Advertisement

ಅಭಿವೃದ್ಧಿಗೆ ಒಳ್ಳೆ ಅಧಿಕಾರಿ ಶೋಧ

04:06 PM Apr 11, 2017 | |

ಚಿಂಚೋಳಿ: ನಮ್ಮ ಹಿಂದುಳಿದ ತಾಲೂಕಿನ ಅಭಿವವೃದ್ಧಿಗೋಸ್ಕರ ಒಳ್ಳೆಯ ಅಧಿಕಾರಿಗಳನ್ನು ಹುಡುಕುತ್ತಿದ್ದೇನೆ. ದಕ್ಷ ಮತ್ತು ಪ್ರಮಾಣಿಕ ಅಧಿಕಾರಿಗಳು ಸಿಗುತ್ತಿಲ್ಲ. ಅಧಿಕಾರಿಗಳು ಸರಕಾರಿ ಕೆಲಸಗಳನ್ನು ಸರಿಯಾಗಿ ಮಾಡಿದರೆ ಯಾರಿಗೂ ತಲೆಬಾಗುವ ಅವಶ್ಯಕತೆ ಇರುವುದಿಲ್ಲ ಎಂದು ಸಂಸದೀಯ ಕಾರ್ಯದರ್ಶಿ ಡಾ| ಉಮೇಶ ಜಾಧವ ಹೇಳಿದರು. 

Advertisement

ಪಟ್ಟಣದ ತಹಶೀಲ್ದಾರ ಕಚೇರಿ ಆವರಣದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಸೇಡಂ ಸಹಾಯಕ ಆಯುಕ್ತರಾಗಿ ಸೇವೆ ಸಲ್ಲಿಸಿ ರಾಜ್ಯ ಪ್ರವಾಸೋದ್ಯಮ ಇಲಾಖೆ ವಿಶೇಷ ಅಧಿಕಾರಿಯಾಗಿ ಬಡ್ತಿ ಹೊಂದಿದ ಭೀಮಾಶಂಕರ ತೆಗ್ಗೆಳ್ಳಿ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು. ಜಿಲ್ಲೆಯ ಸುಕ್ಷೇತ್ರ ರೇವಗ್ಗಿ ಶ್ರೀ ರೇವಣಸಿದ್ದೇಶ್ವರ ದೇವಸ್ಥಾನ ಮತ್ತು ಘತ್ತರಗಿ ಭಾಗ್ಯವಂತಿ ದೇವಸ್ಥಾನ ಅಭಿವೃದ್ಧಿಪಡಿಸಿ ಭಕ್ತರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.

ಒಳ್ಳೆಯ ಅಧಿಕಾರಿಗಳಿದ್ದರೆ ತಾಲೂಕು ಅಭಿವೃದ್ಧಿ ಆಗತ್ತದೆ. ಹೀಗಾಗಿ ತಾಲೂಕಿನ ಅಭಿವೃದ್ಧಿಗಾಗಿ ಒಳ್ಳೆಯ ಅಧಿಕಾರಿಗಳನ್ನು ಹುಡುಕಬೇಕಾಗಿದೆ ಎಂದು ಹೇಳಿದರು. ತಾಲೂಕಿನ ಚಂದ್ರಂಪಳ್ಳಿ ಮತ್ತು ಗೊಟ್ಟಂಗೊಟ್ಟ, ಎತ್ತಪೋತ ಪ್ರವಾಸಿ ತಾಣಗಳು ಅಭಿವೃದ್ಧಿಯಾಗಬೇಕಾಗಿದೆ. ಸೇಡಂ ಸಹಾಯಕ ಆಯುಕ್ತ ಭೀಮಾಶಂಕರ ತೆಗ್ಗೆಳ್ಳಿ ಅವರು ಕಳೆದ 3 ವರ್ಷಗಳಲ್ಲಿ ಕಂದಾಯ ಇಲಾಖೆಯಲ್ಲಿ ದಕ್ಷ ಮತ್ತು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದಾರೆ. 

