Advertisement

ಪದವೀಧರ ಮಹಿಳೆಯರ ಪ್ರಮಾಣ ಹೆಚ್ಚಲಿ

04:37 PM Aug 20, 2017 | Team Udayavani |

ದಾವಣಗೆರೆ: ನಮ್ಮ ದೇಶದಲ್ಲಿ ಪದವಿ ಪಡೆಯುತ್ತಿರುವ ಮಹಿಳೆಯರ ಪ್ರಮಾಣ ತೀರಾ ಕಡಿಮೆ ಇದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ|ಭೀಮಾಶಂಕರ್‌ ಎಸ್‌. ಗುಳೇದ್‌ ಹೇಳಿದ್ದಾರೆ. ಶನಿವಾರ ಎವಿಕೆ ಕಾಲೇಜಿನಲ್ಲಿ
ಹಮ್ಮಿಕೊಂಡಿದ್ದ ಪ್ರಥಮ ವರ್ಷದ ಪದವಿ ವಿದ್ಯಾರ್ಥಿನಿಯರ ಪುನಶ್ಚೇತನ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದ
ಅವರು, ದೇಶದ ಶೇ.8.5ರಷ್ಟು ಮಹಿಳೆಯರು ಮಾತ್ರ ಪದವಿ ಪಡೆದುಕೊಳ್ಳುತ್ತಿದ್ದಾರೆ. ಈ ಪ್ರಮಾಣ ಹೆಚ್ಚಬೇಕಿದೆ. ಸಮಾಜ, ಪೋಷಕರು ಈ ಸಮಸ್ಯೆ ಕುರಿತು ಗಂಭೀರವಾಗಿ ಆಲೋಚಿಸಿ, ಹೆಚ್ಚಿನ ಮಹಿಳೆಯರು ಪದವೀಧರರಾಗಲು ಕ್ರಮ ವಹಿಸಬೇಕಿದೆ ಎಂದರು. ಹಳ್ಳಿಗಾಡಿನ ವಿದ್ಯಾರ್ಥಿನಿಯರು ವಿದ್ಯಾಭ್ಯಾಸಕ್ಕೆ ನಗರಕ್ಕೆ ವಲಸೆ ಬಂದಂತಹ ಸಂದರ್ಭದಲ್ಲಿ ನಗರದ ವಾತಾವಾರಣದಲ್ಲಿ ಸ್ವತಂತ್ರ ಸಿಕ್ಕಂತೆ ಆಗುತ್ತದೆ. ಇದನ್ನು ಸ್ವೇಚ್ಛಾಚಾರ ಅಂದುಕೊಳ್ಳದೆ ವಿದ್ಯಾರ್ಥಿನಿಯರು ಶೈಕ್ಷಣಿಕವಾಗಿ ಉತ್ತಮ ಸಾಧನೆ ಮೆರೆಯುವತ್ತ ಗಮನ ಹರಿಸಬೇಕು ಎಂದು ಕಿವಿಮಾತು ಹೇಳಿದರು. ಸಮಾಜ ಮುಗ್ಧವಾಗಿಲ್ಲ. ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕಿದೆ. ಪ್ರಸ್ತುತ ದಿನಗಳಲ್ಲಿ ದುಶ್ಚಟಗಳ ದಾಸರಾಗದೇ, ರ್ಯಾಗಿಂಗ್‌, ಉಡುಗೆ ತೊಡುಗೆ ಬಗ್ಗೆ ಅರಿತು ಸಮಾಜದಲ್ಲಿ ಮುನ್ನಡೆಯಬೇಕು.
ಮನುಷ್ಯ ಹಾಳಾಗುವುದಕ್ಕೆ ನೂರಾರು ದಾರಿ ಇದ್ದು, ಆದರೆ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದಕ್ಕೆ ಮತ್ತೂಂದು ದಾರಿ
ಕಂಡುಕೊಳ್ಳಬೇಕು ಎಂದು ಅವರು ಹೇಳಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ| ಪಿ.ಎಸ್‌. ಶಿವಪ್ರಕಾಶ್‌ ಮಾತನಾಡಿ, ಆಧುನಿಕ ದಿನಗಳಲ್ಲಿ ಯೋಗಕ್ಕೆ ಬಹಳಷ್ಟು ಮಹತ್ವ ಪಡೆದುಕೊಂಡಿದ್ದು, ವಿದ್ಯಾರ್ಥಿಗಳು ಯೋಗಾಭ್ಯಾಸದಲ್ಲಿ ತೊಡಗಬೇಕು. ಹಾಗೆಯೇ ಕಾಲೇಜಿನಿಂದ ಉಚಿತವಾಗಿ ಕರಾಟೆ ತರಬೇತಿ ನೀಡಲಾಗುವುದು ಎಂದು ಹೇಳಿದರು. ಪ್ರೊ| ಪಾಲಾಕ್ಷ, ಡಿ.ಬಿ. ಸುಜಯಕುಮಾರಿ, ಆರ್‌. ಗೌರಮ್ಮ, ಡಾ| ಪಿ.ಎಂ.ಅನುರಾಧ, ಪ್ರೊ| ಎ.ಡಿ. ಬಸಪ್ಪ, ಜಿ.ಎಸ್‌. ಸೌಂದರ್ಯ, ಜ್ಯೋತಿಗುಪ್ತ, ಮಯೂರಿ ಎಂ.ರಾವ್‌, ಡಾ| ಬಿ.ಪಿ.ಕುಮಾರ್‌ ಇತರರು ವೇದಿಕೆಯಲ್ಲಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next