Advertisement

ವಿದ್ಯಾರ್ಥಿಗಳ ಶೈಕ್ಷಣಿಕ ಬೇಡಿಕೆ ಈಡೇರಿಕೆಗೆ ಆಗ್ರಹ

06:57 AM May 28, 2020 | Lakshmi GovindaRaj |

ಚಿಕ್ಕಬಳ್ಳಾಪುರ: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ರಾಜ್ಯದ ವಿದ್ಯಾರ್ಥಿ ಪೋಷಕರು ಸಿಲುಕಿರುವುದರಿಂ ದ ಸರ್ಕಾರ ಕೂಡಲೇ ಮುಂದಿನ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳ ಶಿಕ್ಷಣ ಶುಲ್ಕ ಸೇರಿ ಎಲ್ಲಾ ರೀತಿಯ  ಶುಲ್ಕಗಳ ನ್ನು ಸರ್ಕಾರವೇ ಭರಿಸಬೇಕೆಂದು ಆಗ್ರಹಿಸಿ ಜಿಲ್ಲೆಯಲ್ಲಿ ಎಐಡಿಎಸ್‌ಒ ಸಂಘ ಟನೆ ಕಾರ್ಯಕರ್ತರು ಆಗ್ರಹ ದಿನ ಆಚರಿಸಿದರು.

Advertisement

ಎಐಡಿಎಸ್‌ಒ ಸಂಘಟನೆ ಜಿಲ್ಲಾ ಸಂಚಾಲಕ ಎಚ್‌.ಅಯ್ಯಲಪ್ಪ ನೇತೃತ್ವ  ದಲ್ಲಿ ವಿದ್ಯಾರ್ಥಿಗಳು  ತಮ್ಮ ತಮ್ಮ ಮನೆಗಳ ಮುಂದೆ ಶೈಕ್ಷಣಿಕ ಕ್ಷೇತ್ರದ ವಿವಿಧ ಬೇಡಿಕೆಗಳ ನಾಮಫ‌ಲಕ ಹಿಡಿದು ಪ್ರತಿಭಟನೆ ನಡೆಸುವ ಮೂಲಕ ಗಮನ ಸೆಳೆದರು. ಎಲ್ಲಾ ಸರ್ಕಾರಿ ಹಾಗೂ ಅನು ದಾನಿತ ಶಾಲಾ ಕಾಲೇಜುಗಳ ಶುಲ್ಕ ಸರ್ಕಾರವೇ ಭರಿಸಬೇಕು.

ವಿಶ್ವ ವಿದ್ಯಾ ಲಯಗಳ ಪರೀಕ್ಷಾ ಶುಲ್ಕ ರದ್ದುಗೊಳಿಸ ಬೇಕು.ಈಗಾಗಲೇ ಶುಲ್ಕ ಪಡೆದಲ್ಲಿ, ಅದನ್ನು ವಾಪಸು ಮಾಡಬೇಕು, ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೂ ಉಚಿತ ಬಸ್‌ ಪಾಸ್‌ ನೀಡಬೇಕು, ವಿದ್ಯಾ ರ್ಥಿ ಗಳ ಸ್ಕಾಲರ್‌ಶಿಪ್‌ ಹೆಚ್ಚಿಸಬೇಕು,  ಸರ್ಕಾ ರಿ ಹಾಸ್ಟೆಲ್‌ಗ‌ಳ ಅನುದಾನ ಹೆಚ್ಚಿಸಿ , ಹಾಸ್ಟೆಲ್‌ ಸೌಕರ್ಯ ಶೈಕ್ಷಣಿಕ ವರ್ಷದ ಆರಂಭದಲ್ಲೇ ಒದಗಿಸಬೇಕು,

ಆನ್‌ ಲೈನ್‌ ತರಗತಿಗಳ ಆಧಾರದ ಮೇಲೆ ಪರೀಕ್ಷೆ ನಡೆಸಬಾರ‌ದು. ಪರೀಕ್ಷೆ ರೂಪು ರೇಷೆಯನ್ನು ಶಿಕ್ಷಣ  ತಜ್ಞರು,ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಜೊತೆ ಯಲ್ಲಿ ಚರ್ಚಿಸಿ ಪ್ರಜಾತಾಂತ್ರಿಕವಾಗಿ ರೂಪಿಸಬೇ ಕೆಂದು ಎಐಡಿಎಸ್‌ಒ ಸಂಘಟನೆ ಜಿಲ್ಲಾ ಸಂಚಾ ಲಕ ಅಯ್ಯಲಪ್ಪ ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next