ವಯನಾಡ್ (ಕೇರಳ): ಒಂದು ಕಾಲದಲ್ಲಿ ಕೇರಳದಲ್ಲಿ ಹಸುರು ವಲಯಕ್ಕೆ ಸೇರಿದ್ದ ವಯನಾಡ್‌ನಲ್ಲಿ ಈಗ ಕೋವಿಡ್ ಬಾಧಿತರ ಸಂಖ್ಯೆ 21.
ಇದು ಇಡೀ ರಾಜ್ಯದಲ್ಲೇ ಗರಿಷ್ಠ! ಇದಕ್ಕೆ ಕಾರಣವಾಗಿದ್ದು ತಮಿಳುನಾಡಿನ ಕೋಯೆಂಬೇಡು ಮಾರುಕಟ್ಟೆಯಿಂದ ಎಪ್ರಿಲ್ 26ಕ್ಕೆ ಕೇರಳಕ್ಕೆ ಆಗಮಿಸಿದ್ದ ಟ್ರಕ್ ಚಾಲಕರೊಬ್ಬರು.
ಎಪ್ರಿಲ್ 28ಕ್ಕೆ ಅವರನ್ನು ಪರೀಕ್ಷೆ ಗೊಳಪಡಿಸಲಾಯಿತು. ಮೇ 2ಕ್ಕೆ ಅವರಿಗೆ ಕೋವಿಡ್ ಇರುವುದು ಖಚಿತವಾಯಿತು.
ಅವರಿಗೆ ಮನೆಯಲ್ಲೇ ಪ್ರತ್ಯೇಕವಾಗಿರಲು ಸೂಚಿಸಲಾಯಿತು. ಆದರೂ ಅವರಿಂದ ಅವರ ಪತ್ನಿ, ತಾಯಿ, ಮಗಳು, ಅಳಿಯ, ಮಗ, ಮೊಮ್ಮಗ ಅಷ್ಟೂ ಜನರಿಗೆ ಈ ಮಾರಕ ಸೋಂಕು ಹರಡಿದೆ.
ಇದರ ಪರಿಣಾಮ ಆತನ ಸಂಪರ್ಕಕ್ಕೆ ಬಂದ ಎಲ್ಲರನ್ನೂ ಪತ್ತೆ ಹಚ್ಚಿ, ಅವರಿಗೆ ಚಿಕಿತ್ಸೆ ಕೊಡಿಸುವ ಕೆಲಸ ಮುಂದುವರಿದಿದೆ. ಇದೀಗ ಅನ್ಯರಾಜ್ಯಗಳಿಂದ ಬರುವ ಟ್ರಕ್ ಚಾಲಕರಿಗೆ ಕ್ವಾರಂಟೈನ್ ನಿಯಮಗಳನ್ನು ಬಿಗಿಗೊಳಿಸಲಾಗಿದೆ.