ಹೊಸದಿಲ್ಲಿ: ಇನ್ನೇನು ಪ್ರತಿ ಲೀಟರ್ ಪೆಟ್ರೋಲ್‌ಗೆ ಭರ್ತಿ 100 ರೂ.ಆಗುತ್ತದೆ ಎನ್ನುವಷ್ಟರಲ್ಲಿ ದರ ಇಳಿಕೆ ಸರಣಿ ಶುರುವಾಯಿತು. ಸೋಮವಾರ (ನ.19) ಇಳಿಕೆ ಸರಣಿ ಶುರುವಾಗಿ 30 ದಿನಗಳು ಪೂರ್ತಿಯಾಗಿವೆ. ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ಗೆ 14 ಪೈಸೆ ಇಳಿಕೆಯಾಗಿದ್ದರಿಂದ 77.38 ರೂ. ಆಗಿದೆ. ಪ್ರತಿ ಲೀಟರ್ ಡೀಸೆಲ್‌ಗೆ 13 ಪೈಸೆ ಇಳಿಕೆಯಾಗಿದ್ದರಿಂದ 71.99 ರೂ. ಆಗಿದೆ. ಹೊಸದಿಲ್ಲಿಯಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 19 ಪೈಸೆ, ಡೀಸೆಲ್‌ಗೆ 17 ಪೈಸೆ ಕಡಿಮೆಯಾಗಿದೆ. ಹೀಗಾಗಿ ಪ್ರತಿ ಲೀಟರ್ ಪೆಟ್ರೋಲ್ ಹೊಸದಿಲ್ಲಿಯಲ್ಲಿ 76.52 ರೂ., ಮುಂಬಯಿಯಲ್ಲಿ 82.04 ರೂ., ಚೆನ್ನೈನಲ್ಲಿ 79.46 ರೂ., ಆಗಿದ್ದರೆ ಪ್ರತಿ ಲೀಟರ್ ಡೀಸೆಲ್‌ಗೆ ಹೊಸದಿಲ್ಲಿಯಲ್ಲಿ 71.39 ರೂ., ಮುಂಬೈನಲ್ಲಿ 74.79 ರೂ., ಚೆನ್ನೈನಲ್ಲಿ 75.44 ರೂ., ಕೋಲ್ಕತಾದಲ್ಲಿ 71.77 ರೂ. ಆಗಿದೆ.
ಅ.18ರ ಬಳಿಕ ಪೆಟ್ರೋಲ್ ದರದಲ್ಲಿ 7.43 ರೂ.ಗಳಷ್ಟು ಇಳಿಕೆಯಾಗಿದೆ. ಅಮೆರಿಕ-ಚೀನ ಸುಂಕ ಯುದ್ಧ, ಇರಾನ್ ಮೇಲೆ ಅಮೆರಿಕ ಹೊಸತಾಗಿ ಹೇರಿರುವ ಆರ್ಥಿಕ ದಿಗ್ಬಂಧನ, ಅಮೆರಿಕದ ಡಾಲರ್ ಎದುರು ರೂಪಾಯಿ ಕುಸಿತದಿಂದಾಗಿ ದರ ಏರಿಕೆಯಾಗಿತ್ತು. ಪೆಟ್ರೋಲ್‌ಗೆ ಹೋಲಿಕೆ ಮಾಡಿದರೆ ಒಂದು ತಿಂಗಳ ಅವಧಿಯಲ್ಲಿ ಪ್ರತಿ ಲೀಟರ್ ಡೀಸೆಲ್ ದರದಲ್ಲಿ ಇಳಿಕೆಯಾಗಿರುವ ಮೊತ್ತ 4.02 ರೂ. ಡೀಸೆಲ್ ದರ ಭಾರೀ ಪ್ರಮಾಣದಲ್ಲಿ ಇಳಿಕೆಯಾಗದಿದ್ದರೂ, ಗ್ರಾಹಕರ ಜೇಬಿನ ಮೇಲೆ ಉಂಟಾಗುತ್ತಿದ್ದ ಹೊರೆಯಲ್ಲಿ ಕೊಂಚ ಮಟ್ಟಿಗಾದರೂ ಕಡಿಮೆ ಮಾಡಿದ್ದಂತೂ ಹೌದು.
