Advertisement
ಬಳಿಕ ಗಡಿನಾಡಿನ ಹೆಮ್ಮೆಯ ಸಾಂಸ್ಕೃತಿಕ ಸಂಘಟನೆಯಾದ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಸಿರಿಬಾಗಿಲು ರಾಮಕೃಷ್ಣ ಮಯ್ಯ ಸಾರಥ್ಯದಲ್ಲಿ ರಾಜಾ ಸೌದಾಸ ಯಕ್ಷಗಾನ ಪ್ರದರ್ಶನ ನಡೆಯಿತು. ಹಿಮ್ಮೇಳದಲ್ಲಿ ಸಿರಿಬಾಗಿಲು ರಾಮಕೃಷ್ಣ ಮಯ್ಯ, ಚಂದ್ರಶೇಖರ ಭಟ್ ಕೊಂಕಣಾಜೆ, ಲವಕುಮಾರ ಐಲ ಹಾಗೂ ಉದಯ ಕಂಬಾರು, ಮುರಾರಿ ಭಟ್ ಪಂಜಿಗದ್ದೆ ಸಹಕರಿಸಿದರು. ಮುಮ್ಮೇಳದಲ್ಲಿ ಸುಬ್ರಾಯ ಹೊಳ್ಳ ಕಾಸರಗೋಡು, ಹರಿನಾರಾಯಣ ಭಟ್ ಎಡನೀರು, ಮಹೇಶ್ ಕುಮಾರ್ ಸಾಣೂರು, ಪೆರುವೊಡಿ ಸುಬ್ರಹ್ಮಣ್ಯ ಭಟ್, ಕಿಶನ್ ನೆಲ್ಲಿಕಟ್ಟೆ, ಶ್ರೀಗಿರಿ ಅನಂತಪುರ, ಶಶಿಧರ ಕುಲಾಲ್ ಕನ್ಯಾನ, ಪ್ರಕಾಶ ನಾಯಕ್ ನೀರ್ಚಾಲು, ಮವ್ವಾರು ಬಾಲಕೃಷ್ಣ ಮಣಿಯಾಣಿ, ಶಂಭಯ್ಯ ಭಟ್ ಕಂಜರ್ಪಣೆ, ರಾಧಾಕೃಷ್ಣ ನಾವಡ ಮಧೂರು, ಬಾಲಕೃಷ್ಣ ಸೀತಾಂಗೋಳಿ, ಡಾ| ಶ್ರುತಕೀರ್ತಿ ರಾಜ್ ಉಜಿರೆ, ಉಪಾಸನಾ ಪಂಜರಿಕೆ ಮೊದಲಾದವರು ಸಹಕರಿಸಿದರು. ರಾಕೇಶ್ ಬಳಗ ಮಲ್ಲ ವೇಷಭೂಷಣದಲ್ಲಿ ಸಹಕರಿಸಿದರು. ಗೋವಿಂದ ಭಟ್ ಬಳ್ಳಮೂಲೆ ಸ್ವಾಗತಿಸಿ, ನಿರೂಪಿಸಿದರು. ಸುಬ್ರಹ್ಮಣ್ಯ ಬಿ. ವಂದಿಸಿದರು.
Related Articles
ಗಡಿನಾಡಿನ ಕನ್ನಡಿಗರ ಸಮಸ್ಯೆಗಳ ಬಗ್ಗೆ ಸರಕಾರವನ್ನು ಬೊಟ್ಟು ಮಾಡುವ ಮೊದಲು ನಾವೆಲ್ಲಿ ಎಡವಿದ್ದೇವೆ ಎಂಬುದನ್ನು ತಿಳಿದುಕೊಳ್ಳಬೇಕು. ನಾವು ಕನ್ನಡತನ, ನಮ್ಮತನವನ್ನು ಗಟ್ಟಿಗೊಳಿಸಬೇಕು. ಶಿಕ್ಷಣ ನೀತಿಗೆ ಖಚಿತ ನಿಲುವುಗಳಿಲ್ಲ. ಎಲ್ಲವೂ ಗೊಂದಲವಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹೆತ್ತವರ ಇಂಗ್ಲಿಷ್ ವ್ಯಾಮೋಹವು ಗೊಂದಲವೇ ಸರಿ. ಪರಿ ಷತ್ತುಗಳು ಸರಕಾರದ ಅಡಿಯಾಳುಗಳಾಗದೇ ಮಾರ್ಗ ದರ್ಶಕರಾಗಬೇಕು. ಆ ಮೂಲಕ ನಾವು ತೆಗೆದುಕೊಳ್ಳುವ ನಿರ್ಣಯಗಳನ್ನು ಗೌರವಿಸಬೇಕು.
-ಡಾ| ನಾ. ಮೊಗಸಾಲೆ ನೀರ್ಚಾಲು, ಸಾಹಿತಿ
Advertisement
ಮಲಯಾಳ ಹೇರಿಕೆ ಖಂಡನೆಕೇರಳ ಸರಕಾರವು ಕನ್ನಡಿಗರ ಮೇಲೆ ಒತ್ತಾಯಪೂರ್ವಕವಾಗಿ ಮಲಯಾಳವನ್ನು ಹೇರುತ್ತಿರುವುದನ್ನು ತೀವ್ರವಾಗಿ ಖಂಡಿಸಿದ ಈ ವಿಚಾರದಲ್ಲಿ ಕರ್ನಾಟಕ ಸರಕಾರವು ಕೇರಳ ಸರಕಾರದ ಮೇಲೆ ಒತ್ತಡವನ್ನು ಹೇರಬೇಕಾಗಿದೆ. ಕೇರಳದಲ್ಲಿ ಕನ್ನಡ ಶಾಲೆಗಳಲ್ಲಿ ಮಲಯಾಳಿ ಅಧ್ಯಾಪಕರನ್ನು ನೇಮಿಸುತ್ತಿರುವುದು ಸರಿಯಲ್ಲ. ಆದುದರಿಂದ ಬರೆದಂತಹ ಪುಸ್ತ¤ಕಗಳನ್ನು ಕೊಂಡು ಓದುವ ಹವ್ಯಾಸವನ್ನು ಇಟ್ಟುಕೊಳ್ಳುವ ಮೂಲಕ ಸಾಹಿತ್ಯವನ್ನು ಉಳಿಸಬೇಕು. ಕರ್ನಾಟಕದಲ್ಲಿ ಈಗಾಗಲೇ ಕನ್ನಡ ಶಾಲೆಗಳು ಮುಚ್ಚುತ್ತಿದ್ದು, ಮುಂದಿನ ದಿನಗಳಲ್ಲಿ ಕನ್ನಡ ಶಾಲೆಗಳಿಲ್ಲದ ಪರಿಸ್ಥಿತಿ ನಿರ್ಮಾಣವಾಗಲಿದೆ.
– ಹರಿಕೃಷ್ಣ ಪುನರೂರು, ಕಸಾಪ ಮಾಜಿ ಅಧ್ಯಕ್ಷ