Advertisement

ಹೆಣ‍್ಣು ದೇಶದ ಸಂಸ್ಕೃತಿ ಜೀವಾಳ ಇದ್ದಂತೆ: ನ್ಯಾ|ಗೌಡ

02:55 PM Jan 25, 2022 | Team Udayavani |

ರಾಯಚೂರು: ಹೆಣ್ಣು ಮಕ್ಕಳು ಭಾರತೀಯ ಸಂಸ್ಕೃತಿಯ ಜೀವಾಳವಿದ್ದಂತೆ. ಒಬ್ಬ ತಾಯಿ ಇಡೀ ಕುಟುಂಬದ ಸದಸ್ಯರಿಗೆ ಸಂಸ್ಕಾರ, ಮಾನವೀಯ ಮೌಲ್ಯಗಳನ್ನು ಕಲಿಸುವಲ್ಲಿ ಮಹತ್ವದ ಪಾತ್ರ ನಿಭಾಯಿಸಬಲ್ಲಳು ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಗೌಡ ತಿಳಿಸಿದರು.

Advertisement

ಸ್ವಾತಂತ್ಯೋತ್ಸವದ ಅಮೃತ ಮಹೋತ್ಸವದಡಿ ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕವು ಸ್ವಾಮಿ ವಿವೇಕಾನಂದರ 159ನೇ ಜಯಂತಿ ಪ್ರಯುಕ್ತ ವಿವಿಧ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಯುವ ಸಪ್ತಾಹ ಕಾರ್ಯಕ್ರಮದ ಸಮಾರೋಪ ಉದ್ಘಾಟಿಸಿ ಅವರು ಮಾತನಾಡಿದರು.

ಜನ್ಮವಿತ್ತ ತಂದೆ-ತಾಯಿಯೇ ದೇವರ ನಿಜ ಸ್ವರೂಪ. ಅವರನ್ನು ಗೌರವಿಸುವುದು ಹಾಗೂ ಜೀವನದುದ್ದಕ್ಕೂ ಸುಖದಿಂದ ಇರುವಂತೆ ಮಾಡುವುದೇ ನಿಜಧರ್ಮ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಂಡು ಬದುಕಿದಾಗಲೇ ವ್ಯಕ್ತಿಯ ಜೀವನಕ್ಕೆ ಅರ್ಥ ಮತ್ತು ಸಾರ್ಥಕತೆ ಇರುತ್ತದೆ ಎಂದರು.

ಹಿರಿಯ ಸಿವಿಲ್‌ ನ್ಯಾಯಾ ಧೀಶರಾದ ಮಹಾಜನ್‌ ಆರ್‌.ಎ. ಮಾತನಾಡಿ, ಕಾನೂನುಗಳು ವ್ಯಕ್ತಿಗೆ ಆಗುವ ಅನ್ಯಾಯಗಳನ್ನು ತಡೆಗಟ್ಟಲು ಅಗತ್ಯವಾಗಿವೆ. ಮಾನವನ ಅನಾಗರಿಕ ವರ್ತನೆ ಹಾಗೂ ನೈತಿಕ ಮೌಲ್ಯಗಳ ಅಧಃಪತನದಿಂದಾಗಿ ಕಾನೂನುಗಳು ಹೆಚ್ಚಿನ ಸಂಖ್ಯೆಯಲ್ಲಿ ರೂಪುಗೊಳ್ಳುತ್ತಿವೆ. ಹಾಗಾಗಿ ಎಲ್ಲರೂ ನೈತಿಕ ಹಾಗೂ ಸಾಮಾಜಿಕ ಮೌಲ್ಯಗಳನ್ನು ರೂಢಿಸಿಕೊಂಡು ಬದುಕಬೇಕು. ವ್ಯಕ್ತಿಯ ಉನ್ನತಿಯಲ್ಲಿ ಕೌಶಲ್ಯಗಳೂ ಸಹ ಮೌಲ್ಯಗಳಷ್ಟೇ ಪ್ರಮುಖ ಪಾತ್ರವನ್ನು ವಹಿಸುತ್ತವೆ ಎಂದರು.

ಕಾಲೇಜಿನ ಪ್ರಾಚಾರ್ಯ ಡಾ| ಪ್ರಸನ್ನಕುಮಾರ ಮಾತನಾಡಿ, ಯುವ ಜನರು ದೇಶದ ಸಂಪನ್ಮೂಲವಾಗಿ ಪರಿವರ್ತನೆ ಆದಾಗಲೇ ಸಮಾಜ ಮತ್ತು ರಾಷ್ಟ್ರದ ಏಳ್ಗೆ ಸಾಧ್ಯ. ಸ್ವಾಮಿ ವಿವೇಕಾನಂದರ ತತ್ವಾದರ್ಶಗಳು ಯುವಶಕ್ತಿಗೆ ದಾರಿದೀಪವಾಗಿದ್ದು, ಉತ್ತಮ ಭವಿಶ್ಯಕ್ಕಾಗಿ ಅವುಗಳನ್ನು ಅನುಸರಿಸುವಂತೆ ಸಲಹೆ ನೀಡಿದರು. ಡಾ| ಸಿ.ಕೆ. ಜ್ಯೋತಿ, ಪ್ರೊ| ಉಮಾದೇವಿ, ಡಾ| ಮಲ್ಲಯ್ಯ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next