Advertisement

ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದ್ದ ಮೊಸಳೆ ಸೆರೆ

08:29 PM Jul 12, 2021 | Girisha |

ಮುದ್ದೇಬಿಹಾಳ: ಹಡಲಗೇರಿ ಗ್ರಾಮದ ಕೆರೆಯಲ್ಲಿ ಅಡಗಿಕೊಂಡು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದ್ದ ಮೊಸಳೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಮಾರ್ಗದರ್ಶನದಲ್ಲಿ ಮೊಸಳೆ ಪರಿಣಿತರು ರವಿವಾರ ಸೆರೆ ಹಿಡಿದಿದ್ದಾರೆ. ಕೆಲ ದಿನಗಳ ಹಿಂದೆ ಗ್ರಾಮಸ್ಥರು ಕೆರೆಯಲ್ಲಿ ಮೊಸಳೆ ಸೇರಿದ್ದನ್ನು ಕಂಡಿದ್ದರು.

Advertisement

ಇದನ್ನು ಹಿಡಿಯಲು ಅಂದಿನಿಂದಲೇ ಬಲೆ ಬೀಸಲಾಗಿತ್ತು. ಮೊಸಳೆ ಇದೆ ಎನ್ನುವ ಎಚ್ಚರಿಕೆ ಫಲಕ ಗ್ರಾಪಂನವರು ಕೆರೆ ಬಳಿ ಅಳವಡಿಸಿದ್ದರು. ಕೆರೆಯಲ್ಲಿ ನೀರು ಕಡಿಮೆ ಆಗಿರುವುದನ್ನು ಅರಿತು ತಜ್ಞರನ್ನು ಕರೆಸಲಾಗಿತ್ತು. ಮೊದಲೇ ಹಾಕಿದ್ದ ಬಲೆಗೆ ಮೊಸಳೆ ಸಿಕ್ಕಿದ್ದನ್ನು ಅರಿತು ತೆಪ್ಪದ ನೆರವಿನಲ್ಲಿ ಅದರ ಬಳಿ ತೆರಳಿ ಹರಸಾಹಸದಿಂದ ಮೊಸಳೆ ಕಟ್ಟಿ ಹಾಕಿ ದಂಡೆಗೆ ತರಲಾಯಿತು.

ಮೊಸಳೆ ಹಿಡಿಯುವ ಪರಿಣಿತರಾದ ನಾಗೇಶ ಮೋಪಗಾರ, ಸುರೇಶ ಮೋಪಗಾರ, ಶಿವು ಮೋಪಗಾರ, ಮಂಜು, ಸುಭಾಸ, ಯಮನೂರಿ, ಮೂರ್ತಿ, ಮುದುಕು ಕಿರಶ್ಯಾಳ, ಎಂ. ಮಂಜು, ಶ್ರೀಶೈಲ ಮನಗೂರ, ಲೋಹಿತ ಮುದ್ದೇಬಿಹಾಳ, ಹೃತಿಕ ಮುದ್ದೇಬಿಹಾಳ ಇತರರು ತಂಡದ ಮುಖಂಡ ಮೌನೇಶ ಮೋಪಗಾರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದರು. ಮುದ್ದೇಬಿಹಾಳ ಬಿಜೆಪಿ ಧುರೀಣ ಪರಶುರಾಮ ನಾಲತವಾಡ ಸುದ್ದಿಗಾರರೊಂದಿಗೆ ಮಾತನಾಡಿ, ಮೊಸಳೆ ಕಂಡು ಬಂದ ದಿನದಿಂದ ಬಲೆ ಹಾಕಿ ಸೆರೆ ಹಿಡಿಯಲು ಹಗಲು-ರಾತ್ರಿ ಕಾವಲು ಕಾಯಲಾಗುತ್ತಿತ್ತು.

ಮೊಸಳೆ ಬಲೆಗೆ ಬಿದ್ದಿದ್ದನ್ನು ತಿಳಿದು ಕಾರ್ಯಾಚರಣೆ ನಡೆಸಿ ಸೆರೆ ಹಿಡಿಯಲಾಗಿದೆ ಎಂದರು. ಎಆರ್‌ಎಫ್‌ಒ ಮಲ್ಲಪ್ಪ ತೇಲಿ ಮಾತನಾಡಿ, ಆಲಮಟ್ಟಿ ಜಲಾಶಯದ ಕೃಷ್ಣಾ ನದಿ ಹಿನ್ನೀರಿನಲ್ಲಿ ಮೊಸಳೆಯನ್ನು ಸುರಕ್ಷಿತವಾಗಿ ಬಿಡಲಾಗುತ್ತದೆ. ಮೊಸಳೆ ಹಿಡಿಯಲು ಧೈರ್ಯದಿಂದ ಮುಂದೆ ಬಂದ ಪರಿಣಿತರ ತಂಡವನ್ನು ಅರಣ್ಯ ಇಲಾಖೆ ವತಿಯಿಂದ ಶ್ಲಾಘಿಸುವುದಾಗಿ ತಿಳಿಸಿದರು. ಪಿಡಿಒ ಶೋಭಾ ಮುದಗಲ್ಲ ಮಾತನಾಡಿ, ಪರಶುರಾಮ ನಾಲತವಾಡ ಪ್ರಯತ್ನದಿಂದ ಬಂಧುಗಳು ಮೊಸಳೆ ಹಿಡಿಯುವಲ್ಲಿ ಪಳಗಿದ್ದರಿಂದ ಈ ಕೆಲಸ ಯಶಸ್ವಿಯಾಗಿದೆ.

ಇದಕ್ಕಾಗಿ ಪಂಚಾಯಿತಿ ವತಿಯಿಂದ ಅವರನ್ನು ಅಭಿನಂದಿಸುತ್ತೇವೆ ಎಂದರು. ಕಾರ್ಯಾಚರಣೆ ನಂತರ ಮೊಸಳೆ ಹಿಡಿದ ತಂಡವನ್ನು ಪಂಚಾಯಿತಿ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಅರಣ್ಯ ರಕ್ಷಕ ಈಶ್ವರ ಹಿರೇಮಠ, ಗ್ರಾಮಸ್ಥರಾದ ವಿಠuಲ ಹರಿಂದ್ರಾಳ, ಭೀಮಣ್ಣ ಹರಿಂದ್ರಾಳ, ಮಾಳಪ್ಪ ಹರಿಂದ್ರಾಳ, ಚಿನ್ನಪ್ಪಗೌಡ ನಾಡಗೌಡ ಸೇರಿದಂತೆ ಗ್ರಾಪಂ ಸದಸ್ಯರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next