ಚಿಕ್ಕಬಳ್ಳಾಪುರ: ಇತಿಹಾಸದಲ್ಲೇ ಕೋವಿಡ್ 19 ವೈರಸ್‌ನಂತಹ ಸೋಂಕನ್ನು ನಾವು ಎಂದೂ ಕಂಡಿರಲಿಲ್ಲ. ಮುಂದುವರಿದ ದೇಶಗಳೇ ನಲುಗಿ ಹೋಗಿವೆ. ಜಾಗತಿಕವಾಗಿ ಪ್ರಬಲ ದೇಶಗಳೇ ಇಂದು ಕೋವಿಡ್ 19ವನ್ನು ನಿಯಂತ್ರಣ ಮಾಡಲು ಹರಸಾಹಸ ಪಡುತ್ತಿವೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಕೋವಿಡ್ 19 ವಾರಿಯರ್ಗೆ ಕೃತಜ್ಞತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮ ದೇಶದಲ್ಲಿ ಪ್ರಧಾನಿ ಮೋದಿಯವರ ನೇತೃತ್ವದಿಂದ ಕೋವಿಡ್ 19 ತಡೆಗಟ್ಟಲು ಕಾರಣವಾಗಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವುದರ ಮೂಲಕ ಸೋಕು ನಿಯಂತ್ರಣ ಮಾಡಲು ಸಾಧ್ಯವಾಗಿದೆ ಎಂದರು.
ಜಿಲ್ಲೆ ಶೀಘ್ರ ಹಸಿರು ವಲಯ: ಜಿಲ್ಲೆಯ ಬಾಗೇಪಲ್ಲಿ ಹಾಗೂ ಗೌರಿಬಿದನೂರು ತಾಲೂಕಿಗೆ ಸೇರಿದ ಕಾರ್ಮಿಕರು ಮಹಾರಾಷ್ಟ್ರ ದಿಂದ ಆಗಮಿಸಿದ್ದರಿಂದ ಸೋಂಕಿತರ ಸಂಖ್ಯೆ ಜಿಲ್ಲೆಯಲ್ಲಿ 150 ಕ್ಕೇರಿದೆ. ಕೆಲವು ದಿನಗಳಲ್ಲಿ ಜಿಲ್ಲೆಯನ್ನು ಕೋವಿಡ್ 19 ಮುಕ್ತ ಜಿಲ್ಲೆಯನ್ನಾಗಿ ನೋಡಬಹುದಾಗಿದೆ ಹಾಗೂ ಹಸಿರು ವಲಯದಲ್ಲಿ ಕಾಣಬಹು ದಾಗಿದೆ ಎಂದು ಡಾ.ಕೆ.ಸುಧಾಕರ್ ಭರವಸೆ ನೀಡಿದರು.
ಸ್ವಯಂ ಸೇವಕರ ಸೇವೆ ಶ್ಲಾಘನೀಯ: ಪ್ರತಿಯೊಬ್ಬ ವಾರಿಯರ್ಗಳು ಕೂಡ ದೇಶದ ಸೈನಿಕನಂತೆ ಕೋವಿಡ್ 19 ವಿರುದಟಛಿ ಹೋರಾಡುತ್ತಿದ್ದಾರೆ. ಲಾಕ್‌ಡೌನ್ ಪರಿಸ್ಥಿತಿಯಲ್ಲಿ ದೇಶ, ರಾಜ್ಯ ಆರ್ಥಿಕ ಕಷ್ಟಕರ ಪರಿಸ್ಥಿತಿಯಲ್ಲಿ ಜನರಿಗೆ ಉಚಿತವಾಗಿ ಆಹಾರ ಧಾನ್ಯ ಹಾಗೂ ತರಕಾರಿ ನೀಡಲಾಗಿದೆ ಎಂದರು. ಜಿಪಂ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ, ಡೀಸಿ ಆರ್.ಲತಾ, ಜಿಪಂ ಸಿಇಒ ಬಿ. ಫೌಝೀಯಾ ತರುನ್ನುಮ್,
ಎಸ್ಪಿ ಜಿ.ಕೆ.ಮಿಥುನ್ ಕುಮಾರ್, ಅಪರ ಜಿಲ್ಲಾಧಿಕಾರಿ ಆರತಿ, ಉಪವಿಭಾಗಾಧಿಕಾರಿ ರಘುನಂದನ್, ನಗರಾಭಿವೃದ್ಧಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಭಾಸ್ಕರ್, ಡಿಎಚ್‌ಒ ಯೋಗೇಶ್‌ಗೌಡ, ಆರ್‌ಎಂಒ ರಮೇಶ್, ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ.ಯಲ್ಲಾ ರಮೇಶ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿರಿದ್ದರು.
ಪ್ರತಿಯೊಬ್ಬರು ಒಗ್ಗಟ್ಟಿನಿಂದ ಕೋವಿಡ್ 19 ವೈರಾಣು ವಿರುದ್ಧ ಹೋರಾಡಬೇಕಿದೆ. ಮುಂದಿನ ದಿನಗಳಲ್ಲಿ ಎಂತಹದೇ ವೈರಾಣು ಬಂದರೂ ಒಗ್ಗಟ್ಟಾಗಿ ಎದುರಿಸುವ ಶಕ್ತಿ ನಮ್ಮೆಲ್ಲರಲ್ಲಿ ಇರಬೇಕು. ಕೋವಿಡ್ 19 ವಾರಿಯರ್ ತಮ್ಮ ಕರ್ತವ್ಯವನ್ನು ನಿರ್ವಹಿಸುವ ಮೂಲಕ ಜಿಲ್ಲೆಯನ್ನು ಸುರಕ್ಷಿತ ಪಥದತ್ತ ಕೊಂಡೊಯ್ಯುತ್ತಿದ್ದಾರೆ.
-ಡಾ.ಕೆ.ಸುಧಾಕರ್, ವೈದ್ಯಕೀಯ ಶಿಕ್ಷಣ ಸಚಿವ