Advertisement

ಮೇಕೆದಾಟು ವಸ್ತುಸ್ಥಿತಿ ಮಾಹಿತಿ ಪಡೆದ ಡಿಸಿಎಂ

10:49 PM Jul 03, 2023 | Team Udayavani |

ಬೆಂಗಳೂರು: ರಾಜ್ಯದ ಮಹತ್ವಾಕಾಂಕ್ಷಿ ಮೇಕೆದಾಟು ಯೋಜನೆ ಕುರಿತು ಸುದೀರ್ಘ‌ ಸಭೆ ನಡೆಸಿದ ಜಲಸಂಪನ್ಮೂಲ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಯೋಜನೆಯ ಈಗಿನ ಒಟ್ಟಾರೆ ವಸ್ತುಸ್ಥಿತಿಯ ಬಗ್ಗೆ ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ.

Advertisement

ಮೇಕೆದಾಟು ಸಮತೋಲನ ಜಲಾಶಯ ಮತ್ತು ಕುಡಿಯುವ ನೀರು ಪೂರೈಕೆ ಯೋಜನೆ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ವ್ಯಾಪ್ತಿಯ ವಿಧಾನಸಭೆ ಕ್ಷೇತ್ರಗಳಲ್ಲಿ ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ ಕುರಿತು ಶಾಸಕರು ಮತ್ತು ಹಿರಿಯ ಅಧಿಕಾರಿಗಳ ಸಭೆಯನ್ನು ವಿಕಾಸಸೌಧದಲ್ಲಿ ಸೋಮವಾರ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ನಡೆಸಿದರು.

ಮುಖ್ಯವಾಗಿ ಮೇಕೆದಾಟು ಯೋಜನೆಯ ಈಗಿನ ಒಟ್ಟಾರೆ ಸ್ಥಿತಿಗತಿ ಏನು, ಯೋಜನೆ ಎಲ್ಲಿಗೆ ತಲುಪಿದೆ, ಕೇಂದ್ರ ಸರಕಾರದ ಹಂತದಲ್ಲಿ ಯೋಜನೆಯ ಬೆಳವಣಿಗೆ ಏನಾಗಿದೆ, ತಮಿಳುನಾಡು ಸರಕಾರ ಎತ್ತಿರುವ ಆಕ್ಷೇಪ ಮತ್ತು ಸುಪ್ರೀಂಕೋರ್ಟ್‌ ಮೆಟ್ಟಿಲೇರುವ ವಿಚಾರ ಸದ್ಯ ಏನಾಗಿದೆ, ಕೇಂದ್ರ ಸರಕಾರ ಮತ್ತು ತಮಿಳುನಾಡು ಸರಕಾರದ ಆಕ್ಷೇಪಗಳಿಗೆ ರಾಜ್ಯ ಸರಕಾರ ಕೊಟ್ಟಿರುವ ಉತ್ತರವೇನು, ರಾಜ್ಯ ಸರಕಾರ ಯೋಜನೆ ಸಂಬಂಧ ಈವರೆಗೆ ಕೈಗೊಂಡಿರುವ ರಾಜಕೀಯ -ತಾಂತ್ರಿಕ ಹಾಗೂ ಕಾನೂನು ಕ್ರಮ ಗಳೇನು ಮುಂತಾದವುಗಳ ಬಗ್ಗೆ ಸಭೆಯಲ್ಲಿ ಮಾಹಿತಿ ಪಡೆದುಕೊಳ್ಳ ಲಾಗಿದೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next