ಇನ್ನು ಮುಂದೆ ಕಲಬುರಗಿ ಜಿಲ್ಲೆಯ ನೋಡಲ್‌ ಅಧಿಕಾರಿಯಾಗಿ ಸೇವೆ ಸಲ್ಲಿಸಲು ಸಂಬಂಧಿಸಿದ ಸಚಿವರಿಗೆ ಮನವಿ ಮಾಡಿಕೊಳ್ಳುತ್ತೇನೆ ಎಂದು ಹೇಳಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಸೇಡಂ ಸಹಾಯಕ ಆಯುಕ್ತ ಭೀಮಾಶಂಕರ ತೆಗ್ಗೆಳ್ಳಿ, ಸಿಬ್ಬಂದಿಗಳನ್ನು ಅಮಾನತುಗೊಳಿಸುವುದು ಸಮಂಜಸವಲ್ಲ. ಸಿಬ್ಬಂದಿಗಳಿಂದ ಕೆಲಸಗಳನ್ನು ಮಾಡಿಸಿಕೊಳ್ಳುವ ಕೌಶಲ್ಯ ಅಧಿಕಾರಿಗಳಲ್ಲಿಬೇಕು. 

ಚಿಂಚೋಳಿ, ಸೇಡಂ, ಚಿತ್ತಾಪುರ ತಾಲೂಕಿನಲ್ಲಿ  ಯಾವುದೇ ಕಾನೂನು ಬಾಹಿರವಾದ ಕೆಲಸ ನಡೆಯಲು ಅವಕಾಶ ನೀಡಿಲ್ಲ. ಕಂದಾಯ ಇಲಾಖೆಯಿಂದ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಸರಳವಾಗಿ ದಾಖಲೆ ಸಿಗಬೇಕು ಎಂಬ ಉದ್ದೇಶವಾಗಿತ್ತು. ಹೈ.ಕ. ಪ್ರದೇಶ ಅತಿ ಹಿಂದುಳಿದೆ. ಹೀಗಾಗಿ ನನ್ನ ಸೇವೆಯನ್ನು ಇಲ್ಲಿಯೇ ಮಾಡುವ ಇಷ್ಟ ಹೊಂದಿದ್ದೇನೆ ಎಂದು ಹೇಳಿದರು. 

Advertisement

ಚಿತ್ತಾಪುರ ತಾಲೂಕಿನಲ್ಲಿ ಮರಳು ಮಾμಯಾದಿಂದ ವರ್ಗಾವಣೆ ಮಾಡಲಾಗಿದೆ ಎಂದು ಕೆಲ ಉಹಾಪೋಹ ಸುದ್ದಿಗಳು ಬಂದಿವೆ. ಇದು ಶುದ್ಧ ಸುಳ್ಳು. ನನ್ನ ಮೂರು ವರ್ಷ ಸೇವೆ ಅವಧಿ ಪೂರ್ಣಗೊಂಡಿದೆ. ಸರಕಾರ ಬಡ್ತಿ ನೀಡಿ ಅದೇಶ ಹೊರಡಿಸಿದ್ದರಿಂದ ವರ್ಗಾವಣೆ ಆಗಿದೆ ಎಂದು ಹೇಳಿದರು. ಚಿಂಚೋಳಿ ಡಿವೈಎಸ್‌ಪಿ ಯು. ಶರಣಪ್ಪ. ತಾಪಂ ಅಧಿಕಾರಿ ಅನೀಲಕುಮಾರ ರಾಠೊಡ ಮಾತನಾಡಿದರು.

ತಾಪಂ ಅಧ್ಯಕ್ಷೆ ರೇಣುಕಾ ಚವ್ಹಾಣ, ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ, ವೆಂಕಟೇಶ ದುಗ್ಗನ್‌, ಬಸವರಾಜ ಸಜ್ಜನಶೆಟ್ಟಿ, ಕೆ.ಎಂ. ಬಾರಿ, ಮಾಣಿಕಪ್ಪ ಭಗವಂತಿ ಇದ್ದರು. ತಹಶೀಲ್ದಾರ ಪ್ರಕಾಶ ಕುದುರೆ ಸ್ವಾಗತಿಸಿದರು. ರೇವಣಸಿದ್ದಯ್ಯ ಸ್ವಾಮಿ ನಿರೂಪಿಸಿದರು. ಆಹಾರ ನಿರೀಕ್ಷಕ ಮಂಜುನಾಥ ಕಲಬುರಗಿ ವಂದಿಸಿದರು. ಕಂದಾಯ ಇಲಾಖೆ ಸಿಬ್ಬಂದಿಗಳು ಸಹಾಯಕ ಆಯುಕ್ತ ಭೀಮಾಶಂಕರ ಅವರನ್ನು ಸನ್ಮಾನಿಸಿ ಗೌರವಿಸಿದರು.   

Advertisement

Udayavani is now on Telegram. Click here to join our channel and stay updated with the latest news.

Next