪೇಟೆಯ ಮೂರು ಪಾರ್ಕ್ ಗಳ ಪೈಕಿ, ಸರಕಾರಿ ಆಸ್ಪತ್ರೆ ಬಳಿಯಿರುವ ಚಿಣ್ಣರ ಪಾರ್ಕ್‌ಗೆ ಹೆಚ್ಚಿನ ಮಹತ್ವವಿದೆ. ಮಕ್ಕಳ ಚಟುವಟಿಕೆ ಕೇಂದ್ರವಾಗಬೇಕು ಎಂಬ ದೃಷ್ಟಿಯಿಂದಲೇ ಈ ಪಾರ್ಕನ್ನು ನಿರ್ಮಿಸಲಾಗಿತ್ತು. ಈ ಹಿಂದೆ ಒಂದಷ್ಟು ಅನುದಾನ ಮೀಸಲಿಟ್ಟು, ಅಭಿವೃದ್ಧಿ ಕಾಮಗಾರಿ ನಡೆಸಲಾಗಿತ್ತು. ಆದರೆ ಅನಂತರದಲ್ಲಿ ಕಡೆಗಣಿಸಲ್ಪಟ್ಟಿತ್ತು. ಕಾರ್ಯಕ್ರಮ ಸಂಘಟನೆ ಅಗತ್ಯ
ಮಕ್ಕಳಿಗೆ ನಿರ್ಮಿಸಲಾದ ಪಾರ್ಕ್‌ನಲ್ಲಿ ಮಕ್ಕಳ ಚಟುವಟಿಕೆಗಳು ನಡೆಯಬೇಕು. ಈ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಸಂಘ ಟಿಸಲು ಪೂರಕವಾಗಿ ಪಾರ್ಕ್ ಅಭಿವೃದ್ಧಿಯಾಗಬೇಕು. ಅನಂತರ ಶಿಕ್ಷಣ ಇಲಾಖೆ, ಸಂಘ ಸಂಸ್ಥೆಗಳನ್ನು ವಿಶ್ವಾಸಕ್ಕೆ ತೆಗೆದು ಮಕ್ಕಳಿಗೆ ಪೂರಕ ಚಟುವಟಿಕೆಗಳನ್ನು ಸಂಘಟಿಸಬೇಕಾಗಿದೆ.
Related Articles
ನಗರಸಭೆಯ ಹಿಂದಿನ ಆಡಳಿತದ ಅವಧಿಯಲ್ಲಿ ಅನುದಾನ ಮೀಸಲಿರಿಸಲಾಗಿತ್ತು. ಇದೀಗ ಗುತ್ತಿಗೆದಾರರು ಅಭಿವೃದ್ಧಿ ಕಾಮಗಾರಿ ನಡೆಸುತ್ತಿದ್ದಾರೆ. ಶೀಘ್ರ ಅಭಿವೃದ್ಧಿ ಕಾಮಗಾರಿಗಳು ನಡೆದ ಬಳಿಕ ಕಾರ್ಯಕ್ರಮಗಳನ್ನು ಸಂಘಟಿಸುವವರಿಗೆ ಬಾಡಿಗೆಗೆ ನೀಡಲು ಯೋಚಿಸಲಾಗಿದೆ.
ಜಯಂತಿ ಬಲ್ನಾಡು ಅಧ್ಯಕ್ಷರು, ನಗರಸಭೆ ಪುತ್ತೂರು
Advertisement