ವಿಜಯಪುರ: ಕೋವಿಡ್ ಸಂಕಷ್ಟ ಸಂದರ್ಭದಲ್ಲಿ ಕೊರೊನಾ ವಾರಿಯರ್ಸ್ ಸಲ್ಲಿಸುತ್ತಿರುವ ಸೇವೆ ಶ್ಲಾಘನೀಯ ಎಂದು ನಾಗಠಾಣ ಶಾಸಕ ಡಾ| ದೇವಾನಂದ ಚವ್ಹಾಣ ಹೇಳಿದರು. ಮಂಗಳವಾರ ನಾಗಠಾಣ ಕ್ಷೇತ್ರ ವ್ಯಾಪ್ತಿಗೆ ಸೇರಿದ ನಗರದ 16ನೇ ವಾಡ್ ìನ ಯೋಗಾಪುರ ಕಾಲೋನಿಯಲ್ಲಿ ಆಶಾ, ಅಂಗನವಾಡಿ, ಆರೋಗ್ಯ ಕಾರ್ಯಕರ್ತೆಯರು, ಪೌರ ಕಾರ್ಮಿಕರು ಹಾಗೂ ವಾರ್ಡ್‌ನ ಬಡ ನಿರ್ಗತಿಕರಿಗೆ ಆಹಾರ ಧಾನ್ಯದ ಕಿಟ್, ಮಾಸ್ಕ್, ಸ್ಯಾನಿಟೈಸರ್ ವಿತರಿಸಿ ಅವರು ಮಾತನಾಡಿದರು.
ಮೊದಲ ಅಲೆಗಿಂತ ಭೀಕರವಾಗಿರುವ ಕೋವಿಡ್ ಎರಡನೇ ಅಲೆ ಸಮಾಜದಲ್ಲಿನ ಬಹುತೇಕ ಕುಟುಂಬಗಳನ್ನು ಒಂದಿಲ್ಲ ಒಂದು ರೀತಿಯಲ್ಲಿ ಬಾ ಧಿಸಿದೆ. ಸಮಾಜದ ಆರೋಗ್ಯ ರಕ್ಷಣೆಯಲ್ಲಿ ನಿಮ್ಮನ್ನು ಸಮರ್ಪಿಸಿಕೊಂಡಿರು ನೀವು ಎಂಥ ಪರಿಸ್ಥಿತಿಯಲ್ಲೂ ಎದೆಗುಂದದೇ ಸೇವೆ ಮಾಡುತ್ತಿದ್ದೀರಿ, ಯಾವುದೇ ಕಾರಣಕ್ಕೂ ಯಾರು ಆತ್ಮಸ್ಥೈರ್ಯ ಕಳೆದುಕೊಳ್ಳಬೇಡಿ ಎಂದರು.
ನೀವು ಸಮಾಜಕ್ಕೆ ನೀಡುತ್ತಿರುವ ಸೇವೆಗೆ ಪ್ರತಿಯಾಗಿ ನಾನು ಕೈಲಾದ ಮಟ್ಟಿಗೆ ನಿಮಗೆಲ್ಲ ಆಹಾರ ಧಾನ್ಯದ ಕಿಟ್, ಮೆಡಿಕಲ್ ಕಿಟ್ ನೀಡಿ ಸಹಾಯ ಮಾಡುತ್ತಿರುವೆ. ಪ್ರತಿಯೊಬ್ಬರೂ ಕೊರೊನಾ ಮುಕ್ತ ಸಮಾಜ ನಿರ್ಮಾಣಕ್ಕೆ ಸಹಕಾರ ನೀಡಬೇಕು. ಸರಕಾರದ ನಿಯಮ ಪಾಲಿಸಿ ನಿಮ್ಮ ಕುಟುಂಬ ಹಾಗೂ ಸಮಾಜವನ್ನು ಕೊರೊನಾ ಮುಕ್ತ ಮಾಡಬೇಕಿದ್ದು, ಇದಕ್ಕಾಗಿ ಸಮಾಜದ ಎಲ್ಲರೂ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
ಕೋವಿಡ್ ವಾರಿಯರ್ಸ್‌ಗೆ ಸಮಾಜದಲ್ಲಿರುವ ಎಲ್ಲರೂ ಮುಕ್ತಸೇವೆ ಸಲ್ಲಿಸಲು ಸಹಕಾರ ನೀಡಬೇಕು. ಅಗತ್ಯದ ಸಂದರ್ಭ ಹೊರತಾಗಿ ಅನಗತ್ಯವಾಗಿ ಯಾರೂ ಹೊರಗಡೆ ಬರಬಾರದು. ಅಗತ್ಯ ಬಿದ್ದಲ್ಲಿ ಮನೆಯಿಂದ ಹೊರಗೆ ಬರುವಾಗ ಮಾಸ್ಕ್ ಧರಿಸಬೇಕು, ಸ್ಯಾನಿಟೈಸರ್ ಬಳಕೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಕಿವಿಮಾತು ಹೇಳಿದರು.
ತಹಶೀಲ್ದಾರ್ ಸಿದ್ದರಾಯ ಭೋಸಗಿ, ತಾಲೂಕು ಆರೋಗ್ಯಾಧಿ ಕಾರಿ ಡಾ| ಕವಿತಾ ದೊಡ್ಡಮನಿ, ಸಿಡಿಪಿಒ ಬಸವರಾಜ ಜಗವಾರ, ಡಾ|ಬಾಬುಗೌಡ ಕುಚನೂರ ಮಾತನಾಡಿದರು. ವೈದ್ಯಾ ಧಿಕಾರಿಗಳಾದ ಡಾ| ಜಯಶ್ರೀ ಮಸಳಿ, ಡಾ| ಮದಿಹಾ ಇಟಗಿ, ಡಿ.ಎಚ್. ಜಾಧವ, ಮಾನಸಿಂಗ್ ರಜಪೂತ, ಚನ್ನಪ್ಪ ಮರಗುದ್ದಿ, ಕಲ್ಲಪ್ಪ ಹಿಪ್ಪರಗಿ, ದಾನೇಶ ಅವಟಿ, ಮಲ್ಲಿಕಾರ್ಜುನ ಹಿಪ್ಪರಗಿ, ಗುಲಾಬ ಚವ್ಹಾಣ, ರವಿ ಚವ್ಹಾಣ, ಜಯಕಾಂತ, ದೂಳಪ್ಪ, ಶಿವು ಸೇರಿದಂತೆ ಕಾಲೋನಿ ಜನರು ಇದ್ದರು.