ವಿಟ್ಲ: ಶಿಕ್ಷಣ ಸಂಸ್ಥೆಯನ್ನು ನೋಡಿ ಆ ಊರಿನ ಪೂರ್ತಿ ಚಿತ್ರಣವನ್ನು ಪಡೆದುಕೊಳ್ಳಬಹುದು. ಕೆಲ ಆವಶ್ಯಕತೆಗಳನ್ನು ಸರಕಾರದಿಂದ ಪೂರೈಸಲಾಗದೇ ಇದ್ದಾಗ ಪೋಷಕರು ಸಹಕರಿಸಬೇಕು. ಆಗ ಶಾಲೆಯ ಭವಿಷ್ಯ ಉತ್ತಮವಾಗುತ್ತದೆ. ಪ್ರತಿಯೊಬ್ಬರೂ ಅಕ್ಷರ ಜ್ಞಾನಿಯಾದಾಗ ಶೋಷಣೆ ಮುಕ್ತ ಸಮಾಜ ನಿರ್ಮಾಣವಾಗುತ್ತದೆ. ಬಿಸಿಯೂಟ ಸರ್ಕಾರಿ ಹಾಗೂ ಅನುದಾನಿತ ಶಾಲೆಗೂ ಲಭ್ಯವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.
ಅವರು ಶನಿವಾರ ಬೊಳಂತಿಮೊಗರು ಪ್ರೌಢ ಶಾಲೆಯ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಸ್ಮಾರ್ಟ್ ಕ್ಲಾಸ್ ಉದ್ಘಾಟಿಸಿ ಮಾತನಾಡಿದರು. ಶಾಲಾ ಮಕ್ಕಳು ಅಭಿನಯದ ಕಿರುಚಿತ್ರ ಬಿಡುಗಡೆ ಮಾಡಿದ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಮಕ್ಕಳ ಸಂಖ್ಯೆ ಕಡಿಮೆಯಾಗುವ ಕಾರಣ ಜಿಲ್ಲೆಯಲ್ಲಿ 14 ಸರ್ಕಾರಿ ಪ್ರೌಢ ಶಾಲೆಗಳು ಮುಚ್ಚುವ ಹಂತಕ್ಕೆ ಬಂದಿದೆ. ಶಾಲೆ ಮುಚ್ಚುವುದನ್ನು ತಡೆಯಲು ಪೋಷಕರಿಂದ ಮಾತ್ರ ಸಾಧ್ಯ. ಸರ್ಕಾರಿ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳೂ ಅದ್ಭುತ ಸಾಧನೆ ಮಾಡಬಲ್ಲರು. ಸರ್ಕಾರಿ ಶಾಲೆಗಳು ಕಲಿಸುವ ಜ್ಞಾನ ಮಂದಿರಗಳಾದರೆ, ಖಾಸಗಿ ಶಾಲೆಗಳು ಕಠಿನ ಶಿಕ್ಷೆಯನ್ನು ನೀಡಿ ಓದಿಸುವ ಶಿಕ್ಷಣ ಸಂಸ್ಥೆಗಳು ಎಂದು ಅಭಿಪ್ರಾಯಪಟ್ಟರು.
