Advertisement

ಸಾಮಾಜಿಕ ತಾಣದಿಂದ ನೈತಿಕ ಮೌಲ್ಯ ನಾಶ

12:25 PM Mar 17, 2017 | Team Udayavani |

ಮೈಸೂರು: ಸಾಮಾಜಿಕ ಜಾಲತಾಣಗಳ ವ್ಯಾಮೋಹದಿಂದ ಯುವಕರಲ್ಲಿ ಸಾಂಸ್ಕೃತಿಕ ಹಾಗೂ ನೈತಿಕ ಮೌಲ್ಯಗಳು ನಶಿಸುತ್ತಿವೆ ಎಂದು ಮಹಿಳಾ ಹೋರಾಟಗಾರ್ತಿ ಕೆ.ಎಸ್‌.ನಂದಿನಿ ಜಯರಾಂ ಕಳವಳ ವ್ಯಕ್ತಪಡಿಸಿದರು.

Advertisement

ನಗರದ ಸಿದ್ದಾರ್ಥ ಬಡಾವಣೆಯಲ್ಲಿರುವ ಟೆರಿಷಿಯನ್‌ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಕನ್ನಡ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಶ್ವದ ಇತರೆ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ಯುವ ಶಕ್ತಿ ಹೆಚ್ಚಾಗಿದ್ದು, ದೇಶದ ಅಭಿವೃದ್ಧಿಯಲ್ಲಿ ಯುವಶಕ್ತಿ ಆನೆ ಬಲವಿದ್ದಂತೆ.

ಆದರೆ, ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವ ಸಾಮಾಜಿಕ ಜಾಲತಾಣದ ವ್ಯಾಮೋಹದಿಂದಾಗಿ ಯುವಕರಲ್ಲಿ ಸಂಸ್ಕೃತಿ, ಚಿಂತನೆ, ನೈತಿಕ ಮೌಲ್ಯಗಳು ನಶಿಸುತ್ತಿದ್ದು, ಸಮಾಜಕ್ಕೆ ಯುವ ಸಮುದಾಯದಿಂದ ಯಾವುದೇ ಕೊಡುಗೆ ದೊರೆಯುತ್ತಿಲ್ಲ. ಈ ಹಿನ್ನೆಲೆಯಲ್ಲಿ ಯುವ ಜನತೆ ಎಚ್ಚೆತ್ತುಕೊಳ್ಳಬೇಕಾದ ಅಗತ್ಯವಿದ್ದು, ಆ ಮೂಲಕ ಸಮಾಜದ ಸ್ವಾಸ್ಥವನ್ನು ಕಾಪಾಡಬೇಕಾಗಿದೆ ಎಂದರು.

ಕಾಲೇಜಿನಲ್ಲಿ ನಡೆದ ಕನ್ನಡ ಸಂಭ್ರಮ ಕಾರ್ಯಕ್ರಮದಲ್ಲಿ ಕನ್ನಡ ನಾಡು-ನುಡಿ, ಕಲೆ, ಸಾಹಿತ್ಯ ಸಂಸ್ಕೃತಿ ಅನಾವರಣಗೊಳಿಸಿದರು. ಸ್ಥಳೀಯ ವಿದ್ಯಾರ್ಥಿಗಳ ಜತೆಗೆ ಹೊರ ರಾಜ್ಯ ಹಾಗೂ ವಿದೇಶಿ ವಿದ್ಯಾರ್ಥಿಯರಿಗೆ ಕನ್ನಡದ ಕಂಪನ್ನು ಪಸರಿಸುವ ಸಲುವಾಗಿ ಕುವೆಂಪು ಅವರ ಕವಿತೆಗಳು, ಹಾಡು ಸೇರಿದಂತೆ ಕನ್ನಡದ ಅರಿವು ಮೂಡಿಸುವ ನೃತ್ಯ ಕಾರ್ಯಕ್ರಮದ ಮೆರಗನ್ನು ಹೆಚ್ಚಿಸಿತು. ಕನ್ನಡತೇರರ ಪ್ರಾಂಶುಪಾಲ, ಅಧ್ಯಾಪಕ ವರ್ಗ ಹಾಗೂ ವಿದ್ಯಾರ್ಥಿಗಳು ಕನ್ನಡ ಚಿತ್ರಗೀತೆ, ಭಾಷಣವನ್ನು ಮಾಡಿ ಕನ್ನಡ ಅಭಿಮಾನ ಮೆರದರು.

ಕಾರ್ಯಕ್ರಮದಲ್ಲಿ ಬಿಗ್‌ಬಾಸ್‌ ಖ್ಯಾತಿಯ ಕೀರ್ತಿಕುಮಾರ್‌ (ಕಿರಿಕ್‌ ಕೀರ್ತಿ), ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್‌.ವಿ.ರಾಜೀವ್‌, ಕಾಲೇಜು ವ್ಯವಸ್ಥಾಪಕರಾದ ಸಿಸ್ಟರ್‌ ಅಂಜಲಿ, ನಿರ್ದೇಶಕಿ ಸಿಸ್ಟರ್‌ ಸಚಿತ, ಆಡಳಿತಾಧಿಕಾರಿ ಡಾ.ಸಿಸ್ಟರ್‌ ಜನಿವಿವ್‌, ಪ್ರಾಂಶುಪಾಲ ಪ್ರೊ. ವಿ.ಕೆ.ಜೋಸ್‌, ಕನ್ನಡ ವಿಭಾಗ ಮುಖ್ಯಸ್ಥೆ ಡಾ.ಜಿ.ಎಸ್‌. ಸುಶೀಲಮ್ಮ ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next