ಮಂಡ್ಯ: ಬೆಲೆ ಕುಸಿತದಿಂದ ಕಂಗೆಟ್ಟಿರುವ ರೇಷ್ಮೆ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸದ ಸರ್ಕಾರದ ನಿಲುವನ್ನು ವಿರೋಧಿಸಿ, ರೇಷ್ಮೆ ಬೆಳೆಗಾರರ ಒಕ್ಕೂಟದ ಪದಾಧಿಕಾರಿಗಳು ಮಂಗಳವಾರ ನಗರದಲ್ಲಿ ಪ್ರತಿಭಟನಾ ಧರಣಿ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿ ದ ಒಕ್ಕೂಟದ ಸದಸ್ಯರು ರಾಜ್ಯಸರ್ಕಾರದ ವಿರುದಟಛಿ ಘೋಷಣೆ ಕೂಗಿದರು. ಸರ್ಕಾರದ ಲಾಕ್‌ಡೌನ್ ನಿರ್ಧಾರಕ್ಕೆ ಬೆಳೆಗಾರರು ಸ್ಪಂದಿಸಿ ದ್ದರೂ ಲಾಕ್‌ಡೌನ್ ನಂತರ ರೇಷ್ಮೆ ಬೆಳೆಗಾರರ ಸಂಕಷ್ಟಕ್ಕೆ ಸರ್ಕಾರ ಧಾವಿಸದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ಎರಡು ವರ್ಷದಿಂದ ಬೆಲೆ ಕುಸಿತ: ಒಕ್ಕೂಟದ ಅಧ್ಯಕ್ಷ ಶಿವಲಿಂಗಯ್ಯ ಮಾತನಾಡಿ, 2015-16ನೇ ಸಾಲಿನಲ್ಲಿ ಬಸವರಾಜು ಆಯೋಗ ಸಮಿತಿ ವರದಿಯಂತೆ ರೇಷ್ಮೆ ಗೂಡಿನ ದರ ಕನಿಷ್ಠ ಮಿಶ್ರತಳಿ ಗೂಡಿಗೆ 280 ರೂ. ಹಾಗೂ ದ್ವಿತಳಿ ಗೂಡಿಗೆ 350 ರೂ. ನೀಡುವಂತೆ ಸರ್ಕಾರದ ಆದೇಶವಾಗಿದೆ. ಆದರೂ ಕಳೆದೆರಡು ವರ್ಷಗಳಿಂದ ರೇಷ್ಮೆ ದರ ಕುಸಿತವಾಗಿದ್ದರೂ ಆದೇಶದಂತೆ ದರ ನೀಡಿಲ್ಲ ಎಂದು ಆರೋಪಿಸಿದರು.
ಲಾಕ್‌ಡೌನ್‌ನಿಂದ ರೇಷ್ಮೆ ಗೂಡಿನ ದರ ತೀವ್ರ ಕುಸಿತ ಕಂಡಿದೆ. ಪ್ರತಿ ಕೆ.ಜಿ. ರೇಷ್ಮೆ ಗೂಡು 120 ರೂ.ನಿಂದ 150 ರೂ.ವರೆಗೆ ಮಾರಾಟವಾ ಗುತ್ತಿದೆ. ಒಂದು ಕೆಜಿ ಗೂಡು ಬೆಳೆಯಲು ರೈತರಿಗೆ 280 ರೂ. ಖರ್ಚಾಗುತ್ತಿದೆ. ಇದರಿಂದ ರೈತರು ಅಪಾರ ನಷ್ಟ ಅನುಭವಿಸುತ್ತಿದ್ದು, ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಗೆ ತಲುಪಿದ್ದಾರೆ ಎಂದು ಅಳಲು ವ್ಯಕ್ತ ಪಡಿಸಿದರು.
ಪ್ರೋತ್ಸಾಹಧನ ಬಿಡುಗಡೆ ಮಾಡಿ: ರೇಷ್ಮೆ ಮನೆ ನಿರ್ಮಿಸಲು ಸರ್ಕಾರ ಸಬ್ಸಿಡಿ ಹಣ ನೀಡುತ್ತಿದೆ. ಸುಮಾರು ಎರಡು ವರ್ಷದಿಂದ ಹೊಸದಾಗಿ ಮನೆ ನಿರ್ಮಾಣ ಮಾಡಿದ ರೈತರಿಗೆ ಪ್ರೋತ್ಸಾಹಧನ ಬಿಡುಗಡೆ ಮಾಡಬೇಕು. ರೇಷ್ಮೆ ಬೆಳೆಗಾರರು ಸುಣ್ಣ ಹಾಗೂ ಕೆಮಿಕಲ್ ಔಷಧವನ್ನು ತೋಟಕ್ಕೆ ಹಾಗೂ ಸಾಕಾಣಿಕೆ ಮನೆಗೆ ಸಿಂಪರಣೆ ಮಾಡುವುದರಿಂದ ರೈತರು ರೋಗಕ್ಕೆ ತುತ್ತಾಗುತ್ತಿದ್ದಾರೆ. ರೇಷ್ಮೆ ಬೆಳೆಗಾರರಿಗೆ ಪ್ರತ್ಯೇಕ ಆರೋಗ್ಯ ವಿಮೆ ಮಾಡಿಸಿಕೊಡ ಬೇಕು. ಹಿಂದಿನ ಸರ್ಕಾರದಲ್ಲಿದ್ದ ಆರೋಗ್ಯವಿಮೆ ಸ್ಥಗಿತಗೊಂಡಿರುವುದಾಗಿ ಹೇಳಿದರು.
ಬೆಲೆ ನಿಗದಿಪಡಿಸಿ: ಚಾಕಿ ಸಾಕಾಣಿಕೆದಾರರ ಗೂಡಿನ ದರ ಕಡಿಮೆ ಇದ್ದರೂ ಸಹ 100 ಮೊಟ್ಟೆ ರೇಷ್ಮೆ ಮರಿಗಳಿಗೆ 3400 ರೂ.ನಿಂದ 3900 ರೂ.ವರೆಗೆ ರೇಷ್ಮೆ ಬೆಳೆಗಾರರ ಬಳಿ ಹಣ ತೆಗೆದುಕೊಳ್ಳುತ್ತಿದ್ದಾರೆ. ಈ ಚಾಕಿ ಸಾಕಾಣಿಕೆದಾರ ರಿಗೆ ನಿಗದಿತ ದರ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಕೆ.ಬಿ. ಶಿವಕುಮಾರ, ಜೋಗಿಗೌಡ, ಕೆ.ಸಿ.ಬೋರೇ ಗೌಡ, ಮಹದೇವು, ಬಿ.ಪಿ.ಅಪ್ಪಾಜಿ, ರಾಮಚಂ ದ್ರು, ಕೆ.ಸಿ.ಚನ್ನಪ್ಪ, ಕೆ.ಸಿ.ಸೋಮಶೇಖರ್, ಬಿ.ಪ್ರಕಾಶ, ಮರಿಸ್ವಾಮಯ್ಯ ಇತರರಿದ್ದರು.