Advertisement
ಕವಿಸಂನಲ್ಲಿ ದಿ| ಮರಿಗೌಡ ಫಕ್ಕೀರಗೌಡ ಪಾಟೀಲ ದತ್ತಿ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ “ಕೃಷಿ ನೆಲ-ಜಲ-ಸಹಕಾರ’ ಕುರಿತು ಅವರು ಮಾತನಾಡಿದರು. ನೆಲ ಮತ್ತು ಜಲದ ಬಗ್ಗೆ ಬದ್ಧತೆಯಿಂದ ತೊಡಗಿಕೊಳ್ಳುವ ಕಾಲ ಬಂದಿದೆ. ಇಂದು ನೀರು, ನೆಲ, ಸಂರಕ್ಷಣೆ ಮಾಡುವವರು ಯಾರು ಎಂದು ಪ್ರಶ್ನೆ ಹಾಕಿಕೊಳ್ಳಬೇಕಿದೆ. ಇಂದು ವ್ಯಕ್ತಿಗತ ನೆಲೆಯಲ್ಲಿ ಯೋಚಿಸದೇ ಸಮೂಹ ನೆಲೆಗಟ್ಟಿನಲ್ಲಿ ನಿಂತು ಮಾತನಾಡುವಂತಾಗಬೇಕು ಎಂದರು.
Related Articles
Advertisement
ನಿವೃತ್ತ ಪ್ರಾಚಾರ್ಯ ಬಿ.ಎಲ್. ಶಿವಳ್ಳಿ ಮಾತನಾಡಿದರು. ಬೆಳಗಾವಿ ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಡಾ| ವಿ.ಎಸ್. ಸಾಧೂನವರ ಅಧ್ಯಕ್ಷತೆ ವಹಿಸಿದ್ದರು. ದತ್ತಿದಾನಿಗಳ ಪರವಾಗಿ ಬೊಮ್ಮನಾಯ್ಕ ಪಾಟೀಲ ಮಾತನಾಡಿದರು. ಶಂಕರ ಹಲಗತ್ತಿ ಸ್ವಾಗತಿಸಿದರು. ಶಿವಾನಂದ ಭಾವಿಕಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಶಂಕರ ಕುಂಬಿ ನಿರೂಪಿಸಿದರು. ಡಾ| ಜಿನದತ್ತ ಹಡಗಲಿ ವಂದಿಸಿದರು.
ಬಸವಪ್ರಭು ಹೊಸಕೇರಿ, ಡಾ| ಸಂಜೀವ ಕುಲಕರ್ಣಿ, ಗುರು ಹಿರೇಮಠ, ಡಾ| ಮಹೇಶ ಹೊರಕೇರಿ ಹಾಗೂ ಸುಶೀಲಾಬಾಯಿ ಮರಿಗೌಡ ಪಾಟೀಲ, ಡಾ| ಎಂ.ಬಿ. ಮುನೇನಕೊಪ್ಪ, ಸಿ.ಎಸ್. ಪಾಟೀಲ, ಎಸ್.ಜಿ. ಪಾಟೀಲ, ರಾಜೇಂದ್ರ ಸಾವಳಗಿ, ನಿರ್ಮಲಾ ಜಾಪಗಾಲ, ಬಿ.ಆರ್. ಪಾಟೀಲ, ಎಫ್. ಎಂ. ವೆಂಕನಗೌಡರ, ಆರ್.ಎಂ. ಪಾಟೀಲ, ಶಾಂತಾ ಪಾಟೀಲ, ಶಿ.ಮ. ರಾಚಯ್ಯನವರ, ಮಹಾಂತೇಶ ನರೇಗಲ್ಲ ಹಾಗೂ ಮರಿಗೌಡ ಫಕ್ಕೀರಗೌಡ ಪಾಟೀಲ ಪರಿವಾರದವರು ಪಾಲ್ಗೊಂಡಿದ್ದರು.
ಮನಸ್ಥಿತಿ ಬದಲಾಗದಿದ್ದರೆ ಕಷ್ಟಭೂಮಿ ನಾಶವಾದರೆ ನಾವು ಬದುಕುವುದು ಹೇಗೆ? ಮಣ್ಣು ನಾಶವಾದರೆ ಮತ್ತೆ ಮಣ್ಣನ್ನು ಸೃಷ್ಟಿ ಮಾಡಲು ಆಗುವುದಿಲ್ಲ ಎಂಬ ಅರಿವು ಎಲ್ಲರಿಗೂ ಇರಬೇಕು. ನೆಲ-ಜಲ ಸಂಕಷ್ಟದಲ್ಲಿದೆ. ನಮ್ಮ ಸಂಕಷ್ಟವನ್ನು ಹೊರ ದೇಶದವರು ಬಂದು ಅಧ್ಯಯನ ಮಾಡುತ್ತಿದ್ದಾರೆ. ಇದು ನಮಗೆ ನಾಚಿಕೆ ತರುವಂತಹದ್ದು. ನಮ್ಮ ಸಮಸ್ಯೆಯನ್ನು ನಾವು ಅಧ್ಯಯನ ಮಾಡದೇ ಹೋಗುತ್ತಿದ್ದೇವೆ. ನಮ್ಮ ಮನಸ್ಥಿತಿ ಬದಲಾಗದೇ ಹೋದರೆ ದೇಶ ಇನ್ನಷ್ಟು ಜಲ ಸಮಸ್ಯೆ ಎದುರಿಬೇಕಾದೀತು ಎಂದು ಡಾ| ರಾಜೇಂದ್ರ ಪೊದ್ದಾರ ಎಚ್ಚರಿಸಿದರು. ಬಾಟಲಿ ನೀರು ಖರೀದಿ ಮಾಡುವುದನ್ನು ನಿಲ್ಲಿಸಬೇಕಿದೆ. ಇದರಿಂದ ಮಿಲಿಯನ್ ಕೋಟಿಯ ಬಾಟಲಿ ಮಾಫಿಯಾವನ್ನು ಒಂದು ಸಣ್ಣ ನಿರ್ಧಾರದಿಂದ ಹೊಡೆದು ಹಾಕಬಹುದು.
ರಾಜೇಂದ್ರ ಪೊದ್ದಾರ,
ವಾಲ್ಮಿ ನಿರ್ದೇಶಕ