ಬಯಲು ರಂಗ ಮಂದಿರಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ, ಕಂಬಳಬೆಟ್ಟು- ಬೊಳಂತಿಮೊಗರು ಸಂಪರ್ಕ ರಸ್ತೆ ನಿರ್ಮಾಣಕ್ಕೆ ಅನುದಾನ ಕೊಡುವಂತೆ ನಬಾರ್ಡ್‌ಗೆ 1 ಕೋಟಿ ರೂ. ಗಳ ಪ್ರಸ್ತಾವನೆ ಸಲ್ಲಿಸಲಾಗಿದೆ. ಮಕ್ಕಳಿಗೆ ಕೊರತೆಯಾಗದೇ ಇದ್ದಲ್ಲಿ, ಆಸುಪಾಸಿನ ಮಕ್ಕಳು ಇದನ್ನೇ ಬಯಸಿದರೆ, ಮುಂದೆ ಪಿಯುಸಿ ಕಾಲೇಜ್ ಸ್ಥಾಪನೆಗೆ ಪ್ರಯತ್ನಿಸಲಾಗುವುದು. ಮಕ್ಕಳಿಗೆ ಅತೀ ಅಗತ್ಯವಾಗಿ ಬೇಕಾದ ಕುಡಿಯುವ ನೀರಿನ ವ್ಯವಸ್ಥೆಗೆ ಬೇಕಾದ ಅನುದಾನ ಬಿಡುಗಡೆ ಮಾಡಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ವಿಟ್ಲ ಪ.ಪಂ. ಅಧ್ಯಕ್ಷ ಅರುಣ್ ಎಂ. ವಿಟ್ಲ ಅಧ್ಯಕ್ಷತೆ ವಹಿಸಿದ್ದರು. ವಿಟ್ಲದ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ವಿಟ್ಲ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಜತ್ತಪ್ಪ ಗೌಡ ನಾಯ್ತೊಟ್ಟು, ಪ್ರೌಢ ಶಾಲಾ ನಿಕಟಪೂರ್ವ ಕಾರ್ಯಾಧ್ಯಕ್ಷ ಜತ್ತಪ್ಪ ಪೂಜಾರಿ, ಪ್ರೌಢ ಶಾಲಾ ಎಸ್‌ಡಿಎಂಸಿ ಸದಸ್ಯ ಜಗದೀಶ್ಚಂದ್ರ ಗೌಡ ನಾಯ್ತೊಟ್ಟು, ರಾಜ್ಯ ಉತ್ತಮ ಶಿಕ್ಷಕ ವಿಜೇತ ಸಂಜೀವ ಎಚ್., ಶಾಲೆಯಲ್ಲಿ ಸೇವೆ ಸಲ್ಲಿಸಿದ ನೋಣಯ್ಯ ನಾಯ್ಕ, ಸುಧಾಕರ ಶೆಟ್ಟಿ, ಮರುಗೋಜಪ್ಪ ಎಸ್., ಹೇಮಲತಾ ಜೆ.ಎಂ., ಸಂತೋಷ್ ಕುಮಾರ್ ಶೆಟ್ಟಿ, ಆರತಿ, ಹರೀಶ್, ರೂಪಾ ಮುತ್ತಪ್ಪ ಗೌಡ, ಗಣೇಶ್ ಕಲ್ಲಜಾಲು, ಸಿರಾಜುದ್ದೀನ್ ಕೊಳಂಬೆ ಅವರನ್ನು ಮತ್ತು ಪ್ರೌಢ ಶಾಲೆ, ಪ್ರಾಥಮಿಕ ಶಾಲೆ ಶಿಕ್ಷಕರನ್ನು ಸಮ್ಮಾನಿಸಲಾಯಿತು. ಪಠ್ಯೇತರ ಚಟುವಟಿಕೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ವಿಟ್ಲ ಪ.ಪಂ. ವಿಪಕ್ಷ ನಾಯಕ ಅಶೋಕ್ ಕುಮಾರ್ ಶೆಟ್ಟಿ ವಿದ್ಯಾರ್ಥಿಗಳಿಗೆ ಬಟ್ಟಲು ಹಸ್ತಾಂತರಿಸಿದರು. ಬಂಟ್ವಾಳ ಲಯನ್ಸ್ ಕ್ಲಬ್ ಅಧ್ಯಕ್ಷ ಜಗದೀಶ್ ಎಡಪಡಿತ್ತಾಯ ಅವರು ಜೆರಾಕ್ಸ್ ಮೆಷಿನ್ ಹಸ್ತಾಂತರಿಸಿದರು.
