ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ, ಕರ್ನಾಟಕ ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಮತ್ತು ಎಂಎಸ್‌ಐಎಲ್‌ನ ವಿವಿಧ ಹುದ್ದೆಗಳಿಗೆ ನೇಮಕಾತಿಗೆ ಪರೀಕ್ಷಾ ದಿನಾಂಕವನ್ನು ಪ್ರಕಟಿಸಿದೆ.
ಅಕ್ಟೋಬರ್ 28 ಮತ್ತು ಅಕ್ಟೋಬರ್ 29ರಂದು ಪ್ರಥಮ ಮತ್ತು ದ್ವಿತೀಯ ಪೇಪರ್‌ಗಳ ಪರೀಕ್ಷೆ ನಡೆಯಲಿದೆ.
ವಿದ್ಯುನ್ಮಾನ ಅಭಿವೃದ್ಧಿ ನಿಗಮ ಆಪ್ತ ಕಾರ್ಯದರ್ಶಿ, ಹಿರಿಯ ಸಹಾಯಕರು (ತಾಂತ್ರಿಕ), ಹಿರಿಯ ಸಹಾಯಕರು (ತಾಂತ್ರಿಕೇತರ), ಸಹಾಯಕರು, (ತಾಂತ್ರಿಕ), ಸಹಾಯಕರು (ತಾಂತ್ರಿಕೇತರರು) ಹುದ್ದೆಗಳ ಪ್ರಥಮ ಪತ್ರಿಕೆಯ ಪರೀಕ್ಷೆ ಅ. 28ರಂದು ಮಧ್ಯಾಹ್ನ 2.30ರಿಂದ 4.30 ಮತ್ತು ದ್ವಿತೀಯ ಪತ್ರಿಕೆಯ ಪರೀಕ್ಷೆ ಬೆಳಗ್ಗೆ 10.30ರಿಂದ ಮಧ್ಯಾಹ್ನ 12.30ರ ವರೆಗೆ ನಡೆಯಲಿದೆ.
ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಹಿರಿಯ ಸಹಾಯಕರ ಹುದ್ದೆಗಳ ಪ್ರಥಮ ಪತ್ರಿಕೆಯ ಪರೀಕ್ಷೆ ಅ. 28ರಂದು ಮಧ್ಯಾಹ್ನ 2.30ರಿಂದ 4.30 ಮತ್ತು ದ್ವಿತೀಯ ಪತ್ರಿಕೆಯ ಪರೀಕ್ಷೆ ಬೆಳಗ್ಗೆ 10.30 ರಿಂದ ಮಧ್ಯಾಹ್ನ 12.30ರವರೆಗೆ ನಡೆಯಲಿದೆ. ಕಿರಿಯ ಸಹಾಯಕರ ಹುದ್ದೆಗಾಗಿನ ಪರೀಕ್ಷೆಯು ಅಕ್ಟೋಬರ್ 29ರ ಬೆಳಗ್ಗೆ 10.30 ರಿಂದ ಮಧ್ಯಾಹ್ನ 12.30ರವರೆಗೆ ಪ್ರಥಮ ಪತ್ರಿಕೆ, ಮಧ್ಯಾಹ್ನ 2.30 ರಿಂದ ಸಂಜೆ 4.30ರವರೆಗೆ ದ್ವಿತೀಯ ಪತ್ರಿಕೆ ಪರೀಕ್ಷೆ ನಡೆಯಲಿದೆ.