ದರ ಇಳಿಕೆಯಾಗಿದ್ದರಿಂದಲಾಗಿ ಆ.16ರಿಂದ ರಾಕೆಟ್ ವೇಗದಲ್ಲಿ ಏರುತ್ತಿದ್ದ ಪೆಟ್ರೋಲ್ ಮತ್ತು ಡೀಸೆಲ್ ದರಗಳಿಗೆ ನಿಯಂತ್ರಣ ಬಿದ್ದಿದೆ. ದೇಶಾದ್ಯಂತ ಸಾರ್ವಜನಿಕರು ನೆಮ್ಮದಿಯ ಉಸಿರು ಬಿಡುವಂತಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ದರ ಕಡಿಮೆಯಾಗಿದ್ದರಿಂದ ದೇಶದ ಮಾರುಕಟ್ಟೆಯಲ್ಲಿ ಕೂಡ ಪೆಟ್ರೋಲ್‌ಗೆ ಹೋಲಿಕೆ ಮಾಡಿದರೆ ಪ್ರತಿ ಲೀಟರ್ ಡೀಸೆಲ್ ದರ ಇಳಿಕೆಯಾಗಿದೆ. ಅ.4ರಂದು ಹೊಸದಿಲ್ಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ಗೆ 84 ರೂ., ಮುಂಬೈನಲ್ಲಿ 91.34 ರೂ. ಅದೇ ದಿನ ಪ್ರತಿ ಲೀಟರ್ ಡೀಸೆಲ್‌ಗೆ ಹೊಸದಿಲ್ಲಿಯಲ್ಲಿ 75.45 ರೂ., ಮುಂಬೈನಲ್ಲಿ 80.10 ರೂ. ಆಗಿತ್ತು.
ಅ.15ರಂದು ಹೊಸದಿಲ್ಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ಗೆ 77.14 ರೂ., ಮುಂಬೈನಲ್ಲಿ 84.58
ರೂ., ಅದೇ ದಿನ ಪ್ರತಿ ಲೀಟರ್ ಡೀಸೆಲ್ ಗೆ ಹೊಸದಿಲ್ಲಿಯಲ್ಲಿ 68.72 ರೂ., ಮುಂಬೈನಲ್ಲಿ 72.96 ರೂ. ಇತ್ತು. ಅದಕ್ಕೆ ಪೂರಕವಾಗಿ ಕೇಂದ್ರ ಸರಕಾರ ಎಕ್ಸೆ„ಸ್ ಡ್ನೂಟಿಯನ್ನು 1.50 ರೂ. ಇಳಿಕೆ ಮಾಡಿತ್ತು. ಇದರಿಂದಾಗಿ ತೈಲ ಕಂಪನಿಗಳು ಪ್ರತಿ ಲೀಟರ್ ಪೆಟ್ರೋಲ್, ಡೀಸೆಲ್‌ಗೆ 1 ರೂ. ಕಡಿಮೆ ಮಾಡುವಂತಾಯಿತು. ಕೆಲ ರಾಜ್ಯಗಳು ತಮ್ಮ ಪಾಲಿನ ತೆರಿಗೆ ಪ್ರಮಾಣ ಕಡಿತ ಮಾಡಿದ್ದವು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಏರಿಕೆಯಾಗುತ್ತಿದ್ದಂತೆಯೇ ಅ.17ರಂದು ಪೆಟ್ರೋಲ್, ಡೀಸೆಲ್ ದರ ಹೊಸದಿಲ್ಲಿಯಲ್ಲಿ ಕ್ರಮವಾಗಿ 82.83 ರೂ., 75.69 ರೂ. ಆಗಿತ್ತು. ಮುಂಬೈನಲ್ಲಿ 88.29 ರೂ., ಮತ್ತು 79.35 ರೂ. ಆಗಿತ್ತು. ಅ.17ರ ಬಳಿಕ ಕಚ್ಚಾ ತೈಲದ ಬೆಲೆ ಇಳಿಕೆಯಾಗಲಾರಂಭಿಸಿತು, ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ ಉತ್ತಮವಾಗ ತೊಡಗಿತು. ದೇಶದ ತೈಲೋದ್ಯಮದ ಮೂಲಗಳ ಪ್ರಕಾರ ಇಳಿಕೆ ಪ್ರಮಾಣ ಇನ್ನೂ ಹಲವು ವಾರಗಳ ವರೆಗೆ ಮುಂದುವರಿಯುವ ಸಾಧ್ಯತೆಗಳು ಅಧಿಕ.