Advertisement
ಆಸ್ಪತ್ರೆಯ ನಿರ್ವಹಣೆ ವಸ್ತುಗಳು ಮತ್ತು ರೋಗಿಗಳ ಆರೈಕೆ ವಸ್ತುಗಳ ಪೂರೈಕೆಯಲ್ಲಿನ ಅಕ್ರಮ ವ್ಯವಹಾರಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ರವಿವಾರ ಬೆಳಗ್ಗೆ ಘೋಷ್ ಮನೆ ಮೇಲೆ ದಾಳಿ ನಡೆಸಿದ ಅಧಿಕಾರಿಗಳು, ಉಪ ಪ್ರಾಚಾರ್ಯ ವಶಿಷ್ಠ ಅವರನ್ನು ತೀವ್ರ ವಿಚಾರಣೆ ಗೊಳಪಡಿಸಿದರು ಎಂದು ತಿಳಿದು ಬಂದಿದೆ. ಸಾಕ್ಷ್ಯ ದೊರೆತಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಸಾಕಷ್ಟು ದೊರೆತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಸುಳ್ಳು ಪತ್ತೆ ಪರೀಕ್ಷೆ: ಟ್ರೈನಿ ವೈದ್ಯೆ ಕೊಲೆ ಕೇಸಿನ ಆರೋಪಿ ಸಂಜಯ್ ರಾಯ್‌ಗೆ ರವಿವಾರ ಸುಳ್ಳು ಪತ್ತೆ ಪರೀಕ್ಷೆ ನಡೆಸಲಾಯಿತು. ಕೋಲ್ಕತಾದ ಪ್ರಸಿಡೆನ್ಸಿ ಜೈಲಿನಲ್ಲೇ ಈ ಪರೀಕ್ಷೆ ಕೈಗೊಳ್ಳಲಾಗಿದೆ.