ಇದೇ ರೀತಿ ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಪ್ರಥಮ ದರ್ಜೆ ಸಹಾಯಕರ ಹುದ್ದೆಯ ಪರೀಕ್ಷೆಯ ಪ್ರಥಮ ಪತ್ರಿಕೆ ಮಧ್ಯಾಹ್ನ 2.30 ರಿಂದ ಸಂಜೆ 4. 30, ದ್ವಿತೀಯ ಪೇಪರ್ ಬೆಳಗ್ಗೆ 10.30 ರಿಂದ ಸಂಜೆ 12.30ರವರೆಗೆ ನಡೆಯಲಿದೆ. ಆಪ್ತ ಸಹಾಯಕರ ಹುದ್ದೆಯ ಪ್ರಥಮ ಪತ್ರಿಕೆಯ ಪರೀಕ್ಷೆ ಬೆಳಗ್ಗೆ 10.30 ರಿಂದ ಮಧ್ಯಾಹ್ನ 12.30ರವರೆಗೆ ಇರಲಿದೆ. ದ್ವಿತೀಯ ಪತ್ರಿಕೆಯ ಪರೀಕ್ಷೆಯ ದಿನಾಂಕ ಪ್ರಕಟಿಸಲಾಗಿಲ್ಲ. ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳ ಪರೀಕ್ಷೆ ಅಕ್ಟೋಬರ್ 29 ರಂದು ನಡೆಯಲಿದ್ದು ಮೊದಲ ಪತ್ರಿಕೆ ಬೆಳಗ್ಗೆ 10.30 ರಿಂದ 12.30ರವರೆಗೆ ಹಾಗೆಯೇ ಎರಡನೇ ಪತ್ರಿಕೆಯ ಪರೀಕ್ಷೆ ಬೆಳಗ್ಗೆ 2.30 ರಿಂದ ಸಂಜೆ 4.30ರವರೆಗೆ ನಡೆಯಲಿದೆ.
ಮೈಸೂರು ಸೇಲ್ಸ್‌ನ ಸೇಲ್ಸ್ ಮೇಲ್ವಿಚಾರಕ ಹುದ್ದೆಯ ಪರೀಕ್ಷೆ ಅ. 28 ರಂದು ನಡೆಯಲಿದ್ದು ಮಧ್ಯಾಹ್ನ 2.30 ರಿಂದ ಸಂಜೆ 4.30ರವರೆಗೆ ದ್ವಿತೀಯ ಪತ್ರಿಕೆ, ಬೆಳಗ್ಗೆ 10.30 ರಿಂದ ಮಧ್ಯಾಹ್ನ 12.30ರವರೆಗೆ ಪ್ರಥಮ ಪತ್ರಿಕೆಯ ಪರೀಕ್ಷೆ ನಡೆಯಲಿದೆ.
ಸೇಲ್ಸ್ ಎಂಜಿನಿಯರ್ (ಮೆಕ್ಯಾನಿಕಲ್, ಇಲೆಕ್ಟ್ರೀಕಲ್, ಸಿವಿಲ್, ಇ ಮತ್ತು ಸಿ) ಹುದ್ದೆಯ ಪ್ರಥಮ ಪತ್ರಿಕೆಯ ಪರೀಕ್ಷೆ ಅ. 28ರ ಮಧ್ಯಾಹ್ನ 2.30 ರಿಂದ ಸಂಜೆ 4.30, ಅ. 29 ರಂದು ಮಧ್ಯಾಹ್ನ 2.30 ರಿಂದ ಸಂಜೆ 4.30ರ ತನಕ ದ್ವಿತೀಯ ಪತ್ರಿಕೆಯ ಪರೀಕ್ಷೆ ನಡೆಯಲಿದೆ.
ಲೆಕ್ಕ ಗುಮಾಸ್ತರು ಮತ್ತು ಗುಮಾಸ್ತರ ಹುದ್ದೆಯ ಪ್ರಥಮ ಪತ್ರಿಕೆಯ ಪರೀಕ್ಷೆ ಅ. 28ರ ಮಧ್ಯಾಹ್ನ 2.30 ರಿಂದ ಸಂಜೆ 4.30ರ ತನಕ ಹಾಗೆಯೇ ಎರಡನೇ ಪತ್ರಿಕೆಯ ಪರೀಕ್ಷೆ ಬೆಳಗ್ಗೆ 10.30 ರಿಂದ ಮಧ್ಯಾಹ್ನ 12.30ರ ತನಕ ನಡೆಯಲಿದೆ. ಇನ್ನು ಕೆಲ ಹುದ್ದೆಗಳ ಪರೀಕ್ಷಾ ದಿನಾಂಕ ಇನ್ನಷ್ಟೇ ಪ್ರಕಟಗೊಳ್ಳಬೇಕಿದೆ.