Advertisement

ಉಪ ಚುನಾವಣೆ ಸೋಲು ನೈತಿಕ ಸೋಲಲ್ಲ

12:25 PM Jan 23, 2018 | Team Udayavani |

ನಂಜನಗೂಡು: ಕಳೆದ ಉಪ ಚುನಾವಣೆಯ ಸೋಲು ನೈತಿಕತೆಯ ಸೋಲಲ್ಲ, ಅಧಿಕಾರ ಹಾಗೂ ಹಣ, ಹೆಂಡದಿಂದಾದ ಸೋಲು ಎಂದು ವ್ಯಾಖ್ಯಾನಿಸ  ಶ್ರೀನಿವಾಸ್‌ ಪ್ರಸಾದ್‌, 68 ಸಾವಿರಕ್ಕೂ ಹೆಚ್ಚು ಜನ ಹಣದ ವ್ಯಾಮೋಹವನ್ನು ಧಿಕ್ಕರಿಸಿ, ಸ್ವಾಭಿಮಾನದ ಪರವಾಗಿ ಮತ ನೀಡಿದ್ದಾರೆ ಎಂದರು. 

Advertisement

ನಂಜನಗೂಡು ಸಮಾವೇಶದ  ವೇದಿಕೆಯಲ್ಲಿ ಮಾತನಾಡಿದ ಅವರು, ಉಪ ಚುನಾವಣೆಯಲ್ಲಿ ಇಡೀ ಜೆಡಿಎಸ್‌ ಪಕ್ಷವನ್ನು ಖರೀದಿಸಿ ಕಾಂಗ್ರೆಸ್‌ ಚುನಾವಣೆಯ ಷಡ್ಯಂತ್ರ ರೂಪಿಸಿತ್ತು. ಚುನಾವಣೆಯ 48 ಗಂಟೆ ಮುಂಚೆಯವರೆಗೂ ಜಯ ತಮ್ಮ ಪಾಲಿಗಿತ್ತು ಎಂದರು.

ನಂತರ ಕಂದಾಯ, ಪೊಲೀಸ್‌ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ಸ್ವಪಕ್ಷೀಯರು, ಕಾಂಗ್ರೆಸ್ಸಿನೊಂದಿಗೆ ಕೈ ಜೋಡಿಸಿದ ಪರಿಣಾಮ  ಜಯಸಿರಿ ತಮ್ಮಿಂದ ಜಾರಿತು ಎಂದು ವಿಷಾದಿಸಿದರು. ಉಪ ಚುನಾವಣೆಯ ಗೆಲುವಿನಿಂದಾಗಿ ಸಿಎಂ ಜನತೆಗೆ ಪಾಲಿಗೆ ಬ್ರಹ್ಮರಾಕ್ಷಸನಾಗಿ ಕಾಟ  ನೀಡುತ್ತಿದ್ದಾನೆ ಎಂದು ಕಿಡಿಕಾಡಿದ ಪ್ರಸಾದ್‌,

ಕಾಂಗ್ರೆಸ್‌ನ ವಿವಿಧ ರಾಜ್ಯಗಳ ಸೋಲು ಗಿನ್ನಿಸ್‌ ದಾಖಲೆಗೆ ದಾಖಲಾಗುತ್ತದೆ ಎಂದರು. ಉತ್ತರ ಪ್ರದೇಶದ  ಮುಖ್ಯಮಂತ್ರಿಯನ್ನು ಟೀಕಿಸುವ ಮೊದಲು ನೆಹರು ವಂಶ ತಲೆ ಮಾರುಗಳ ಕಾಲ ಪ್ರತಿನಿಧಿಸುತ್ತಿದ್ದ ಅಲ್ಲಿ ಪಕ್ಷದ ಸ್ಥಿತಿ ಏನಾಗಿದೆ ಎಂಬುವುದನ್ನು ಅರಿತು  ಮಾತನಾಡಿ ಎಂದು ಪ್ರಸಾದ್‌ ಸಿದ್ದರಾಮಯ್ಯ ಅವರನ್ನು ಟಿಕೀಸಿದರು. 

Advertisement

Udayavani is now on Telegram. Click here to join our channel and stay updated with the latest news.

Next