ಶಹಾಬಾದ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಶುಕ್ರವಾರ ವಿಕಲಚೇತನರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನಗರದ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ ಗ್ರೇಡ್-2 ತಹಶೀಲ್ದಾರ್ ಮುಖಾಂತರ ಸಿಎಂಗೆ ಮನವಿ ಸಲ್ಲಿಸಿದರು.
ಈ ವೇಳೆ ಅಂಗವಿಕಲರ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಮಲ್ಲೇಶಿ ಭಜಂತ್ರಿ ಮಾತನಾಡಿ, ಜನಪ್ರತಿನಿಧಿಗಳು ಅಂಗವಿ ಕಲರ ಸಮಸ್ಯೆಗಳ ಬಗ್ಗೆ ಹಾಗೂ ಜನಸಾಮಾ ನ್ಯರ ಪರಿಸ್ಥಿತಿ ಅರ್ಥಮಾಡಿಕೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಂಗವಿಕಲರ ಮಾಸಾಶನ 3 ಸಾವಿರ ದಿಂದ 6 ಸಾವಿರ ರೂ.ಗೆ ಹೆಚ್ಚಿಸಬೇಕು. ಅಂಗವಿಕಲರ ಮನೆಗೆ 40 ಯೂನಿಟ್ ವಿದ್ಯುತ್ ಉಚಿತವಾಗಿ ನೀಡಬೇಕು. ಗೃಹ ತೆರಿಗೆ 50ರಷ್ಟು ರಿಯಾಯ್ತಿ ನೀಡಬೇಕು. ವಿಆರ್‌ಡಬ್ಲ್ಯೂ, ಎಮ್‌ಆರ್‌ಡಬ್ಲ್ಯೂ, ಯು ಆರ್‌ಡಬ್ಲ್ಯೂ ಅವರಿಗೆ ಕನಿಷ್ಟ 12 ಸಾವಿರ ರೂ. ವೇತನ ನೀಡಬೇಕು. ಅಂಗವಿಕಲರ ಪ್ರತ್ಯೇಕ ನಿಗಮ ಮಂಡಳಿ ಸ್ಥಾಪಿಸಬೇಕು. ಅಂಗವಿಕಲರ ಖಾಲಿ ಇರುವ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ನೇಮಕ ಮಾಡಬೇಕು. ಅಂಗವಿಕಲರಿಗೆ ಅನುದಾನ ಮೀಸಲಿರಿಸಬೇಕು. ಬೇರೆ ಇಲಾಖೆಗೆ ವರ್ಗಾಯಿಸಬೇಕು. ಅಂಗವಿಕಲರಿಗೆ ವಿಶೇಷ ಅನುದಾನ ಮೀಸಲಿಡಬೇಕು. ಯುಡಿಐಡಿ ಕಾರ್ಡ್ ತ್ವರಿತ ಗತಿಯಲ್ಲಿ ವಿತರಣೆ ಮಾಡುವ ವ್ಯವಸ್ಥೆ ಮಾಡಬೇಕು. ಅಂಗವಿಕಲರ ವಿವಾಹ ಪ್ರೋತ್ಸಾಹ ಧನ ಆರು ಲಕ್ಷ ರೂ.ಗೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
2022-23 ನೇಸಾಲಿನ ಬಜೆಟ್ ಅಂಗವಿಕಲರನ್ನು ಕಡೆಗಣಿಸಿದೆ. ಬೇಡಿಕೆ ಈಡೇರಿಸದಿದ್ದರೆ ಸರ್ಕಾರದ ವಿರುದ್ಧ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಬಸವರಾಜ ಅಳೊಳ್ಳಿ, ಸುಭಾಶ್ವಂದ್ರ ಕಾಂಬಳೆ, ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ರಾಮು ಜಾಧವ, ಕಟ್ಟಡ ಕಾರ್ಮಿಕರ ಸಂಘದ ಸಂಚಾಲಕ ನಾಗಪ್ಪ ರಾಯಚೂರಕರ್, ಸಿ.ಎಸ್.ಪಾಟೀಲ, ಪ್ರಕಾಶ ವಾಲಿಕರ, ಮಲ್ಕಣ್ಣ ಮುದ್ದಾ, ಶರಣಗೌಡ ಪಾಟೀಲ, ವಿಜಯಲಕ್ಷ್ಮೀ ಇದ್ದರು.