ಮಣಿಪಾಲ: ರಾಜ್ಯದಲ್ಲಿ ಎಲ್ಲಾ ಕೋವಿಡ್-19 ಸೋಂಕಿತರಿಗೂ ಉಚಿತವಾಗಿ ಚಿಕಿತ್ಸೆ ನೀಡಬೇಕೆಂಬ ಆಗ್ರಹದ ಕುರಿತಾಗಿ ನಿಮ್ಮ ಅಭಿಪ್ರಾಯವೇನು ಎಂದು ಉದಯವಾಣಿ ಕೇಳಿದ್ದು, ಆಯ್ದ ಅಭಿಪ್ರಾಯಗಳು ಇಲ್ಲಿದೆ.
ಸಂತೋಷ್ ಸಲಿಕೇರಿ: ಜನರು ಈಗಾಗಲೇ ಹಣ ಇಲ್ಲದೆ ಸೋತು ಹೋಗಿದ್ದರೆ, ಸಾವು ಬಂದರು ಪರವಾಗಿಲ್ಲ ಅನ್ನು ನಿದಾ೯ರದಲಿದಾರೆ, ಉಚಿತ ವಾಗಿ ಚಿಕಿತ್ಸೆ ಕೊಟ್ಟರೆ ಜನ ಬದುಕುತ್ತಾರೆ, ಇಲ್ಲಾಂದ್ರೆ ಚಿಕಿತ್ಸೆಗೆ ಹಣ ಇದಲ್ಲದೆ ಸಾವುತಾರೆ, ಬಡವರಿಗೆ ಕೋವಿಡ್-19 ಹರಡಿದ್ದರೆ ಮತ್ತೆ ಕಂಟ್ರೋಲ್ ಮಾಡಲು ಆಗಿದ್ದಿಲ,
ಅನುಸೂಯ ಅನ್ಸುರಿ: ಈ ರೋಗ ದೇಶಕ್ಕೆ ಕಾಲಿಡದಂತೆ ಮೊದಲೇ ಎಚ್ಚರಿಕೆ ವಹಿಸಬೇಕಿತ್ತು. ಆದರೆ ಈಗ ದೇಶಾದ್ಯಂತ ಹರಡಿರುವುದರಿಂದ ಜನರೇ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು, ಬಡ,ಕೆಳ ಮತ್ತು ಮಧ್ಯಮವರ್ಗದ ಜನರಿಗೆ ಉಚಿತ ಚಿಕಿತ್ಸೆ ನೀಡಬೇಕು.
ಗೋಪಾಲ್ ಕೆವಿ ಕೆವಿ ಗೋಪಾಲ್: ಮಾರ್ಚ್ ಆರಂಭದಲ್ಲಿ ವಿದೇಶಿ ವಾಪಸಾತಿ ಲಾಕ್ ಡೌನ್ ನಡುವೆ ಕಂಟ್ರೋಲ್ ಇದ್ದ ಕೊರೋನಾವನ್ನು ಅವೈಜ್ಞಾನಿಕ ಅಂತರರಾಜ್ಯ ಮತ್ತು ಅವೈಜ್ಞಾನಿಕ ಕ್ವಾರೆಂಟಿನ್ ಮತ್ತು ಸೊಂಕಿತರ ಟ್ರಾವೆಲ್ ಹಿಸ್ಟರಿ ಸರಿಯಾಗಿ ಜನರಿಗೆ ತಿಳಿಸದೆ, ಸಮುದಾಯದ ಅಪಾಯಕ್ಕೆ ತಳ್ಳಿ ಬೆಲೆ ನಿಗದಿ ಮಾಡುವುದು ವ್ಯವಹಾರವಾಗುವುದು,! ಜನರ ವೈಪಲ್ಯಕ್ಕಿಂತ ಸರ್ಕಾರದ ವೈಫಲ್ಯ ಹೆಚ್ಚಿದೆ, ಹಾಗಾಗಿ ಕೋವಿಡ್-19 ವಿಷಯದಲ್ಲಿ ಸರ್ಕಾರ ಉಚಿತ ಟ್ರೀಟ್‌ಮೆಂಟೇ ಕೊಡಬೇಕು,
ಎಚ್. ಹನುಮಂತರಾಜ್: ಈ ದೇಶದಲ್ಲಿ ಆರೋಗ್ಯ ಮತ್ತು ಶಿಕ್ಷಣ ಎಲ್ಲರಿಗೂ ಉಚಿತವಾಗಿ ದೊರಕಬೇಕು ಬಡವ ಮತ್ತು ಶ್ರೀಮಂತ ಎಂಬ ಭೇದ ಭಾವ ಇಲಾದೆ ಎಲ್ಲ ಸಾರ್ವಜನಿಕರಿಗೆ ದೊರೆತ್ತಾಗ ಈ ದೇಶ ಉದಾರ ವಾಗುತ್ತದೆ.
ಸತೀಶ್ ಚಾಣಾಕ್ಷ ಪಾರ್ಥಿವಾಸ: ಆರೋಗ್ಯ ಮತ್ತು ಶಿಕ್ಷಣ ಎಂದಿಗೂ ವ್ಯಾಪಾರಿಕರಣ ಆಗ್ಲೇ ಬಾರದು. ಈ ಕೋವಿಡ್-19 ಸಂದರ್ಭ ದಲ್ಲಿಯಾದರೂ ಸರ್ಕಾರ ಉಚಿತವಾಗಿ ನೀಡುವುದರ ಬಗ್ಗೆ ಗಂಭೀರವಾಗಿ ಯೋಚಿಸಲೇ ಬೇಕಿದೆ.
ಜಹೀರ್ ಅಹಮದ್: ಖಂಡಿತ ಬಡವರಿಗೆ ಉಚಿತ ಚಿಕಿತ್ಸೆ ಕೊಡ್ಬೇಕು. ಆದರೆ ದೊಡ್ಡ ದೊಡ್ಡ ಮೊಸೊಳೆಗಳು ಇದ್ದಾವೆ. ಮೊದಲು ಅವುಗಳಿಗೆ ಹಿಡಿದು ಚಿಕಿತ್ಸೆ ನೀಡಿ.
ಗುರು ಪ್ರಸಾದ್: ಬಡವರಿಗೆ ಒಂದು ವತ್ತು ಊಟಕ್ಕೆ ಕೂಡ ತುಂಬಾ ಕಷ್ಟ ಆಗಿದೆ ಈಗ ಆಸ್ಪತ್ರೆ ಖರ್ಚು ಭರಿಸಲು ಸಾಧ್ಯವಿಲ್ಲ.. ಆದ್ದರಿಂದ ಸರ್ಕಾರವೇ ಉಚಿತ ಚಿಕಿತ್ಸೆ ಕೊಡಬೇಕು