Advertisement
“ಕಳೆದ ಆರು-ಏಳು ವರ್ಷಗಳಿಂದ ಸಾಕಷ್ಟು ಕೆಲಸ ಮತ್ತು ಒತ್ತಡದಿಂದ ಇದ್ದೆ. ಈಗ ಇದನ್ನು ಸರಿದೂಗಿಸುವ ಸಮಯ ಬಂದಿದೆ. ನನ್ನ ಟಿ20 ಕ್ರಿಕೆಟ್ ನಾಯಕತ್ವ ಕೊನೆಗೊಂಡಿದೆ. ನಮ್ಮ ಆಟಗಾರರು ಅದ್ಭುತ ಪ್ರದರ್ಶನ ತೋರಿದ್ದಾರೆ. ಹೌದು, ನಾವು ಇಲ್ಲಿ ಟ್ರೋಫಿ ಗೆದ್ದಿಲ್ಲ ನಿಜ, ಆದರೆ ಅತ್ಯುತ್ತಮ ಕ್ರಿಕೆಟ್ ಆಡಿದ್ದೇವೆ’ ಎಂದು ಕೊಹ್ಲಿ ಹೇಳಿದರು.
“ನಮ್ಮ ತಂಡದಲ್ಲಿರುವ ಆಟಗಾರರು ನನ್ನ ಕೆಲಸನ್ನು ಬಹಳ ಸರಳಗೊಳಿಸಿದ್ದಾರೆ. ಕೋಚ್ ರವಿಶಾಸ್ತ್ರಿ ಮತ್ತು ಸಹಾಯಕ ಸಿಬಂದಿಗೆ ನನ್ನ ಧನ್ಯವಾದಗಳು. ವರ್ಷದಿಂದ ವರ್ಷಕ್ಕೆ ಅವರು ಸಾಕಷ್ಟು ಶ್ರಮಿಸಿದ್ದಾರೆ. ಆಟಗಾರರಲ್ಲಿ ಉತ್ತಮ ಸಂಬಂಧ, ಬಾಂಧವ್ಯ ಬೆಳೆಸಿದ್ದಾರೆ’ ಎಂದರು. ಇದನ್ನೂ ಓದಿ:ಜಾಗತಿಕ ಷೇರುಮಾರುಕಟ್ಟೆ ಎಫೆಕ್ಟ್; ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 112 ಅಂಕ ಇಳಿಕೆ
Related Articles
ಅಂತಿಮ ಪಂದ್ಯದಲ್ಲಿ ಬ್ಯಾಟಿಂಗ್ ಅವಕಾಶವಿದ್ದರೂ ಕ್ರೀಸ್‌ಗೆ ಆಗಮಿಸದ ಬಗ್ಗೆ ಉತ್ತರಿಸಿದ ಕೊಹ್ಲಿ, “ಉತ್ಸಾಹಿ ಹಾಗೂ ಯುವ ಆಟಗಾರ ಸೂರ್ಯಕುಮಾರ್ ಯಾದವ್‌ಗೆ ಈ ಟೂರ್ನಿಯಲ್ಲಿ ಬ್ಯಾಟಿಂಗ್ ಮಾಡಲು ಹೆಚ್ಚು ಅವಕಾಶ ಸಿಗಲಿಲ್ಲ. ಯಾವುದೇ ಒಬ್ಬ ಆಟಗಾರ ಅತ್ಯುತ್ತಮ ಪ್ರದರ್ಶನದೊಂದಿಗೆ ಪಂದ್ಯ ಪೂರ್ಣಗೊಳಿಸಬೇಕೆಂದು ಬಯಸುತ್ತಾನೆ. ಹೀಗಾಗಿ ಸೂರ್ಯಕುಮಾರ್‌ಗೆ ಅವಕಾಶ ನೀಡುವುದು ಉತ್ತಮ ಎಂದು ನನಗೆ ಅನ್ನಿಸಿತು’ ಎಂದರು.
Advertisement