Advertisement

ನೀರಿನ ಸಂಪ್‌ಗೆ ಬಿದ್ದು ಮಗು ಸಾವು

11:40 AM Jul 10, 2018 | Team Udayavani |

ಬೆಂಗಳೂರು: ಎರಡೂವರೆ ವರ್ಷದ ಮಗು ನಿರ್ಮಾಣ ಹಂತದ ಕಟ್ಟಡದ ನೀರಿನ ಸಂಪ್‌ಗೆ ಬಿದ್ದು ಮೃತಪಟ್ಟ ಘಟನೆ ಸಂಪಿಗೆಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಯಾಕೂಬ್‌ ಪಾಷಾ ಎಂಬುವರ ಪುತ್ರ ಮೊಹಮ್ಮದ್‌ ಅರ್ಷಾನ್‌ ಮೃತ ಮಗು.

Advertisement

ಘಟನೆ ಸಂಬಂಧ ಕಟ್ಟಡ ಮಾಲೀಕ ಮಣಿ ಎಂಬುವರ ವಿರುದ್ಧ ನಿರ್ಲಕ್ಷ್ಯ ಆರೋಪದಡಿ ಪ್ರಕರಣ ದಾಖಲಾಗಿದೆ. ಯಾಕೂಬ್‌ ಪಾಷಾ ಹಣ್ಣಿನ ವ್ಯಾಪಾರಿಯಾಗಿದ್ದು, ಮಂಜುನಾಥ ನಗರದ ನಾಗವಾರದಲ್ಲಿ ನೆಲೆಸಿದ್ದಾರೆ. ಸೋಮವಾರ ಮಧ್ಯಾಹ್ನ ಮನೆ ಬಳಿ ಆಟವಾಡುತ್ತಿದ್ದ ಅರ್ಷಾನ್‌, ನಿರ್ಮಾಣ ಹಂತದ ಕಟ್ಟಡ ಬಳಿ ಹೋಗಿದ್ದು,

ಮುಚ್ಚಳ ತೆರೆದಿದ್ದ 8 ಅಡಿ ಆಳದ ನೀರಿನ ಸಂಪ್‌ಗೆ ಬಿದ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನು ಗಮನಿಸಿದ ಅರ್ಷಾದ್‌ ತಾಯಿ ರಕ್ಷಣೆಗಾಗಿ ಸ್ಥಳೀಯರನ್ನು ಕೂಗಿದ್ದಾರೆ. ಸ್ಥಳಕ್ಕೆ ಧಾವಿಸಿದ ಯಾಕೂಬ್‌, ಸಂಪ್‌ನಿಂದ ಮಗುವನ್ನು ಮೇಲೆತ್ತಿ ಆಸ್ಪತ್ರೆಗೆ ಕರೆದೊಯ್ದಿದ್ದು, ಆ ವೇಳೆಗಾಗಲೇ ಮಗು ಮೃತಪಟ್ಟಿತ್ತು ಎಂದು ಪೊಲೀಸರು ತಿಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next