ವಿಟ್ಲ ಪ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ರಾಮದಾಸ್ ಶೆಣೈ , ಪ್ರೌಢ ಶಾಲಾ ಎಸ್.ಡಿ.ಎಂ.ಸಿ ಕಾರ್ಯಾಧ್ಯಕ್ಷ ಅಬ್ದುಲ್ ರಹಿಮಾನ್ ನೆಲ್ಲಿಗುಡ್ಡೆ, ಪ.ಪಂ.ಸದಸ್ಯರಾದ ಇಂದಿರಾ ಅಡ್ಡಾಳಿ, ಲತಾ ಅಶೋಕ್ ಪೂಜಾರಿ, ದಮಯಂತಿ, ಬಂಟ್ವಾಳ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಉಮಾನಾಥ ರೈ, ಜಿಲ್ಲಾ ಶಾಮಿಯಾನ ಮಾಲಕರ ಸಂಘದ ಅಧ್ಯಕ್ಷ ಬಾಬು ಕೆ.ವಿ., ಬ್ಯುಸಿನೆಸ್ಸ್ ರಿಲಯನ್ಸ್ ಇಂಡಸ್ಟ್ರಿಸ್ ಲಿಮಿಟೆಡ್ ಹಿರಿಯ ಪ್ರಬಂಧಕ ಚೈತನ್ಯ ಕುಮಾರ್ ನಾಯ್ತೊಟ್ಟು, ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷೆ ವಿನ್ನಿ ಮಸ್ಕರೇನ್ಹಸ್, ವಿಟ್ಲ ಜೆಸಿಐ ಅಧ್ಯಕ್ಷ ಸೋಮಶೇಖರ್, ದಶಮಾನೋತ್ಸವ ಸಮಿತಿ ಅಧ್ಯಕ್ಷ ಜಗದೀಶ್ಚಂದ್ರ ಗೌಡ ನಾಯೊ¤ಟ್ಟು, ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ ಸಂಜೀವ ಎಚ್, ಉದ್ಯಮಿ ಸದಾಶಿವ ಆಚಾರ್ಯ, ವಿಟ್ಲ ಗ್ರಾ.ಪಂ.ಮಾಜಿ ಅಧ್ಯಕ್ಷ ರಮಾನಾಥ ವಿಟ್ಲ, ಮಾಜಿ ಅಧ್ಯಕ್ಷೆ ಭವಾನಿ ರೈ ಕೊಲ್ಯ, ಮಾಜಿ ಉಪಾಧ್ಯಕ್ಷ ಅಬ್ದುಲ್‌ಖಾದ್ರಿ, ಪ್ರಾಥಮಿಕ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ವಿಶ್ವನಾಥ ಗೌಡ ನಾಯ್ತೊಟ್ಟು, ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ನಾರಾಯಣ ಗೌಡ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಫ್ವಾನ್ ಅಹಮ್ಮದ್, ರೋಹಿತಾಶ್ವ, ಪಿ.ಡಿ. ಶೆಟ್ಟಿ, ವೀರಪ್ಪ ಗೌಡ ಮಾಮೇಶ್ವರ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ವನಿತಾ ಮಾಮೇಶ್ವರ, ಲೋಹಿತ್ ಮಾಡ್ತೇಲು, ಉರ್ದು ಶಾಲಾ ಮುಖ್ಯ ಶಿಕ್ಷಕ ಚಂದ್ರಶೇಖರ್ ಉಪಸ್ಥಿತರಿದ್ದರು. ಪ್ರೌಢ ಶಾಲಾ ಮುಖ್ಯ ಶಿಕ್ಷಕ ಅನಿಲ್ ಕುಮಾರ್ ವಡಗೇರಿ ಸ್ವಾಗತಿಸಿ, ಶಿಕ್ಷಕ ಸತೀಶ್ ವರದಿ ಮಂಡಿಸಿದರು. ಪ್ರವೀಣ್ ಹಾಗೂ ರಾಮಣ್ಣ ಗೌಡ ನಿರೂಪಿಸಿದರು. ಪುರಂದರ ಅಂಚನ್, ಶಿಕ್ಷಕಿ ಉರ್ವಶಿ ವಿವಿಧ ಜವಾಬ್ದಾರಿ ನಿರ್ವಹಿಸಿದರು.