Advertisement
ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಿನೋದಾ ಡಿ. ಶೆಟ್ಟಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ತುಳುನಾಡಿನ ಸಂಸ್ಕೃತಿ, ಅಚಾರ, ವಿಚಾರಗಳನ್ನು ಮಹಾ ನಗರದಲ್ಲಿರುವ ಯುವ ಪೀಳಿಗೆಗೆ ತಿಳಿ ಸುವ ಪ್ರಯತ್ನವನ್ನು ಮಾಡಬೇಕಾಗಿದೆ. ಅದರೊಂದಿಗೆ ಕೆಲವೊಂದು ಸಂಘ, ಸಂಸ್ಥೆ ಆಯೋಜಿಸಿದ ಅಟಿಡೊಂಜಿದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮದ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸಬೇಕು.
Related Articles
Advertisement
ಮುಖ್ಯ ಅತಿಥಿ ರವಿ ಸನಿಲ್ ಮತಾನಾಡಿ, ನಾನು ಚಿಕ್ಕಂದಿನಿಂದಲೇ ತುಳುನಾಡಿನ ಅಚಾರ ವಿಚಾರಗಳನ್ನು ತಾಯ್ನಾಡಿನಲ್ಲೆ ತಿಳಿದು ಕೊಂಡಿದ್ದೇನೆ. ಹಿಂದಿನ ಕಾಲದಲ್ಲಿ ಕಷ್ಟ ಇದ್ದರೂ ಪ್ರತಿಯೊಬ್ಬರೂ ನೆಮ್ಮದಿಯಿಂದ ಬದುಕುತ್ತಿದ್ದರು. ಇಂದು ಎಲ್ಲ ಸೌಕರ್ಯಗಳಿದ್ದರೂ ನೆಮ್ಮದಿ ಮಾಯಾವಾಗಿದೆ. ಮಾಯಾ ನಗರಿಯಲ್ಲಿ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುತ್ತಿರುವ ಮಹಿಳೆಯರಿಗೆ ವಂದನೆಗಳು ಎಂದರು.
ಸಂಸ್ಥೆಯ ಕಾರ್ಯದರ್ಶಿ ಲಕ್ಷ್ಮಣ್ ಮೂಲ್ಯ ಮತಾನಾಡಿ, ಮಹಾಮಾರಿಯಿಂದಾಗಿ ಹೆಚ್ಚಿನ ಸಂಖ್ಯೆಯ ಮಹಿಳೆಯರನ್ನು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನೀಡಲಿಲ್ಲ. ಮುಂದಿನ ದಿನಗಳಲ್ಲಿ ಮಹಾಮಾರಿ ದೂರವಾದರೆ ಎಲ್ಲರಿಗೂ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವ ಕಾಶ ನಿಡೋಣ. ಅಟಿ ತಿಂಗಳಲ್ಲಿ ಮಳೆಯ ಅನಂದವೇ ಬೇರೆ ಆ ದಿನಗಳಲ್ಲಿ ಎಷ್ಟು ಕಷ್ಟವಿದ್ದರೂ ಒಬ್ಬರಿಗೊಬ್ಬರು ಸಹಾಯ, ಸಹಕಾರ ನೀಡುತ್ತಿದ್ದರು ಎಂದರು.
