Advertisement

ಲೋಹಿತ್‌ನಗರ ಹಿತರಕ್ಷಣಾ ವೇದಿಕೆಯಿಂದ ಮತದಾನ ಬಹಿಷ್ಕಾರಕ್ಕೆ ನಿರ್ಧಾರ

11:05 AM May 10, 2018 | Team Udayavani |

ದೇರೆಬೈಲ್‌ : ಇಲ್ಲಿನ ಲೋಹಿತ್‌ನಗರ ಹಿತ ರಕ್ಷಣಾ ವೇದಿಕೆಯು ಕೆಲವೊಂದು ಬೇಡಿಕೆಗಳನ್ನು ಮುಂದಿಟ್ಟು ಮೇ 12ರಂದು ನಡೆಯುವ ವಿಧಾನ ಸಭಾ ಚುನಾವಣೆಯ ಮತದಾನ ಬಹಿಷ್ಕಾರ ಮಾಡಲು ತೀರ್ಮಾನಿಸಿದೆ.

Advertisement

ಶುದ್ಧ ಕುಡಿಯುಲವ ನೀರು ಒದಗಿಸಬೇಕು, ಉತ್ತಮ ಕಾಂಕ್ರೀಟ್‌ ರಸ್ತೆ ಮತ್ತು ಕಾಂಕ್ರೀಟ್‌ ಚರಂಡಿ ನಿರ್ಮಾಣ ಮಾಡಬೇಕು, ಮಾಲಿನ್ಯರಹಿತ ವಾತಾವರಣದಲ್ಲಿ ಬದುಕಲು ಅವಕಾಶ ಮಾಡಿಕೊಡಬೇಕು ಎನ್ನುವುದು ವೇದಿಕೆಯ ಪ್ರಮುಖ ಬೇಡಿಕೆಗಳಾಗಿವೆ ಎಂದು ಅಧ್ಯಕ್ಷ ಯು.ಬಿ. ವಿಜಯ ಕುಮಾರ್‌ ಅವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಲೋಹಿತ್‌ ನಗರದಲ್ಲಿ ಸುಮಾರು 85 ಮನೆಗಳಿದ್ದು, 300ಕ್ಕೂ ಅಧಿಕ ಮತದಾರರಿದ್ದಾರೆ. ಈ ಪ್ರದೇಶದಲ್ಲಿ ನಳ್ಳಿ ನೀರಿನ ಸಂಪರ್ಕ ಇಲ್ಲ; ನಿವಾಸಿಗಳಿಗೆ ಕೊಳವೆ ಬಾವಿಯ ನೀರನು ಪೂರೈಕೆ ಮಾಡಲಾಗುತ್ತಿದೆ. ಜನರಿಗೆ ಶುದ್ಧ ಕುಡಿಯುವ ನೀರು ಸರಬರಾಜಿಗೆ ವ್ಯವಸ್ಥೆ ಮಾಡುವಂತೆ ಹಲವು ವರ್ಷಗಳಿಂದ ಮನವಿ ಸಲ್ಲಿಸುತ್ತಾ ಬಂದರೂ ಇದುವರೆಗೆ ಸಂಬಂಧಪಟ್ಟವರು ಯಾವುದೇ ಕ್ರಮ ಜರಗಿಸಿಲ್ಲ . ಚುನಾವಣೆಯ ಸಮಯದಲ್ಲಿ ಮನೆ ಮನೆಗೆ ಭೇಟಿ ನೀಡುವ ರಾಜಕಾರಣಿಗಳು ಚುನಾವಣೆ ಮುಗಿದ ಬಳಿಕ ಮುಂದಿನ ಚುನಾವಣೆ ತನಕ ಕಾಣ ಸಿಗುವುದಿಲ್ಲ. ಹಾಗಾಗಿ ಮತದಾನ ಬಹಿಷ್ಕರಿಸಲು ತೀರ್ಮಾನಿಸಲಾಗಿದೆ ಎಂದು ವಿವರಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next