ಸಂಘದ ಸಲಹೆಗಾರರಾದ ದೇವದಾಸ್ ಕುಲಾಲ್ ಮತನಾಡಿ, ತುಳುನಾಡಿನ ಅಚಾರ, ವಿಚಾರ ವಿಶ್ವಕ್ಕೆ ಮಾದರಿಯಾಗಿದೆ. ತುಳುವರು ಜಗತ್ತಿನ ಯಾವ ಮೂಲೆಗೆ ಹೋದರೂ ನಮ್ಮ ಸಂಸ್ಕೃತಿಯನ್ನು ಬಿಡುವುದಿಲ್ಲ. ಮಹಾನಗರದಲ್ಲಿ ತುಳು-ಸಂಘ ಸಂಸ್ಥೆಗಳು ಹೆಚ್ಚಿನ ಸಂಖ್ಯೆ ಯಲ್ಲಿದ್ದು ಪ್ರತಿಯೊಂದು ಸಂಘ, ಸಂಸ್ಥೆ, ನಮ್ಮ ಸಂಸ್ಕೃತಿಯನ್ನು ಯುವ ಪೀಳಿಗೆಗೆ ತಿಳಿಸುವ ಪ್ರಯತ್ನವನ್ನು ಮಾಡುತ್ತಿದೆ. ಮಹಿಳಾ ವಿಭಾಗದ ಇಂತಹ ಕಾರ್ಯಕ್ರಮಗಳು ಅಭಿನಂದನೀಯ ಎಂದರು.
ವಸಂತ ಸುವರ್ಣ ಅವರು ಮಾತನಾಡಿ, ಹೆಚ್ಚಿನ ಸಂಘ-ಸಂಸ್ಥೆಗಳು ಅಟಿ ತಿಂಗಳ ಆಚರಣೆಯನ್ನು ಮಾಡುವುದರಿಂದ ವಿವಿಧ ತಿಂಡಿ ತಿನಸುಗಳ ಹೆಸರು ಇತಿಹಾಸ ಪುಟಕ್ಕೆ ಸೇರುವುದನ್ನು ತಪ್ಪಿಸಿದ್ದಾರೆ. ಹಿಂದಿನ ದಿನಗಳಲ್ಲಿ ಮಳೆಗಾಲದಲ್ಲಿ ಬಹಳ ಕಷ್ಟದ ದಿನ. ಅದರೆ ಇಂದು ಎಲ್ಲರೂ ಕಷ್ಟದಿಂದ ಸ್ವಲ್ಪ ಹೊರ ಬಂದಿದ್ದಾರೆ. ಇಂತಹ ಕಾರ್ಯಕ್ರಮದ ಮೂಲಕ ನಮ್ಮ ತಿಂಡಿಗಳ ರುಚಿಯನ್ನು ಒಂದೇ ಸ್ಥಳದಲ್ಲಿ ಸವಿಯುವ ಅವಕಾಶ ಸಿಕ್ಕಿದೆ ಎಂದರು.
ಗಂಗಾದರ ಶೆಟ್ಟಿಗಾರ್ ಹಾಲೆ ಮರದ ಕೆತ್ತೆಯ ಮದ್ದಿನ ವಿಶೇಷತೆಯನ್ನು ತಿಳಿಸುದರೊಂದಿಗೆ ಮನೆಯಲ್ಲಿ ಮಾಡಬಹುದಾದ ಹಲವು ಮದ್ದಿನ ವಿವರಗಳನ್ನು ನೀಡಿದರು. ವಿನೋದಾ ಪದ್ಮ ಶೇಖರ್ ಪುತ್ರನ್ ಅವರು ಅಟಿ ತಿಂಗಳ ಮಹತ್ವವನ್ನು ಸವಿಸ್ತಾರವಾಗಿ ಸಭೆಗೆ ತಿಳಿಸಿದರು.
ಶಾಂತಾ ಅಮೀನ್ ಮತ್ತು ಶೋಭಾ ಶೆಟ್ಟಿ ಅವರ ಪ್ರಾರ್ಥನೆಯೊಂದಿಗೆ ಸಂಘದ ಗೌರವಾಧ್ಯಕ್ಷ ಯು. ಲಕ್ಷ್ಮಣ್ ಸುವರ್ಣ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸುನಂದಾ ಶೆಟ್ಟಿ ಮತ್ತು ಜಯಂತಿ ಶೆಟ್ಟಿ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ತಾರಾನಾಥ ಕುಂದರ್, ವಿನೋದಾ ದೇವದಾಸ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ವಿನೋದಾ ಪದ್ಮಶೇಖರ್ ಪುತ್ರನ್ ಅವರು ಕಾರ್ಯಕ್ರಮ ನಿರ್ವಹಿಸಿದರು.